ನೆಲಮಂಗಲ: ಅಂತ್ಯಕ್ರಿಯೆಯಲ್ಲಿ ಪಾಲ್ಗೊಳುವ ಜನರಿಗೆ ನೆರಳಾಗಲೆಂದು ಊರಿನ ಸ್ಮಶಾನದಲ್ಲಿ ಹೊಂಗೆ ಸಸಿ ನೆಡಲು ಮುಂದಾದ ಯುವಕನ ಸಾಮಾಜಿಕ ಕೆಲಸವನ್ನ ಶ್ಲಾಘಿಸದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ತಾಲೂಕಿನ ಗೌರಪುರದಲ್ಲಿ ನಡೆದಿದೆ.
ಅಂತ್ಯಕ್ರಿಯೆಗೆಂದು ಬರುವ ಜನರಿಗೆ ನೆರಳು ಕಲ್ಪಿಸುವ ಉದ್ದೇಶದಿಂದ ರುದ್ರೇಶ್ ಎಂಬುವರು ಸ್ವಂತ ಖರ್ಚಿನಲ್ಲಿ ಊರಿನ ಸ್ಮಶಾನದಲ್ಲಿ 30 ಹೊಂಗೆಯ ಸಸಿಗಳನ್ನು ನೆಡಲು ಮುಂದಾಗಿದ್ದರು.
ಆದ್ರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಗ್ರಾಮದ ನಂಜಪ್ಪ ಹಾಗೂ ಆತನ ಕುಟುಂಬಸ್ಥರು ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾಗಿ ಆರೋಪ ಕೇಳಿ ಬಂದಿದೆ. ದಾಬಸ್‌ಪೇಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.