ಬೆಂಗಳೂರು : ಹುಟ್ಟುಹಬ್ಬದ ಆಚರಣೆಗೆಂದು ಬಲೂನ್ಗೆ ಗ್ಯಾಸ್ ಫಿಲ್ ಮಾಡಬೇಕಾದರೆ ಸಿಲಿಂಡರ್ ಸ್ಪೋಟಗೊಂಡು, ಗ್ಯಾಸ್ ಫಿಲ್ ಮಾಡುತ್ತಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಅಶೋಕನಗರದ ಖಾಸಗಿ ಅಪಾರ್ಟ್ಮೆಂಟ್ನ ಆವರಣದಲ್ಲಿ ನಡೆದಿದೆ.
ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಸಲುವಾಗಿ Myparty.com ಎಂಬ ವೆಬ್ಸೈಟ್ ಮೂಲಕ ಗ್ರಾಹಕ 200 ಬಲೂನ್ ಬುಕ್ ಮಾಡಿದ್ದು, ಬಲೂನ್ಗಳಿಗೆ ಗ್ಯಾಸ್ ಫಿಲ್ ಮಾಡಲು ವೆಬ್ಸೈಟ್ ವತಿಯಿಂದಲೇ ಇಬ್ಬರು ವ್ಯಕ್ತಿಗಳು ಹುಟ್ಟುಹಬ್ಬದ ತಯಾರಿಗಾಗಿ ಬಂದಿದ್ದರು.
ಅಪಾರ್ಟ್ಮೆಂಟ್ನ ಹೊರಗೆ ಗ್ಯಾಸ್ ಫಿಲ್ ಮಾಡುತ್ತಿದ್ದ ವೇಳೆ ಸುಮಾರು ನೂರು ಬಲೂನ್ಗಳನ್ನು ಫಿಲ್ ಮಾಡಿದ ನಂತರ ಇದ್ದಕ್ಕಿದ್ದಂತೆ ಸಿಲಿಂಡರ್ ಸ್ಫೋಟಗೊಂಡಿದೆ. ಈ ವೇಳೆ ಸ್ಥಳದಲ್ಲಿದ್ದ ದಿನೇಶ್ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ: ಜಮನ್ಲಾಲ್ ಬಜಾಜ್ ಸೇವಾ ಟ್ರಸ್ಟ್ ಭೂ ವಿವಾದ:ನ್ಯಾಯಾಧಿಕರಣ ಆದೇಶ ರದ್ದುಗೊಳಿಸಿದ ಹೈಕೋರ್ಟ್
ಮೂಲತಃ ತಮಿಳುನಾಡಿನವನಾದ ದಿನೇಶ್, ಕಳೆದ ನಾಲ್ಕು ವರ್ಷದಿಂದ ವೆಬ್ಸೈಟ್ನಲ್ಲಿ ಕೆಲಸ ಮಾಡುತ್ತಿದ್ದನು. ಸದ್ಯ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.