ಬೆಂಗಳೂರು : ಆಟೋ ಓಡಿಸುವಾಗಲೇ ಚಾಲಕ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ ದುರ್ಘಟನೆ ನಗರದಲ್ಲಿ ನಡೆದಿದೆ.
ಶಿವಷಣ್ಮುಗಂ ಮೃತ ಆಟೋ ಚಾಲಕ. ನಗರದ ರೇಸ್‌ಕೋರ್ಸ್ ಬಳಿ ಆಟೋ ಚಾಲನೆ ಮಾಡಿಕೊಂಡು ಬರುತ್ತಿದ್ದ ಶಿವಷಣ್ಮುಗಂ ಅವರು ಏಕಾಏಕಿ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ನಡು ರಸ್ತೆಯಲ್ಲಿ ಆಟೋ ನಿಂತಿರುವುದನ್ನು ಕಂಡು ಸಾರ್ವಜನಿಕರು ನೋಡಿ ಕೂಡಲೇ ಹೈಗ್ರೌಂಡ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆಟೋದಲ್ಲಿದ್ದ ಡ್ರೈವಿಂಗ್ ಲೈಸೆನ್ಸ್ ಮೂಲಕ ಚಾಲಕನ ಪೂರ್ವಾಪರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.