ETV Bharat / city

ವಲಸೆ ಕಾರ್ಮಿಕರ ಮೇಲೆ ASI ದರ್ಪ ಆರೋಪ: ಯುಪಿ ಸಿಎಂಗೆ ನೆಟ್ಟಿಗರಿಂದ ಟ್ವೀಟ್​

ಉತ್ತರ ಪ್ರದೇಶ ಮೂಲದ ವಲಸೆ ಕಾರ್ಮಿಕರ ಮೇಲೆ ಬೆಂಗಳೂರಿನ ಕಾಡುಗೊಂಡನಹಳ್ಳಿ ಪೊಲೀಸ್​ ಠಾಣೆಯ ಎಎಸ್​​ಐ ಒಬ್ಬರು ದರ್ಪ ತೋರಿರುವ ಆರೋಪ ಕೇಳಿಬಂದಿದೆ.

asi onset
ಎಎಸ್​ಐ ದರ್ಪ
author img

By

Published : May 11, 2020, 5:19 PM IST

ಬೆಂಗಳೂರು: ಉತ್ತರ ಪ್ರದೇಶ ಮೂಲದ ಕಾರ್ಮಿಕರು ತಮ್ಮ ರಾಜ್ಯಕ್ಕೆ ತೆರಳಲು ವೈಟ್​ಫೀಲ್ಡ್​ ವಿಭಾಗದ ಕಾಡುಗೊಂಡನಹಳ್ಳಿ ಠಾಣೆಗೆ ನೋಂದಣಿಗೆ ತೆರಳಿದ್ದಾಗ ಅಲ್ಲಿನ ಎಎಸ್​​ಐ​ ದರ್ಪ ತೋರಿದ ಆರೋಪ ಕೇಳಿ ಬಂದಿದೆ.

ಎಎಸ್​ಐ ದರ್ಪ

ಉತ್ತರ ಪ್ರದೇಶ ಮೂಲದ ಕಾರ್ಮಿಕರು ಅವರನ್ನು ತಮ್ಮ ರಾಜ್ಯಗಳಿಗೆ ಕಳುಹಿಸಬೇಕೆಂದು ನೋಂದಣಿ ಮಾಡಿಸಿಕೊಳ್ಳಲು ಕಾಡುಗೊಂಡನಹಳ್ಳಿ ಪೊಲೀಸ್​ ಠಾಣೆಗೆ ತೆರಳಿದ್ದರು. ಈ ವೇಳೆ, ಉತ್ತರ ಪ್ರದೇಶ ಮೂಲದ ಕಾರ್ಮಿಕರ ಮೇಲೆ ಅಲ್ಲಿನ ಎಎಸ್​ಐ ಬೂಟುಕಾಲಿನಿಂದ ಒದ್ದು ದರ್ಪ ತೋರಿದ್ದಾರೆ ಎಂದು ಆರೋಪಿಸಲಾಗಿದೆ.

tweet to up cm
ಯುಪಿ ಸಿಎಂಗೆ ಟ್ವೀಟ್​

ಎಎಸ್ಐ ದರ್ಪ ತೋರಿರುವ ದೃಶ್ಯ ಮೊಬೈಲ್​​ನಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ಈ ಕಾರ್ಮಿಕರ ನೆರವಿಗೆ ಧಾವಿಸುವಂತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ಗೆ ಹಾಗೂ ವೈಟ್ ಫೀಲ್ಡ್ ಡಿಸಿಪಿ ಅನುಚೇತ್​ಗೆ ಟ್ಯಾಗ್ ಮಾಡಿ ನೆಟ್ಟಿಗರು ಟ್ವೀಟ್​ ಮಾಡಿದ್ದಾರೆ. ಸದ್ಯ ವೈಟ್​ಫೀಲ್ಡ್ ವಿಭಾಗ ಡಿಸಿಪಿ ಅನುಚೇತ್ ತನಿಖೆಗೆ ಆದೇಶಿಸಿದ್ದು ಎಸಿಪಿ‌ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.