ETV Bharat / city

ಮಳೆಗಾಲದಲ್ಲಿ ಮುಖ್ಯ ರಸ್ತೆಗಳ ಗುಂಡಿ ಮುಚ್ಚಲು ಬಿಬಿಎಂಪಿ ಆಯುಕ್ತ ಆದೇಶ - ಬಿಬಿಎಂಪಿ ಆಯುಕ್ತ

ಪ್ರಸ್ತುತ ಪಾಲಿಕೆಯಿಂದ ಕೋಲ್ಡ್ ಮಿಕ್ಸ್ ಘಟಕ ಕೂಡಾ ನಿರ್ಮಾಣ ಮಾಡಲಾಗಿದೆ. ಇದು ಕೂಡ ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಅಧೀನದ ಸಂಚಾರ ಇಂಜಿನಿಯರಿಂಗ್ ವ್ಯಾಪ್ತಿಯಲ್ಲಿದೆ. ಹೀಗಾಗಿ ಕೂಡಲೇ ವಲಯದ ಮುಖ್ಯ ಇಂಜಿನಿಯರ್​ಗಳಿಂದ ಕಡತ ಪಡೆದುಕೊಂಡು, ಪ್ರಮುಖ ರಸ್ತೆಗಳ ನಿರ್ವಹಣೆಗೆ ಆದ್ಯತೆ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಬಿಬಿಎಂಪಿ ಆಯುಕ್ತರು ಮಾಹಿತಿ ನೀಡಿದ್ದಾರೆ.

repair potholes
ರಸ್ತೆ ದುರಸ್ತಿ
author img

By

Published : Aug 7, 2020, 5:29 AM IST

ಬೆಂಗಳೂರು: ನಗರದಲ್ಲಿ ಮಳೆ ಸುರಿದು ರಸ್ತೆ ಹಾಳಾಗಿರುವ ಹಿನ್ನೆಲೆಯಲ್ಲಿ ಸಮರ್ಪಕ ನಿರ್ವಹಣೆಗೆ ಅತೀ ಮುಖ್ಯ ಹಾಗೂ ಮುಖ್ಯ ರಸ್ತೆಗಳ ಜವಾಬ್ದಾರಿಯನ್ನು ರಸ್ತೆ ಮತ್ತು ಮೂಲಭೂತ ಸೌಕರ್ಯ ವಿಭಾಗಕ್ಕೆ ಮರುಹಂಚಿಕೆ ಮಾಡಿ ಆಯುಕ್ತ ಮಂಜುನಾಥ್ ಪ್ರಸಾದ್ ಆದೇಶ ಹೊರಡಿಸಿದ್ದಾರೆ.

ಈ ಹಿಂದೆಯೂ ಮುಖ್ಯರಸ್ತೆಗಳ ನಿರ್ವಹಣೆಯನ್ನು ಎಂಟು ವಲಯದ ಮುಖ್ಯ ಇಂಜಿನಿಯರ್​ಗಳಿಗೆ ಹಂಚಿಕೆ ಮಾಡಿ, ವಾರ್ಡ್ ಮಟ್ಟದ ಇಂಜಿನಿಯರ್ ವಿಭಾಗಕ್ಕೆ ನಿರ್ವಹಣೆ ಜವಾಬ್ದಾರಿ ನೀಡಲಾಗಿತ್ತು. ಆದರೆ, ಮುಖ್ಯರಸ್ತೆಗಳು ವಾರ್ಡ್​ಗಳಲ್ಲಿ ಹಂಚಿಹೋಗುವುದರಿಂದ ಯಾರ ಜವಾಬ್ದಾರಿಗೆ ಬರುತ್ತದೆ ಎನ್ನುವ ಗೊಂದಲ ಸೃಷ್ಟಿಯಾಗುತ್ತಿತ್ತು.

Order Copy
ಆದೇಶ ಪ್ರತಿ

ಬಿನ್ನಿಮಿಲ್ ರಸ್ತೆ ಸೇರಿದಂತೆ ವಿವಿಧ ರಸ್ತೆಗಳನ್ನು ಪರಿಶೀಲನೆ ನಡೆಸಲಾಗಿದ್ದು, ಇವುಗಳ ನಿರ್ವಹಣೆ ಸಮರ್ಪಕವಾಗಿ ನಡೆದಿಲ್ಲ. ಈಗಾಗಲೇ ವಾರ್ಡ್ ಮಟ್ಟದ ಇಂಜಿನಿಯರ್​ಗಳಿಗೆ ವಾರ್ಡ್​ಗಳ ರಸ್ತೆ ಜವಾಬ್ದಾರಿ ಇರುವುದರಿಂದ ಪ್ರಮುಖ ರಸ್ತೆ ನಿರ್ವಹಣೆ ಸವಾಲಾಗಲಿದೆ. ಹೀಗಾಗಿ ಪ್ರಮುಖ ರಸ್ತೆಗಳ ನಿರ್ವಹಣೆಗೆ ಇರುವ ರಸ್ತೆ ಮೂಲಭೂತ ಸೌಕರ್ಯ ವಿಭಾಗಕ್ಕೆ ಈ ರಸ್ತೆಗಳ ನಿರ್ವಹಣೆ ಹಾಗೂ ಮೇಲ್ವಿಚಾರಣೆ ವಹಿಸಲಾಗಿದೆ ಎಂದು ತಿಳಿಸಿದರು.

Order Copy
ಆದೇಶ ಪ್ರತಿ

ಪ್ರಸ್ತುತ ಪಾಲಿಕೆಯಿಂದ ಕೋಲ್ಡ್ ಮಿಕ್ಸ್ ಘಟಕ ಕೂಡಾ ನಿರ್ಮಾಣ ಮಾಡಲಾಗಿದೆ. ಇದು ಕೂಡ ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಅಧೀನದ ಸಂಚಾರ ಇಂಜಿನಿಯರಿಂಗ್ ವ್ಯಾಪ್ತಿಯಲ್ಲಿದೆ. ಹೀಗಾಗಿ ಕೂಡಲೇ ವಲಯದ ಮುಖ್ಯ ಇಂಜಿನಿಯರ್​ಗಳಿಂದ ಕಡತ ಪಡೆದುಕೊಂಡು, ಪ್ರಮುಖ ರಸ್ತೆಗಳ ನಿರ್ವಹಣೆಗೆ ಆದ್ಯತೆ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.