ETV Bharat / city

ಸಾಕ್ರಾ ಆಸ್ಪತ್ರೆ ವಿರುದ್ಧ ಡಿಸಾಸ್ಟರ್ ಮ್ಯಾನೇಜ್​ಮೆಂಟ್ ಕಾಯ್ದೆಯಡಿ ಎಫ್​ಐಆರ್​ - ಸಾಕ್ರಾ ಆಸ್ಪತ್ರೆ ವಿರುದ್ಧ ಬಿಬಿಎಂಪಿ ದೂರು

ಸಾಕ್ರಾ ಆಸ್ಪತ್ರೆ ಹಾಸಿಗೆಗಳ ಮಾಹಿತಿ ಮತ್ತು ಕೋವಿಡ್​​ ರೋಗಿಗಳು ಪಾವತಿಸಿದ ಬಿಲ್​​ ವಿವರ ನೀಡದೆ ಸರ್ಕಾರದ ಆದೇಶ ಮತ್ತು ಕಾಯ್ದೆ ಉಲ್ಲಂಘಿಸಿದ ಪರಿಣಾಮ ಬಿಬಿಎಂಪಿ, ಮಾರತಹಳ್ಳಿ ಪೊಲೀಸ್​​ ಠಾಣೆಯಲ್ಲಿ ಆಸ್ಪತ್ರೆಯ ವಿರುದ್ಧ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

bbmp-registered-complaint-against-sakra-world-hospital
ಬಿಬಿಎಂಪಿ
author img

By

Published : Aug 1, 2020, 10:25 PM IST

ಬೆಂಗಳೂರು: ನಗರದ ದೇವರ ಬೀಸನಹಳ್ಳಿಯಲ್ಲಿರುವ ಸಾಕ್ರಾ ಆಸ್ಪತ್ರೆ ವಿರುದ್ಧ ಮಾರತ್​ ಹಳ್ಳಿ ಪೊಲೀಸ್ ಠಾಣೆಯಲ್ಲಿ, ಡಿಸಾಸ್ಟರ್ ಮ್ಯಾನೇಜಮೆಂಟ್ ಆಕ್ಟ್ ಅಡಿ ಬಿಬಿಎಂಪಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಜುಲೈ 29 ರಂದು ಸರ್ಕಾರದ ಅಧಿಕಾರಿಗಳಾದ ಉಮಾ, ಸುನೀಲ್ ಅಗರ್ವಾಲ್ ಹಾಗೂ ನೋಡಲ್ ಅಧಿಕಾರಿ ಎಚ್.ಡಿ. ಚೆನ್ನಕೇಶವ ಸಾಕ್ರಾ ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆಯಲ್ಲಿ ಲಭ್ಯ ಇರುವ ಒಟ್ಟು ಹಾಸಿಗೆಗಳಲ್ಲಿ ತುರ್ತು ಚಿಕಿತ್ಸೆಗೆ ಬೇಕಾಗಿರುವ ಹಾಸಿಗೆಗಳನ್ನು ಹೊರತುಪಡಿಸಿ, ಇನ್ನುಳಿದ ಹಾಸಿಗೆಗಳ ಶೇಕಡಾ ಐವತ್ತರಷ್ಟು ಹಾಸಿಗೆಯನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಡಬೇಕು ಎಂಬುದನ್ನು ತಿಳಿಸಿ, ಇದರ ಅಂಕಿಅಂಶ ಹಾಗೂ 23-06-20 ರಿಂದ 29-07-20 ರವರೆಗೆ ಕೋವಿಡ್ ರೋಗಿಗಳು ಪಾವತಿಸಿದ ಬಿಲ್ ವಿವರದ ಮಾಹಿತಿ ನೀಡುವಂತೆ ಆಸ್ಪತ್ರೆ ಮುಖ್ಯಸ್ಥರಿಗೆ ಕೇಳಲಾಗಿದೆ.

BBMP registered complaint against Sakra World Hospital
ಎಫ್​​ಐಆರ್​ ಪ್ರತಿ

ಆದರೆ ಆಸ್ಪತ್ರೆ ಆಡಳಿತ ಮಂಡಳಿ ಮಾಹಿತಿ ನೀಡದ ಹಿನ್ನೆಲೆ ಸರ್ಕಾರದ ಆದೇಶ ಹಾಗೂ ಕಾಯ್ದೆ ಉಲ್ಲಂಘಿಸಿದ ಪರಿಣಾಮ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.