ETV Bharat / city

ಬೆಂಗಳೂರು ನಗರದಲ್ಲಿ ಹೊಸದಾಗಿ 22 ಸಾವಿರ ಮಂದಿಗೆ ಕೋವಿಡ್ - ಆರೋಗ್ಯ ಇಲಾಖೆಯಿಂದ ಮಾಹಿತಿ

ಎಲ್ಲೆಡೆಯೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ರಾಜ್ಯದ ರಾಜಧಾನಿಯಲ್ಲಿ ಸುಮಾರು 22 ಸಾವಿರ ಮಂದಿ ಕೋವಿಡ್ ಸೋಂಕಿತರು ಪತ್ತೆಯಾಗಿದ್ದಾರೆ.

bangalore-corona-report
ಬೆಂಗಳೂರು ನಗರದಲ್ಲಿ ಹೊಸದಾಗಿ 22 ಸಾವಿರ ಮಂದಿಗೆ ಕೋವಿಡ್
author img

By

Published : Apr 28, 2021, 11:25 AM IST

ಬೆಂಗಳೂರು: ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಬೆಂಗಳೂರು ನಗರದಲ್ಲಿ 24 ಗಂಟೆಯಲ್ಲಿ ಸುಮಾರು 22,534 ಮಂದಿಗೆ ಕೋವಿಡ್ ಪ್ರಕರಣ ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರು ಪೂರ್ವ ವಲಯದಲ್ಲಿ 3,278, ದಕ್ಷಿಣ ವಲಯದಲ್ಲಿ 4,133, ಬೊಮ್ಮನಹಳ್ಳಿಯಲ್ಲಿ 2,148, ದಾಸರಹಳ್ಳಿಯಲ್ಲಿ 690, ಮಹದೇವಪುರದಲ್ಲಿ 2,285, ಆರ್.ಆರ್ ನಗರದಲ್ಲಿ 1,602, ಪಶ್ಚಿಮ ವಲಯದಲ್ಲಿ 2,445, ಹಾಗೂ ಬೆಂಗಳೂರು ಹೊರವಲಯದಲ್ಲಿ 2,715 ಜನರಲ್ಲಿ ಪಾಸಿಟಿವ್ ದೃಢಪಟ್ಟಿದೆ.

ಇದನ್ನೂ ಓದಿ: ದೇಶದಲ್ಲಿ 2 ಲಕ್ಷ ಗಡಿ ದಾಟಿದ ಕೋವಿಡ್ ಸೋಂಕಿತ ಮೃತರ ಸಂಖ್ಯೆ

ಮಂಗಳವಾರ ಬೆಂಗಳೂರು ನಗರದಲ್ಲಿ 17,550 ಪಾಸಿಟಿವ್ ಕೇಸ್​​ ದೃಢಪಟ್ಟಿದ್ದು, 97 ಮಂದಿ ಮೃತಪಟ್ಟಿದ್ದರು‌. ಈಗ ಸದ್ಯಕ್ಕೆ ನಗರದಲ್ಲಿ 2,06,223 ಸಕ್ರಿಯ ಪ್ರಕರಣಗಳಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.