ETV Bharat / city

ಕಸ ನಿರ್ವಹಣೆ ಕುರಿತು ಸರಣಿ ಸಭೆ: ಹಲವು ಸುಧಾರಣೆಗಳೊಂದಿಗೆ ಹೊಸ ಟೆಂಡರ್ ಜಾರಿ

ಬಿಬಿಎಂಪಿ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡುತ್ತಿದ್ದು, ಎಲ್ಲಾ ನಾಗರಿಕರು ಆ್ಯಪ್ ಡೌನ್​ಲೋಡ್​ ಮಾಡಿಕೊಂಡು ಕಸದ ವಾಹನದ ಲೈವ್ ಮಾಹಿತಿ ಪಡೆಯಬಹುದು. ಕಸದ ವಾಹನ ನಮ್ಮ ಮನೆಗೆ ಎಷ್ಟು ಗಂಟೆಗೆ ಬರುತ್ತದೆ ಎಂದು ತಿಳಿಯಬಹುದು. ಒಂದು ವೇಳೆ ಬರದಿದ್ದರೆ, ದೂರು ಕೊಡಬಹುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

BBMP Officials Series Meeting on Garbage Management
ಕಸ ನಿರ್ವಹಣೆ ಕುರಿತು ಸರಣಿ ಸಭೆ: ಹಲವು ಸುಧಾರಣೆಗಳ ಜೊತೆ ಹೊಸ ಟೆಂಡರ್ ಜಾರಿ
author img

By

Published : Sep 17, 2020, 6:43 PM IST

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತ್ಯೇಕ ಕಸ ಸಂಗ್ರಹ ಯೋಜನೆ ಈಗಾಗಲೇ 38 ವಾರ್ಡ್​ಗಳಲ್ಲಿ ಜಾರಿಯಾಗಿದೆ. 78 ವಾರ್ಡ್​ಗಳಲ್ಲಿ ಟೆಂಡರ್​ದಾರರಿಗೆ ಕೆಲಸ ಆರಂಭಕ್ಕೆ ಸ್ವೀಕೃತಿ ಪತ್ರ ನೀಡಲಾಗಿದ್ದು, ಶೀಘ್ರವಾಗಿ ಕೆಲಸ ಆರಂಭಿಸಲು ತಿಳಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಕಸ ನಿರ್ವಹಣೆ ಕುರಿತು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸಭೆ ಬಳಿಕ ಮಾತನಾಡಿದ ಆಯುಕ್ತ ಮಂಜುನಾಥ್ ಪ್ರಸಾದ್, ನಗರದಲ್ಲಿ ಮೂರು ತಿಂಗಳಲ್ಲಿ ಶೇಕಡಾ 100ರಷ್ಟು ಕಸ ವಿಂಗಡನೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಬಿಬಿಎಂಪಿ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡುತ್ತಿದ್ದು, ಎಲ್ಲಾ ನಾಗರಿಕರೂ ಆ್ಯಪ್ ಡೌನ್​ಲೋಡ್​ ಮಾಡಿಕೊಂಡು ಕಸದ ವಾಹನದ ಲೈವ್ ಮಾಹಿತಿ ಪಡೆಯಬಹುದು. ಕಸದ ವಾಹನ ನಮ್ಮ ಮನೆಗೆ ಎಷ್ಟು ಹೊತ್ತಿಗೆ ಬರುತ್ತದೆ ಎಂದು ತಿಳಿಯಬಹುದು. ಒಂದು ವೇಳೆ ಬರದಿದ್ದರೆ, ದೂರು ಕೊಡಬಹುದು ಎಂದರು.

ಹಸಿ ಕಸವನ್ನು ವಾಸನೆ ಬಾರದಂತೆ ವೈಜ್ಞಾನಿಕವಾಗಿ ಹಾಗೂ ಸ್ಥಳೀಯವಾಗಿ ಕಾಂಪೋಸ್ಟಿಂಗ್ ಮಾಡಲು ಕ್ರಮವಹಿಸಲಾಗುವುದು. ಕಸಕ್ಕೆ ಸಂಬಂಧಿಸಿದಂತೆ ಶಾಲಾ-ಕಾಲೇಜು ಮಕ್ಕಳ ಜವಾಬ್ದಾರಿ ಏನೆಂದು ಬೇರೆ-ಬೇರೆ ಭಾಷೆಗಳಲ್ಲಿ ಕೈಪಿಡಿ ಸಿದ್ಧತೆ ಮಾಡಲಾಗುವುದು. ಕಸದಿಂದ ವಿದ್ಯುತ್ ತಯಾರಿಸುವ ಘಟಕಗಳಿಗೆ ಶೀಘ್ರ ಚಾಲನೆ ನೀಡಲಾಗುವುದು. ಬಿಡದಿ ಬಳಿ ಈಗಾಗಲೇ ವೇಸ್ಟ್ ಟು ಎನರ್ಜಿ ಪ್ಲಾಂಟ್​ಗೆ ಟೆಂಡರ್ ನೀಡಲಾಗಿದ್ದು, ಸಿದ್ಧತೆ ನಡೆಯುತ್ತಿದೆ. ಮಾವಳ್ಳಿಪುರ, ದೊಡ್ಡಬಿದರಕಲ್ಲು ಬಳಿ ವಿವಿಧ ಹಂತದಲ್ಲಿ ಕೆಲಸ ನಡೆದಿದೆ.

ಹಸಿ ಕಸದ ಗುತ್ತಿಗೆ ಜೊತೆ ಒಣ ಕಸದ ಚಿಂದಿ ಆಯುವವರು, ಲಿಂಕ್ ವರ್ಕರ್ಸ್, ಮಾರ್ಷಲ್ಸ್ , ಸ್ವಸಹಾಯ ಗುಂಪುಗಳನ್ನು ಪ್ರತಿದಿನ ಕರೆದು ಸಭೆ ನಡೆಸಲಾಗುತ್ತಿದೆ. ಇಷ್ಟಾದ್ರೂ ಮಿಶ್ರ ಕಸ ನೀಡಿದರೆ ದಂಡದ ಮೊತ್ತ ಹೆಚ್ಚಳ ಮಾಡಲಾಗುವುದು. ಮಿಶ್ರ ಕಸ ನೀಡಿದರೆ ಸಾವಿರ ರೂಪಾಯಿ ದಂಡ ಹಾಕಲಾಗುವುದು. ಹಸಿಕಸವನ್ನು ಮುಚ್ಚಿದ ವಾಹನಗಳು ಪ್ರತಿದಿನ ಸಂಗ್ರಹ ಮಾಡಲಿವೆ. ಸ್ಯಾನಿಟರಿ ತ್ಯಾಜ್ಯವನ್ನೂ ಕೂಡಾ ಕೆಜಿಗೆ ಹದಿನೆಂಟು ರೂಪಾಯಿ ಪಾವತಿಸಿ, ಹಳದಿ ಬಣ್ಣದ ಪ್ಲಾಸ್ಟಿಕ್ ಕವರ್​ನಲ್ಲಿ ಸಂಗ್ರಹಿಸಿ ಒಣಕಸ ಕೇಂದ್ರಕ್ಕೆ ಸಾಗಿಸಲಾಗುತ್ತದೆ. ವಾರಕ್ಕೆ ಎರಡು ದಿನ ಮನೆಗೆ ಬರುವ ಒಣಕಸ ಸಂಗ್ರಹದಾರರಿಗೆ ಪ್ಲಾಸ್ಟಿಕ್ ಪೇಪರ್, ಬಾಟಲಿಗಳು ಮುಂತಾದ ಒಣಕಸವನ್ನು ನೀಡಬಹುದಾಗಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.