ETV Bharat / city

Watch..  ಸದನದಲ್ಲಿ ಸದ್ದು ಮಾಡಿದ ಮಗು ಮಾರಾಟ ವಿಚಾರ: ಸೂಕ್ತ ಕ್ರಮದ ಭರವಸೆ ನೀಡಿದ ಸರ್ಕಾರ - ಶಾಸಕ ಎಂ.ಬಿ.ಪಾಟೀಲ್‌

ವಿಜಯಪುರ ಸರ್ಕಾರಿ ಆಸ್ಪತ್ರೆಯಲ್ಲಿ ಮಗು ಮಾರಾಟ ಪ್ರಕರಣ ವಿಧಾನಸಭೆ ಕಲಾಪದಲ್ಲಿಂದು ಪ್ರಸ್ತಾಪವಾಯಿತು. ಶಾಸಕ ಎಂ.ಬಿ.ಪಾಟೀಲ್‌ ಪ್ರಶ್ನೆಗೆ ಉತ್ತರಿಸಿದ ಕಾನೂನು ಸಚಿವ ಮಾಧುಸ್ವಾಮಿ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

Assembly session: mla MB Patil Proposals for the sale of baby at Vijayapura Government Hospital
ವಿಜಯಪುರ ಸರ್ಕಾರಿ ಆಸ್ಪತ್ರೆಯಲ್ಲಿ 5 ಸಾವಿರಕ್ಕೆ ಮಗು ಮಾರಾಟ ಮಾಡಿರೋದು ನಿಜ - ಸಚಿವ ಮಾಧುಸ್ವಾಮಿ
author img

By

Published : Sep 17, 2021, 1:14 PM IST

ಬೆಂಗಳೂರು: ವಿಜಯಪುರ ಸರ್ಕಾರಿ ಆಸ್ಪತ್ರೆಯಲ್ಲಿ ದಾದಿಯೊಬ್ಬರು ಮಹಿಳೆಯ ಮಗುವನ್ನು 5 ಸಾವಿರಕ್ಕೆ ಮಾರಾಟ ಮಾಡಿರುವುದು ನಿಜ. ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಕಾನೂನು ಸಚಿವ ಜೆಸಿ ಮಾಧುಸ್ವಾಮಿ ವಿಧಾನಸಭೆ ಕಲಾಪಕ್ಕೆ ತಿಳಿದ್ದಾರೆ.

ವಿಜಯಪುರ ಸರ್ಕಾರಿ ಆಸ್ಪತ್ರೆಯಲ್ಲಿ 5 ಸಾವಿರಕ್ಕೆ ಮಗು ಮಾರಾಟ ಮಾಡಿರೋದು ನಿಜ - ಸಚಿವ ಮಾಧುಸ್ವಾಮಿ

ಶಾಸಕ ಎಂಬಿ ಪಾಟೀಲ್‌ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಗು ಮಾರಿದ್ದ ದಾದಿ ಹಾಗೂ ಆಕೆಯೊಂದಿಗೆ ಭಾಗಿಯಾಗಿದ್ದವರ ಬಗ್ಗೆ ಮಾಹಿತಿ ಇದೆ. ಮಹಿಳೆಯ ಮನೆಯವರೂ ಗಲಾಟೆ ಮಾಡಿ ನಮಗೆ ಗೊತ್ತಿಲ್ಲದೇ ಮಗು ಮಾರಾಟ ಮಾಡಲಾಗಿದೆ ಎಂದು ಹೇಳಿದ್ದಾರೆ. ಬಡವರ ಮಕ್ಕಳನ್ನು ನಾಲ್ಕೈದು ಸಾವಿರಕ್ಕೆ ಅನಾಮಧೇಯರು ತೆಗೆದುಕೊಂಡು ಹೋಗುತ್ತಾರೆ ಎನ್ನುತ್ತಾರೆ. ಆದರೆ ಈ ಪ್ರಕರಣದಲ್ಲಿ ದಾದಿ ಹಾಗೂ ಅವರ ಜೊತೆ ಇದ್ದವರು ಗೊತ್ತಿರುವುದರಿಂದ ತನಿಖೆಗೆ ಅಡ್ಡಿಯಾಗಲ್ಲ. ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.

ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಎಂ. ಬಿ.ಪಾಟೀಲ್

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಎಂ.ಬಿ.ಪಾಟೀಲ್‌, ವಿಜಯಪುರದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಒಂದು ಮಗು ಮಾರಾಟ ಆಗಿದ್ದ ಬಗ್ಗೆ ಮಾಧ್ಯಮಗಳಲ್ಲಿ ಬಂದಿದೆ. ಈ ಬಗ್ಗೆ ಡಿಸಿ, ಎಸ್ಪಿ ಬಳಿ ಮಾತನಾಡಿದಾಗ ಗಂಡು ಮಗು ಅಂದರು. ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಆದ ಮೇಲೆ ನರ್ಸ್‌ ಮಹಿಳೆಗೆ ಪುಸಲಾಯಿಸಿದ್ದಾಳೆ.

ನರ್ಸ್‌, ಆಕೆಯ ಪತಿ ಹಾಗೂ ಮತ್ತೊಬ್ಬ ವ್ಯಕ್ತಿ ಮೂವರು ಸೇರಿ ಮಗುವನ್ನು 3 ರಿಂದ 5 ಸಾವಿರಕ್ಕೆ ಮಾರಾಟ ಮಾಡಿದ್ದಾರೆ. ಇದನ್ನು ಡಿಸಿ, ಎಸ್ಪಿ ಅವರು ಕನ್ಫರ್ಮ್‌ ಮಾಡಿದ್ದಾರೆ. ಮಗು ಮಾರಾಟ ಮಾಡಿರುವುದು ಹೇಯ ಕೃತ್ಯವಾಗಿದೆ. ಬೆಳಗ್ಗೆ ಮಾರಾಟ ಮಾಡಿದ್ದ ಮಹಿಳೆ ಮತ್ತೆ ಸಂಜೆ ಹೋಗಿ ನನಗೆ ಮಗು ಬೇಕು ಅಂತ ಹೋಗಿದ್ದಾರೆ. ಈ ಬಗ್ಗೆ ಸರ್ಕಾರ ಮಾಹಿತಿ ನೀಡಬೇಕು ಎಂದು ಪ್ರಶ್ನಿಸಿದರು.

ನಾವು ಶಿಲಾಯುಗದಲ್ಲಿ ಇದ್ದೇವಾ: ಯಶ್ವಂತ್​​ ಗೌಡ ಪ್ರಶ್ನೆ

ಶಾಸಕ ಯಶ್ವಂತ್ ಗೌಡ ಮಾತನಾಡಿ, ನಾವು ಇನ್ನೂ ಶಿಲಾಯುಗದಲ್ಲಿರುವ ಭಾವನ ಬರುತ್ತದೆ. ಕಳೆದ ವರ್ಷದ ಕಲಬುರಗಿ, ಬೀದರ್‌ನಲ್ಲಿ ಮಗು ಮಾರಾಟ ಆಗಿದ್ದನ್ನು ಕೇಳಿದ್ದೇವೆ. ಅಭಿವೃದ್ಧಿ ಹೊಂದಿದ್ದೇವೆ ಎಂದು ಹೇಳುತ್ತೇವೆ. ಶೋಷಿತ ಜನಾಂಗಕ್ಕೆ ಸೇರಿದ ಮಹಿಳೆ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಳು. ಆದರೆ, ಆಸ್ಪತ್ರೆಯ ನರ್ಸ್‌ ಆಕೆಯನ್ನು ಪುಸಲಾಯಿಸಿ ಮಗು ಮಾರಾಟಕ್ಕೆ ಮುಂದಾಗಿದ್ದಾರೆ.

ಘಟನೆ ಬಗ್ಗೆ ಮಾಧ್ಯಮಗಳಲ್ಲಿ ಬಂದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಶೋಷಿತ ವರ್ಗ ಮಗು ಮಾರಾಟದ ಪರಿಸ್ಥಿತಿಗೆ ಬಂದಿದೆ ಎಂದರೆ ಸರ್ಕಾರಗಳು ಯಾವ ರೀತಿಯ ಸ್ಪಂದಿಸುತ್ತಿದೆ ಎಂದು ಇದರಿಂದ ತಿಳಿಯುತ್ತದೆ ಎಂದರು. ಇಂತಹ ಪ್ರಕರಣಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಘಟನೆ ನಡೆದಿರುವುದು ನಿಜ.. ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ ಎಂದ ಮಾಧುಸ್ವಾಮಿ

ಕಾನೂನು ಸಚಿವ ಜೆಸಿ ಮಾಧುಸ್ವಾಮಿ, ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು. ಈ ವೇಳೆ ಎಂದು ನಿಂತ ಬಂಡೆಪ್ಪ ಕಾಶೆಂಪೂರ್‌, ರಾಜ್ಯದಲ್ಲಿ ಇಂತಹ ಕ್ರಮಗಳು ನಡೆಯದಂತೆ ಸರ್ಕಾರ ಗಮನ ಹರಿಸಬೇಕು ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.