ETV Bharat / city

ಅನ್​ಲಾಕ್​​ ನಲ್ಲೂ‌ ಕೊರೊನಾ ನಿಯಂತ್ರಣಕ್ಕೆ ಬಿಬಿಎಂಪಿ ರಣತಂತ್ರ: ಹೊಸ ಆದೇಶದಲ್ಲಿ ಏನಿದೆ ಗೊತ್ತಾ?

author img

By

Published : Jun 14, 2021, 10:41 PM IST

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಎರಡನೇ ಅಲೆ ಚಾಲ್ತಿಯಲ್ಲಿದ್ದು, ಕೋವಿಡ್ -19 ಸೋಂಕು ಪ್ರಕರಣಗಳು ದಿನೇ ದಿನೇ ಇಳಿಕೆ ಯಾಗುತ್ತಿರುವುದು ವರದಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸೋಮವಾರದಿಂದ ಮೊದಲನೇ ಹಂತದ ಅನ್ಲಾಕ್ ಘೋಷಿಸಿದೆ.

bbmp-realeased-unlock-guidelines
ಬಿಬಿಎಂಪಿ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್-19 ಎರಡನೇ ಅಲೆಯ ಪ್ರಕರಣಗಳು ಇಳಿಕೆ ಮತ್ತು ಅನ್‌ಲಾಕ್ ನಿಯಂತ್ರಿಸಲು ಪಾಲಿಕೆ ಮುಖ್ಯ ಆಯುಕ್ತ ಗೌರವ ಗುಪ್ತಾ ಸೂಚನೆ ನೀಡಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಎರಡನೇ ಅಲೆ ಚಾಲ್ತಿಯಲ್ಲಿದ್ದು, ಕೋವಿಡ್ -19 ಸೋಂಕು ಪ್ರಕರಣಗಳು ದಿನೇ ದಿನೇ ಇಳಿಕೆಯಾಗುತ್ತಿರುವುದು ವರದಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸೋಮವಾರದಿಂದ ಮೊದಲನೇ ಹಂತದ ಅನ್ಲಾಕ್ ಘೋಷಿಸಿದೆ.

ಈ ಸಂಬಂಧ ಕೋವಿಡ್ -19 ಸೋಂಕು ಪ್ರಕರಣಗಳನ್ನು ನಿಯಂತ್ರಿಸುವ ಸಲುವಾಗಿ, ವಲಯ/ಪ್ರಾಥಮಿಕ ಆರೋಗ್ಯ ಕೇಂದ್ರ/ ವಾರ್ಡ್ ಮಟ್ಟದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗ್ತಿದೆ.

ಏನೆಲ್ಲ ಕ್ರಮ ಜಾರಿ?

  1. ಸೋಂಕಿತರ ಪ್ರಾಥಮಿಕ ಹಂತದ ಸಂಪರ್ಕಿತರನ್ನು ಗುರುತಿಸುವುದು. ಸೋಂಕಿತರು ಕಂಡು ಬಂದಲ್ಲಿ ಕಂಟೈನ್‌ಮೆಂಟ್ ಮತ್ತು ಬಫರ್ ವಲಯಗಳನ್ನು ಗುರುತಿಸಿ ನಂತರ ಹೆಚ್ಚಿನ ಕೋವಿಡ್-19 ಪರೀಕ್ಷೆ ನಡೆಸಬೇಕು.
  2. ಕಂಟೈನೈಂಟ್ ವಲಯಗಳಲ್ಲಿ ಸಾರ್ವಜನಿಕರ ಚಲನ ವಲನಗಳ ಬಗ್ಗೆ ನಿಗಾವಹಿಸಿ, ಕಡ್ಡಾಯವಾಗಿ ನಿರ್ವಹಿಸಬೇಕಾಗುತ್ತೆ.
  3. ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರಿಗೆ ಕಡ್ಡಾಯವಾಗಿ ಕೋವಿಡ್-19 ಪರೀಕ್ಷೆಯನ್ನು ನಡೆಸಬೇಕು.
  4. ಸೋಂಕು ಕಂಡು ಬಂದಲ್ಲಿ ಕಡ್ಡಾಯವಾಗಿ ಫಿಜಿಕಲ್ ಟ್ರಯಾಜ್ಲಿಂಗ್ ಹಮ್ಮಿಕೊಂಡು ನಂತರ ಆಸ್ಪತ್ರೆಗಳಿಗೆ ಸಿಹೆಚ್‌ಬಿಎಂಎಸ್ ಪೋರ್ಟಲ್ ಮುಖಾಂತರ ದಾಖಲಾತಿ ಮಾಡಬೇಕು.
  5. ಹೋಂ ಐಸೋಲೇಷನ್‌ನಡಿಯಲ್ಲಿ ಚಿಕಿತ್ಸೆ ಪಡೆಯುವ ಸೋಂಕಿತರ ಮನೆಯಲ್ಲಿ ಉತ್ತಮ ಗಾಳಿ ವ್ಯವಸ್ಥೆ, ಪ್ರತ್ಯೇಕ ಕೊಠಡಿ ಮತ್ತು ಪ್ರತ್ಯೇಕ ಶೌಚಾಲಯ ಹೊಂದಿರಬೇಕು ಮತ್ತು ಸೋಂಕಿತರು ಮನೆಯ ಇತರ ವ್ಯಕ್ತಿಗಳಿಂದ ದೂರವಿರುವ ಖಾತ್ರಿಪಡಿಸಿಕೊಳ್ಳಬೇಕು. (ವಿಶೇಷವಾಗಿ ವಯಸ್ಸಾದವರು, ಅಧಿಕ ರಕ್ತದೊತ್ತಡ, ಹೃದಯ ರಕ್ತನಾಳದ ಬಾಯಿಲೆ, ಮೂತ್ರಪಿಂಡ ಖಾಯಿಲೆ ಮತ್ತು ಕೋಮಾರ್ಬಿಡ್ ಪರಿಸ್ಥಿತಿ ಇರುವವರು)
  6. ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಹೋಂ ಐಸೋಲೇಷನ್‌ನಲ್ಲಿರುವ ಪ್ರತೀ ಸೋಂಕಿತರ ಮನೆ ಮನೆಗೂ ಭೇಟಿ ನೀಡಿ ಮೇಲ್ವಿಚಾರಣೆ ನಡೆಸಿ, ಮೆಡಿಕಲ್ ಕಿಟ್‌ನ್ನು ವಿತರಿಸಬೇಕು.
  7. ಅನ್‌ಲಾಕ್ ಸಂಬಂಧ ಪಾಲಿಕೆಯ ವ್ಯಾಪ್ತಿಯಲ್ಲಿ ವಲಸೆ ಬಂದಿರುವ ಕಟ್ಟಡ ಕಾರ್ಮಿಕರು / ಬಸ್ ನಿಲ್ದಾಣ / ರೈಲ್ವೆ ನಿಲ್ದಾಣ / ಗಾರ್ಮೆಂಟ್ಸ್ ಕಾರ್ಖಾನೆಗಳು ಮತ್ತು ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ನಿವಾಸಿಗಳನ್ನು ಗುರ್ತಿಸಿ, ಹೆಚ್ಚಿನ ಕೋವಿಡ್-19 ಪರೀಕ್ಷೆಗಳನ್ನು ನಡೆಸುವುದು. 24 ಗಂಟೆಯೊಳಗೆ ಫಲಿತಾಂಶ ಪ್ರಕಟಿಸುವುದು.
  8. ಹಾಗೇ ಇವರಿಗೆ ಕೋವಿಡ್ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕು.
  9. 45 ವರ್ಷ ಮೇಲ್ಪಟ್ಟ ಅರ್ಹ ಫಲಾನುಭವಿಗಳನ್ನು ಗುರುತಿಸಲು ಮನೆ ಮನೆ ಸಮೀಕ್ಷೆ ನಡೆಸಿ, ಮೊದಲನೇ ಮತ್ತು ಎರಡನೇ ಡೋಸ್‌ನ ಲಸಿಕೆಯನ್ನು ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕಾಗುತ್ತೆ.
  10. ಅಪಾರ್ಟ್ಮೆಂಟ್ ನಿವಾಸಿ, ರೆಸಿಡೆನ್ಸಿ ನಿವಾಸಿ ಸ್ಥಳದಲ್ಲೂ ಸೋಂಕು ಉಲ್ಬಣಗೊಳ್ಳುವ ಸಾಧ್ಯತೆ ಇದ್ದು, ಹೀಗಾಗಿ ಹೆಚ್ಚಿನ ಕೋವಿಡ್ ಪರೀಕ್ಷೆ, ಲಸಿಕೆ ನೀಡುವುದು.
  • ಪಾರ್ಕ್ ಗಳಲ್ಲಿ ವಾಕಿಂಗ್ ಜಾಗಿಂಗ್ ಮಕ್ಕಳಿಗೆ ಅವಕಾಶವಿಲ್ಲ: ರಾಜಧಾನಿಯಲ್ಲಿ ಅನ್ಲಾಕ್ ಆಗಿದ್ದರೂ ಸಹ, ಮುಂದಿನ ಆದೇಶದವರೆಗೆ ಉದ್ಯಾನವನಗಳ ಒಳಗೆ ಇರುವ ವ್ಯಾಯಾಮ ಉಪಕರಣಗಳನ್ನು ಮುಚ್ಚಲಾಗಿದೆ. ಉದ್ಯಾನವನಗಳಲ್ಲಿನ ಯಾವುದೇ ಕೂಟ ಮಾಡುವಂತಿಲ್ಲ. ಉದ್ಯಾನವನಗಳಲ್ಲಿ ಸಾಕಷ್ಟು ಸಾಮಾಜಿಕ ದೂರವನ್ನು ಕಾಪಾಡಿಕೊಂಡು ವಾಯುವಿಹಾರ ಮಾಡಬಹುದು. ಮಕ್ಕಳ ಓಡಾಟವನ್ನ ಉದ್ಯಾನವನಗಳಲ್ಲಿ ಇತರ ಪ್ರದೇಶಗಳನ್ನು ಆಡುವುದನ್ನ ನಿಷೇಧಿಸಲಾಗಿದೆ.
  • ಫೇಸ್ ಮಾಸ್ಕ್ ಇಲ್ಲದೇ ಆಟೋ ಪ್ರಯಾಣಿಕರನ್ನ ಕೂರಿಸುವಂತಿಲ್ಲ : ಎಲ್ಲಾ ಟ್ಯಾಕ್ಸಿ ಮತ್ತು ಆಟೋ ರಿಕ್ಷಾ ಚಾಲಕರಿಗೆ ಲಸಿಕೆ ನೀಡುವಂತೆ ಪ್ರೋತ್ಸಾಹಿಸುವುದು.‌ ಪ್ರಯಾಣಿಕರನ್ನ ಕರೆದೊಯ್ಯುವ ಮುನ್ನ ಸ್ಯಾನಿಟೈಸ್ ಮಾಡುವುದು. ಯಾವುದೇ ಸಮಯದಲ್ಲೂ ಗರಿಷ್ಠ 2 ಪ್ರಯಾಣಿಕರನ್ನು ಅನುಮತಿಸಲಾಗಿದೆ. ಪ್ರಯಾಣಿಕರು ಮತ್ತು ಚಾಲಕರ ನಡುವೆ ಪರದೆಗಳನ್ನು ಹಾಕುವುದು.‌ ಎಲ್ಲಾ ಚಾಲಕರು ಸವಾರಿಯ ಸಮಯದಲ್ಲಿ ಪ್ರತಿ ಬಾರಿ ಫೇಸ್ ಮಾಸ್ಕ್ ಬಳಸುವುದು ಹಾಗೂ ಫೇಸ್ ಮಾಸ್ಕ್ ಧರಿಸದೇ ಇರುವ ಯಾವುದೇ ಪ್ರಯಾಣಿಕರನ್ನು ಹತ್ತಿಸದೇ ಇರುವುದು.
  • ಹಾಸ್ಪೆಲ್ ವ್ಯವಸ್ಥೆ : ಪಿ.ಜಿ ಹಾಗೂ ಹಾಸ್ಟೆಲ್ ಸೌಕರ್ಯಗಳ ಏಕೈಕ ಜವಾಬ್ದಾರಿಯು ಮಾಲೀಕರು, ವ್ಯವಸ್ಥಾಪಕರದ್ದಾಗಿದೆ. ವಾಸಿಸುವ ಸ್ಥಳ (ಅಡಿಗೆ ಹೊರತುಪಡಿಸಿ, 110 ಚದರ ಅಡಿ ವಿಸ್ತೀರ್ಣದ ಶೌಚಾಲಯ / ಸ್ನಾನಗೃಹ) 2 ಕ್ಕಿಂತ ಹೆಚ್ಚು ನಿವಾಸಿಗಳಿಗೆ ಯಾವುದೇ ಸ್ಥಳಾವಕಾಶವಿಲ್ಲ. ಯಾವುದೇ ಸಮಯದಲ್ಲಿ, ನಿವಾಸಿಗಳನ್ನು ಹಾಸ್ಟೆಲ್ / ಪಿಜಿಗಳಿಂದ ಬಲವಂತವಾಗಿ ಹೊರಹಾಕಲಾಗುವಂತಿಲ್ಲ. ಪರ್ಯಾಯ ವ್ಯವಸ್ಥೆ ಮಾಡಲು ಅವರಿಗೆ ಸಾಕಷ್ಟು ಸಮಯವನ್ನು ನೀಡುವುದು.

ಇನ್ನು ಕೆಲಸ ಮಾಡುವ ಜಾಗ, ಕೈಗಾರಿಕಾ ಪ್ರದೇಶಗಳಲ್ಲಿ ಉದ್ಯೋಗಿಗಳಿಗೆ ಜ್ವರ, ಕೆಮ್ಮು, ಶೀತ ಅಥವಾ ಉಸಿರಾಟದ ತೊಂದರೆಯ ಲಕ್ಷಣಗಳನ್ನು ಕಂಡು ಬಂದರೆ ರಜೆ ನೀಡಬೇಕು.
ತ್ವರಿತವಾಗಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಸಲಹೆ ನೀಡಬೇಕು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.