ETV Bharat / city

ಗ್ಯಾಸ್ ಕಟರ್ ಬಳಸಿ ಬಾರ್​ನಲ್ಲಿ ಕಳ್ಳತನ ಮಾಡಿದ್ದ ಖದೀಮನ ಬಂಧನ

ಲಾಕ್​ಡೌನ್ ಹಿನ್ನೆಲೆ ಬೆಳಗ್ಗೆ 10 ಗಂಟೆಗೆ ವ್ಯಾಪಾರ ಮುಗಿಸಿ ಸಂಗ್ರಹವಾಗಿದ್ದ ಸುಮಾರು 90 ಸಾವಿರ ರೂ. ಡ್ರಾಯರ್​ನಲ್ಲಿ ಇಟ್ಟು ಬೀಗ ಹಾಕಿ ತೆರಳಿದ್ದರು. ಇದನ್ನ ಅರಿತಿದ್ದ ಖದೀಮ ಅದೇ ದಿನ ರಾತ್ರಿ ಬಾರ್ ಹಿಂಬದಿಯ ಕಿಟಕಿ ಸರಳುಗಳನ್ನು ಗ್ಯಾಸ್ ಕಟರ್ ಮೂಲಕ ಮುರಿದು 90 ಸಾವಿರ ರೂ. ಕಳ್ಳತನ ಮಾಡಿ ಪರಾರಿಯಾಗಿದ್ದ.

ಖದೀಮನ ಬಂಧನ
ಖದೀಮನ ಬಂಧನ
author img

By

Published : May 28, 2021, 8:15 PM IST

ಬೆಂಗಳೂರು: ಗ್ಯಾಸ್ ಕಟರ್ ಬಳಸಿ ರಾತ್ರೋರಾತ್ರಿ ಬಾರ್​ನ‌‌ ಕಿಟಕಿ‌ ಸರಳು ಮುರಿದು ಒಳನುಗ್ಗಿ 90 ಸಾವಿರ ರೂ. ನಗದು ಕಳ್ಳತನ‌ ಮಾಡಿದ್ದ ಖದೀಮನನ್ನು ಸಿ.ಕೆ.ಅಚ್ಚುಕಟ್ಟು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ‌.

ಇಟ್ಟಮಡು 2ನೇ ಹಂತದಲ್ಲಿರುವ ಮಂಜುನಾಥ ವೈನ್ ಸ್ಟೋರ್ ಮ್ಯಾನೇಜರ್ ವಿಶ್ವಕಾಂತ್ ಎಂಬುವರು ನೀಡಿದ ದೂರಿನ ಮೇರೆಗೆ ಖದೀಮ‌ ಹರೀಶ್ ಎಂಬಾತನನ್ನು ಬಂಧಿಸಲಾಗಿದೆ. ಕಳೆದ ಹತ್ತು ವರ್ಷಗಳಿಂದ ವೈನ್ ಸ್ಟೋರ್ ಮ್ಯಾನೇಜರ್ ಆಗಿರುವ ವಿಶ್ವಕಾಂತ್ ಮೇ 25 ರಂದು ಲಾಕ್​ಡೌನ್ ಹಿನ್ನೆಲೆ ಬೆಳಗ್ಗೆ 10 ಗಂಟೆಗೆ ವ್ಯಾಪಾರ ಮುಗಿಸಿ ಸಂಗ್ರಹವಾಗಿದ್ದ ಸುಮಾರು 90 ಸಾವಿರ ರೂ. ಡ್ರಾಯರ್​ನಲ್ಲಿ ಇಟ್ಟು ಬೀಗ ಹಾಕಿ ತೆರಳಿದ್ದರು.

ಇದನ್ನ ಅರಿತಿದ್ದ ಖದೀಮ ಅದೇ ದಿನ ರಾತ್ರಿ ಬಾರ್ ಹಿಂಬದಿಯ ಕಿಟಕಿ ಸರಳುಗಳನ್ನು ಗ್ಯಾಸ್ ಕಟರ್ ಮೂಲಕ ಮುರಿದು 90 ಸಾವಿರ ರೂ. ಕಳ್ಳತನ ಮಾಡಿ ಪರಾರಿಯಾಗಿದ್ದ. ಎಂದಿನಂತೆ ಬಾರ್ ಮ್ಯಾನೇಜರ್ ಚಂದ್ರಕಾಂತ್ ಮಾರನೇ ದಿನ ಬಂದು ನೋಡಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ‌. ಈ ಸಂಬಂಧ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಗೆ ದೂರು ನೀಡಿದ‌ ಮೇರೆಗೆ ಸಬ್ ಇನ್‌ಸ್ಪೆಕ್ಟರ್ ಮನೋಜ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಮೂರು ಗಂಟೆಗಳಲ್ಲಿ ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ವಿಚಾರಣೆ ವೇಳೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ.‌ ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ‌ ಪೊಲೀಸರು ಒಳಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.