ಬೆಂಗಳೂರು : ಲಾಕ್‌ಡೌನ್‌ನಿಂದ ಅದೆಷ್ಟೋ ಮಂದಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಲ್ಲಿ ದೇವಾಲಯಗಳ ಅರ್ಚಕರು ಕೂಡ ಒಬ್ಬರಾಗಿದ್ದಾರೆ. ಕೊರೊನಾದಿಂದಾಗಿ ಬರೋಬ್ಬರಿ 35 ಸಾವಿರ ದೇವಾಲಯಗಳ ಅರ್ಚಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕೊರೊನಾ ಭೀತಿಯಿಂದಾಗಿ ಭಕ್ತರು ಕಳೆದ ಎರಡು ತಿಂಗಳಿಂದ ದೇವಾಲಯಗಳ ಕಡೆ ಮುಖ ಮಾಡುತ್ತಿಲ್ಲ. ಸಂಪ್ರದಾಯದಂತೆ ಪ್ರತಿ ದಿನ ದೇವಾಲಯಗಳಿಗೆ ಪೂಜೆ ಸಲ್ಲಿಸುತ್ತಿದ್ದೆವು.
ಆದರೆ, ಈ ಬಾರಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದೇವೆ. ನಮ್ಮ ಬಳಿ ಆಸ್ಪತ್ರೆಗಳಿಗೆ ಹೋಗಲೂ ಕೂಡ ಹಣ ಇಲ್ಲ. ಕನಿಷ್ಟ ಆಹಾರ ಕಿಟ್ಗಳನ್ನೂ ಕೂಡ ಈಗ ಯಾರೂ ನೀಡ್ತಿಲ್ಲ. ಹಲವು ಬಾರಿ ಸಚಿವರನ್ನ ಭೇಟಿ ಮಾಡಿ ಮನವಿ ಮಾಡಿದ್ರೂ ಯಾವುದೇ ಪ್ರಯೋಜನ ಆಗಿಲ್ಲ ಎನ್ನುತ್ತಾರೆ ಅರ್ಚಕರು.
ವರ್ಷಕ್ಕೆ ₹48 ಸಾವಿರ ಹಣ ನೀಡ್ತಾರೆ. ಅದರಿಂದಲೇ ನಾವು ಹೇಗೆ ಜೀವನ ನಡೆಸಬೇಕು. ಹೀಗಾಗಿ, ಈ ಎಲ್ಲಾ ಸಮಸ್ಯೆಗಳನ್ನ ಪರಿಗಣಿಸಿ ಮುಖ್ಯಮಂತ್ರಿಗಳು ನಮಗೂ ಕೂಡ ಪ್ಯಾಕೇಜ್ ಘೋಷಣೆ ಮಾಡಿದ್ರೆ ಒಳ್ಳೆಯದು.
ಈಗಾಗಲೇ ಅರ್ಚಕರ ಸಂಘದ ಮುಖ್ಯ ಕಾರ್ಯದರ್ಶಿ ಎಸ್.ಕೆ.ಎನ್ ದೀಕ್ಷಿತ್ ಹಾಗೂ ಸಹ ಕಾರ್ಯದರ್ಶಿ ವೇದ ಬ್ರಹ್ಮಶ್ರೀ ಉಮೇಶ್ ಶರ್ಮಾರಿಂದ ಮುಜರಾಯಿ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಪತ್ರವನ್ನೂ ಕೂಡ ಬರೆದು ಮನವಿ ಮಾಡಲಾಗಿದೆ ಎಂದು ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಸಂಘ ಅಳಲು ತೋಡಿಕೊಡಿದ್ದಾರೆ.
ಇದನ್ನೂ ಓದಿ: ಸಿ ಟಿ ರವಿಯವರೇ, ಸಾಕು ಮಾಡಿ ಈ ನಾಟಕ.. ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ಮುಖಂಡರ ವಾಗ್ದಾಳಿ..