ETV Bharat / city

ಇಂದು ಬಿಬಿಎಂಪಿ ಗದ್ದುಗೆ ಗುದ್ದಾಟ... ಅಭ್ಯರ್ಥಿ ಆಯ್ಕೆಗೆ ಮಧ್ಯರಾತ್ರಿವರೆಗೂ ಬಿಜೆಪಿ ಕಚೇರಿಯಲ್ಲಿ ಸಭೆ! - ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ

ಬಿಬಿಎಂಪಿ ಮೇಯರ್, ಉಪಮೇಯರ್ ಹಾಗೂ ಸ್ಥಾಯಿ ಸಮಿತಿಗೆ ಇಂದು ಚುನಾವಣೆ ನಡೆಯಲಿದೆ. ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಮಧ್ಯರಾತ್ರಿವರೆಗೆ ಕಚೇರಿಯಲ್ಲಿ ಸಭೆ ನಡೆಸಿತು.

ಬಿಬಿಎಂಪಿ ಚುನಾವಣೆ: ಸಭೆ ಬಳಿಕ ಅರವಿಂದ್ ಲಿಂಬಾವಳಿ ಮಾಹಿತಿ ನೀಡಿದರು.
author img

By

Published : Oct 1, 2019, 4:02 AM IST

ಬೆಂಗಳೂರು: ಇಂದು ನಡೆಯುವ ಬಿಬಿಎಂಪಿ ಮೇಯರ್ ಮತ್ತು ಉಪಮೇಯರ್ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಮಧ್ಯರಾತ್ರಿಯವರೆಗೂ ಬಿಜೆಪಿ ಮುಖಂಡರು ಸಭೆ ನಡೆಸಿದರು.

ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಸದ್ಯ ತಲಾ ಇಬ್ಬರು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಆದ್ರೆ ಅಧಿಕೃತವಾಗಿ ಯಾವುದೇ ಹೆಸರುಗಳನ್ನು ಬಹಿರಂಗಪಡಿಸಿಲ್ಲ ಎಂದು ತಿಳಿದುಬಂದಿದೆ.

ಮೇಯರ್ ಸ್ಥಾನಕ್ಕೆ ಜೋಗುಪಾಳ್ಯ ವಾರ್ಡ್ ಸದಸ್ಯ ಎಂ.ಗೌತಮ್ ಕುಮಾರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಹೆಚ್.ಎಸ್.ಆರ್ ಲೇಔಟ್ ವಾರ್ಡ್ ಸದಸ್ಯ ಗುರುಮೂರ್ತಿ ರೆಡ್ಡಿ ಹೆಸರು ಬಹುತೇಕ ಖಚಿತವಾಗಿದೆ ಎಂದು ಮೂಲಗಳು ತಿಳಿಸಿವೆ. ಎರಡೂ ಸ್ಥಾನಗಳಿಗೂ ಸಂಘ ಪರಿವಾರ ಮೂಲದ ಅಭ್ಯರ್ಥಿಗಳಿಗೆ ಮಣೆ ಹಾಕಲಾಗಿದೆ.

ಬಿಬಿಎಂಪಿ ಚುನಾವಣೆ: ಸಭೆ ಬಳಿಕ ಅರವಿಂದ್ ಲಿಂಬಾವಳಿ ಮಾಹಿತಿ ನೀಡಿದರು.

ಇಬ್ಬಿಬ್ಬರ ಹೆಸರು ಅಂತಿಮ, ಕೊನೆ ಗಳಿಗೆಯಲ್ಲಿ ಯಾರಿಗೆ ಲಕ್?
ಸಭೆಯಲ್ಲಿ ಮೇಯರ್ ಸ್ಥಾನಕ್ಕೆ ಜೋಗುಪಾಳ್ಯ ವಾರ್ಡ್ ಸದಸ್ಯ ಎಂ. ಗೌತಮ್ ಕುಮಾರ್ ಮತ್ತು ಕಾಚರಕನಹಳ್ಳಿ ವಾರ್ಡ್ ಸದಸ್ಯ ಪದ್ಮನಾಭ ರೆಡ್ಡಿ ಹೆಸರು ಅಂತಿಮವಾಗಿದೆ. ಉಪಮೇಯರ್ ಸ್ಥಾನಕ್ಕೆ ಹೆಚ್ ಎಸ್ ಆರ್ ಲೇಔಟ್ ವಾರ್ಡ್ ಸದಸ್ಯ ಗುರುಮೂರ್ತಿ ರೆಡ್ಡಿ ಮತ್ತು ಹೊಸಹಳ್ಳಿ ವಾರ್ಡ್ ಸದಸ್ಯೆ ಆರ್. ಮಹಾಲಕ್ಷ್ಮಿ ಹೆಸರು ಅಂತಿಮವಾಗಿದೆಯಂತೆ. ಆದ್ರೆ ಗೌತಮ್ ಕುಮಾರ್ ಮತ್ತು ಗುರುಮೂರ್ತಿ ರೆಡ್ಡಿ ನಾಮಪತ್ರ ಸಲ್ಲಿಸುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಸಭೆ ಬಳಿಕ ಮಾತನಾಡಿದ ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ, ಮೇಯರ್ ಹಾಗೂ ಉಪ ಮೇಯರ್ ಆಯ್ಕೆಯಲ್ಲಿ ಸ್ವಲ್ಪ ಗೊಂದಲ ಸೃಷ್ಟಿಯಾಗಿತ್ತು. ಆದರೆ ಚರ್ಚೆ ನಂತರ ಈಗ ಎಲ್ಲ ಗೊಂದಲಗಳನ್ನು ಬಗೆಹರಿಸಿದ್ದೇವೆ. ತಡರಾತ್ರಿ ಆಗಿರುವ ಕಾರಣ ಮುಖ್ಯಮಂತ್ರಿ ಯಡಿಯೂರಪ್ಪನವರು ಸಂಪರ್ಕಕ್ಕೆ ಸಿಗಲಿಲ್ಲ. ಹೀಗಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಬೆಳಿಗ್ಗೆ ಅಂತಿಮಗೊಳಿಸುತ್ತೇವೆ ಎಂದು ಮಾರ್ಮಿಕವಾಗಿ ಹೇಳಿದರು.

ಬೆಂಗಳೂರು ಕೋರ್ ಏರಿಯಾ ಮತ್ತು ಔಟರ್ ಏರಿಯಾ ಪರಿಗಣನೆಗೆ ತೆಗೆದುಕೊಂಡಿರುವ ಬಿಜೆಪಿ, ಔಟರ್ ಏರಿಯಾದಿಂದ ಮೇಯರ್ ಅಭ್ಯರ್ಥಿ, ಕೋರ್ ಏರಿಯಾದಿಂದ ಉಪಮೇಯರ್ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿದೆ.

ಬೆಳಗ್ಗೆ ಎಂಟು ಗಂಟೆಗೆ ಬೆಂಗಳೂರಿನ ವಿಠಲ್ ಮಲ್ಯ ರಸ್ತೆಯಲ್ಲಿರುವ ಖಾಸಗಿ ಹೋಟೆಲ್​ನಲ್ಲಿ ಎಲ್ಲಾ ಬಿಜೆಪಿ ಕಾರ್ಪೋರೇಟರ್​ಗಳಿಗೆ ಪಕ್ಷ ಉಪಹಾರ ಕೂಟದ ಸಭೆ ಕರೆದಿದೆ.‌ ಈ ಸಭೆಯಲ್ಲಿ ಅಧಿಕೃತವಾಗಿ ಅಭ್ಯರ್ಥಿ ಘೋಷಣೆ ಆಗಲಿದ್ದು, ನಂತರ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ. ಇದಕ್ಕೂ ಮುನ್ನ ಅಭ್ಯರ್ಥಿಗಳ ಅಂತಿಮ ಆಯ್ಕೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಸಿಎಂ ಯಡಿಯೂರಪ್ಪ ಜೊತೆ ದೂರವಾಣಿ ಮೂಲಕ ಔಪಚಾರಿಕವಾಗಿ ಚರ್ಚೆ ನಡೆಸಲಿದ್ದಾರೆ.

Intro:Body:ಬಿಜೆಪಿಯಲ್ಲಿ ಮೇಯರ್ ಆಯ್ಕೆ ಚರ್ಚೆ ಅಂತ್ಯ 4 ಹೆಸರು ಶಾರ್ಟ್ ಲಿಸ್ಟ್ ಮಾಡಿದ ವರಿಷ್ಠರು.

ಬೆಂಗಳೂರು:ಬಿಜೆಪಿಯ ಜಗನ್ನಾಥ ಭವನದಲ್ಲಿ ಮೇಯರ್ ಆಯ್ಕೆಯ ಚರ್ಚೆ ಅಂತ್ಯಗೊಂಡಿದ್ದು, ಮೇಯರ್ ಸ್ಥಾನಕ್ಕೆ ಎರಡು ಹೆಸರು ಹಾಗೂ ಉಪಮೇಯರ್ ಸ್ಥಾನಕ್ಕೆ ಎರಡು ಹೆಸರುಗಳು ಬಿಜೆಪಿ ಪ್ರಮುಖರು ಅಂತಿಮಗೊಳಿಸಿದ್ದಾರೆ

ಆದರೆ ಇದರ ಬಗ್ಗೆ ಯಾವುದೇ ಖಚಿತ ಮಾಹಿತಿ ನೀಡದೆ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ, ಮೇಯರ್ ಹಾಗೂ ಉಪ ಮೇಯರ್ ಆಯ್ಕೆಯಲ್ಲಿ ಸ್ವಲ್ಪ ಗೊಂದಲ ಸೃಷ್ಟಿಯಾಗಿತ್ತು ಆದರೆ ಈಗ ಎಲ್ಲ ಗೊಂದಲಗಳು ಚರ್ಚೆಯ ನಂತರ ಪರಿಹಾರವಾಗಿದೆ. ತಡರಾತ್ರಿ ಆಗಿರುವ ಕಾರಣ ಮುಖ್ಯಮಂತ್ರಿ ಯಡಿಯೂರಪ್ಪನವರು ಸಂಪರ್ಕಕ್ಕೆ ಸಿಗಲಿಲ್ಲ ಹೀಗಾಗಿ ಸಾರ್ಕ್ ಲಿಸ್ಟ್ ಮಾಡಿದ ಅಭ್ಯರ್ಥಿಯ ಪಟ್ಟಿಯನ್ನು ನಾಳೆ ಬೆಳಿಗ್ಗೆ ಅಂತಿಮಗೊಳಿಸುತ್ತೇವೆ ಎಂದು ಮಾರ್ಮಿಕವಾಗಿ ಹೇಳಿದರು.

ಮೂಲಗಳ ಪ್ರಕಾರ ಮೇಯರ್ ಸ್ಥಾನಕ್ಕೆ ಇಬ್ಬರು, ಉಪ ಮೇಯರ್ ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳ ಹೆಸರು ಅಂತಿಮ ಮಾಡಿದ ಸಭೆ, ಮೇಯರ್ ಸ್ಥಾನಕ್ಕೆ ಸರ್ವಜ್ಞ ನಗರ ಕಾರ್ಪೋರೇಟರ್ ಪದ್ಮನಾಭರೆಡ್ಡಿ ಹಾಗೂ ಶಾಂತಿನಗರ ಕಾರ್ಪೊರೇಟರ್ ಗೌತಮ್ ಹೆಸರು ಹಾಗೂ ಉಪ ಮೇಯರ್ ಸ್ಥಾನಕ್ಕೆ ವಿಜಯನಗರ ವಾರ್ಡ್ ಕಾರ್ಪೊರೇಟರ್ ಮಹಾಲಕ್ಷ್ಮಿ, ಬೊಮ್ಮನಳ್ಳಿ ವಾರ್ಡ್ ಕಾರ್ಪೊರೇಟರ್ ಗುರುಮೂರ್ತಿ ಅಂತಿಮ ಎಂದು ಹೇಳಲಾಗುತ್ತಿದೆ.

ಸಭೆ ಬಳಿಕ ಸಿಎಂ ಬಿ ಎಸ್ ಯಡಿಯೂರಪ್ಪ ಸಂಪರ್ಕ ಮಾಡಲು ಪ್ರಯತ್ನಿಸಿದ ಬಿಜೆಪಿ ನಾಯಕರು ಸಂಪರ್ಕಕ್ಕೆ ಮುಖ್ಯಮಂತ್ರಿ ಸಿಗದ ಕಾರಣ ಬೆಳಿಗ್ಗೆ ಸಿಎಂ ಜೊತೆ ಮಾತನಾಡಿ ಹೆಸರು ಅಂತಿಮಗೊಳಿಸಲಿರುವ ಬಿಜೆಪಿ ನಾಯಕರು.

ಸಧ್ಯ ನಾಲ್ಕು ಜನರ ಹೆಸರು ಶಾರ್ಟ್ ಲಿಸ್ಟ್
ಇಂದು ಬೆಳಿಗ್ಗೆ ಈ ಸಭೆ ಜೆ ಡಬಲ್ಯೂ ಮರಿಯಟ್ ನಲ್ಲಿ ಮುಂದುವರಿಯಲಿದ್ದು, ಜಗನ್ನಾಥ ಭವನದ ಸಭೆಯಲ್ಲಿ ಬಿಜೆಪಿ ಕಾರ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಉಪಮುಖ್ಯಮಂತ್ರಿ ಅಶ್ವತ್ ನಾರಾಯಣ್, ಸಚಿವ ಆರ್ ಅಶೋಕ್, ಶಾಸಕ ಅರವಿಂದ ಲಿಂಬಾವಳಿ ಸೇರಿದಂತೆ ಹಲವು ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.