ETV Bharat / city

ಯುವ ಪ್ರೇಮಿಗಳನ್ನು ಪೊಲೀಸರ ಸೋಗಿನಲ್ಲಿ ದೋಚುತ್ತಿದ್ದ ಮೂವರ ಬಂಧನ - bangalore crime news

ಪೊಲೀಸರಂತೆ ವರ್ತಿಸಿ ಏಕಾಂತದಲ್ಲಿರುವ ಪ್ರೇಮಿಗಳ ಬಳಿ ಹೋಗುತ್ತಿದ್ದ ಈ ದರೋಡೆಕೋರರು ಅವರಲ್ಲಿದ್ದ ಚಿನ್ನ, ಹಣ ಹಾಗೂ ಇನ್ನಿತರೆ ವಸ್ತುಗಳನ್ನು ಬಲವಂತವಾಗಿ ಪಡೆದುಕೊಂಡು ಪರಾರಿಯಾಗುತ್ತಿದ್ದರು.

Arrest of robbers in bangalore
ಪೊಲೀಸರ ಸೋಗಿನಲ್ಲಿ ದೋಚುತ್ತಿದ್ದ ಮೂವರ ಬಂಧನ
author img

By

Published : Aug 9, 2021, 7:04 AM IST

ಬೆಂಗಳೂರು: ಪೊಲೀಸರ ವೇಷದಲ್ಲಿ ಬಂದು ಪ್ರೇಮಿಗಳು ಹಾಗೂ ಒಂಟಿಯಾಗಿ ಓಡಾಡುವವರನ್ನು ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ ಮೂವರನ್ನು ತಲಘಟ್ಟಪುರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ತಲಘಟ್ಟಪುರದ ನಿವಾಸಿ ಶಿವಕುಮಾರ್, ಪ್ರವೀಣ್ ಕುಮಾರ್, ರಘು ಬಂಧಿತರು. ಈ ಆರೋಪಿಗಳಿಂದ 3.10 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ, 1.50 ಲಕ್ಷ ರೂ., 1 ಬೇಡಿ, 1 ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ದರೋಡೆ, ಸುಲಿಗೆ ಸೇರಿದಂತೆ ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ನಗರದ ಹೊರವಲಯದ ರಸ್ತೆಗಳಲ್ಲಿ ಏಕಾಂತವಾಗಿ ಮಾತನಾಡುತ್ತಿದ್ದ ಯುವ ಪ್ರೇಮಿಗಳ ಬಳಿ ಹೋಗಿ ತಾವು ಪೊಲೀಸರೆಂದು ಹೇಳಿ ನಕಲಿ ಪೊಲೀಸ್ ಗುರುತಿನ ಚೀಟಿ, ನಕಲಿ ಹ್ಯಾಂಡ್‍ಕಪ್ ತೋರಿಸಿ ಅವರಿಂದ ಚಿನ್ನದ ಸರ, ಹಣ ಹಾಗೂ ಮೊಬೈಲ್‍ಗಳನ್ನು ಸುಲಿಗೆ ಮಾಡಿ ಪರಾರಿಯಾಗುತ್ತಿದ್ದರು. ಇವರ ವಿರುದ್ಧ ಈ ಹಿಂದೆ ತಲಘಟ್ಟಪುರ, ರಾಮನಗರ, ಕಗ್ಗಲೀಪುರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು. ಅಪರಾಧ ಪ್ರಕರಣಗಳಲ್ಲಿ ಸಿಲುಕಿ ಬಂಧಿತರಾಗುವ ಆರೋಪಿಗಳು ಜೈಲಿಗೆ ಹೋಗಿ ಬಳಿಕ ಜಾಮೀನಿನ ಮೇಲೆ ಹೊರ ಬಂದು ಮತ್ತೆ ಹಳೆ ಚಾಳಿಯನ್ನೇ ಮುಂದುವರೆಸುತ್ತಿದ್ದರು.

ಬೈಕ್ ಕಳವು ದೂರಿನಿಂದ ಆರೋಪಿಗಳು ಪತ್ತೆ:

ಬನಶಂಕರಿ 6ನೇ ಹಂತದ ನಿವಾಸಿ ನಾಗಭೂಷಣ್ ಏಪ್ರಿಲ್ 19ರಂದು ತಮ್ಮ ಆಕ್ಸಿಸ್ ಸ್ಕೂಟರ್ ಅ​​ನ್ನು ಮನೆ ಮುಂದೆ ನಿಲ್ಲಿಸಿದ್ದರು. ಮರುದಿನ ಆ ಸ್ಕೂಟರ್ ಕಳ್ಳತನವಾಗಿತ್ತು. ಈ ಬಗ್ಗೆ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದರು. ಈ ದೂರಿನನ್ವಯ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಮೂವರು ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಇವರನ್ನು ವಿಚಾರಣೆ ನಡೆಸಿದಾಗ ಪೊಲೀಸರು ಸೋಗಿನಲ್ಲಿ ದರೋಡೆ ಮಾಡುತ್ತಿದ್ದ ಸಂಗತಿ ಗೊತ್ತಾಗಿದೆ.

ರಾಮನಗರದ ಬೆಜರಹಳ್ಳಿಕಟ್ಟೆ ಗೇಟ್‍ನಿಂದ ಮಂಚೇಗೌಡನ ದೊಡ್ಡಿಗೆ ಹೋಗುವ ರಸ್ತೆ ಬಳಿ ಮಹೇಶ್ ಎಂಬುವವರನ್ನು ಇತ್ತೀಚೆಗೆ ಆರೋಪಿಗಳು ಅಡ್ಡಗಟ್ಟಿದ್ದರು. ಈ ಪೈಕಿ ರಘು ತನ್ನ ಹಳೆ ಹೋಂಗಾರ್ಡ್ ಐಡಿ ಕಾರ್ಡ್, ಜೆರಾಕ್ಸ್ ಪ್ರತಿ ಹಾಗೂ ಬೇಡಿಯನ್ನು ತೋರಿಸಿ ಹಣ ಕೊಡುವಂತೆ ಕೇಳಿದ್ದ. ಕೊಡದೇ ಇದ್ದಾಗ ಬಟನ್ ಚಾಕು ತೋರಿಸಿ ಬೆದರಿಸಿ ಮಹೇಶ್‍ನನ್ನು ಕಾರಿನಲ್ಲಿ ಕೂರಿಸಿಕೊಂಡು ವಿವಿಧ ಎಟಿಎಂ ಕೇಂದ್ರಗಳಿಗೆ ಕರೆದೊಯ್ದು ಲಕ್ಷಾಂತರ ರೂ. ದೋಚಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.