ಬೆಂಗಳೂರು: ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಹಠಾತ್ ದಾಳಿ ನಡೆಸಿ, ದರೋಡೆಗೆ ಸಂಚು ರೂಪಿಸಿದ್ದ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ರೌಡಿಶೀಟರ್ ಷಾ ನವಾಜ್ಹ್ ಸಹಚರರಾಗಿರುವ ತಸ್ಲಾಂ, ಶೇಖ್ ತನ್ವೀರ್, ಮಹಮ್ಮದ್ ಸುಲ್ತಾನ್, ಸೈಯದ್ ಫೈರೋಜ್ಹ್ ಮತ್ತು ಇಮ್ರಾನ್ ಪಾಷಾ ಬಂಧಿತ ಆರೋಪಿಗಳು. ಬಂಧಿತರಿಂದ 3 ಲಾಂಗು, ಕಾರದ ಪುಡಿ ಪೊಟ್ಟಣ ವಶಕ್ಕೆ ಪಡೆಯಲಾಗಿದೆ.
ಈಜಿಪುರದ ಇನ್ಫ್ಯಾಂಟ್ ಜೀಸಸ್ ಚರ್ಚ್ ಬಳಿ ದಾಳಿ ನಡೆಸಿ ಆರೋಪಿಗಳ ಹೆಡೆಮುರಿಕಟ್ಟಿರುವ ಸಿಸಿಬಿ ಪೊಲೀಸರು, ವಿವೇಕ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.