ETV Bharat / city

ವಿಧಾನ ಪರಿಷತ್‌ನಲ್ಲಿಂದು ಮತಾಂತರ ನಿಷೇಧ ಮಸೂದೆ ಮಂಡನೆ: ಯಾರು ಏನ್​ ಹೇಳಿದ್ರು?

ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ(ಮತಾಂತರ ನಿಷೇಧ ಮಸೂದೆ) ಇಂದು ವಿಧಾನಪರಿಷತ್​​ನಲ್ಲಿ ಮಂಡನೆಯಾಗಲಿದೆ.

anti-conversion bill in the Karnataka Legislative Council

author img

By

Published : Sep 15, 2022, 12:20 PM IST

Updated : Sep 15, 2022, 12:27 PM IST

ಬೆಂಗಳೂರು: ರಾಜ್ಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಮತಾಂತರ ನಿಷೇಧ ವಿಧೇಯಕ ಇಂದು ವಿಧಾನಪರಿಷತ್​​​ನಲ್ಲಿ ಮಂಡನೆಯಾಗಲಿದೆ. ಈ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರು ಹೇಳಿದ್ದೇನು ನೋಡೋಣ.

"ವಿಧಾನಪರಿಷತ್​​ನಲ್ಲೂ ಈ ಮಸೂದೆ​ ಪಾಸ್​ ಆಗಲಿದೆ. ಮತಾಂತರಕ್ಕೆ ಯಾರೂ ಬೆಂಬಲ ನೀಡಲ್ಲ. ಜೊತೆಗೆ ಯಾವುದೇ ಮಾಫಿಯಾಗೆ ನಾವು ಹೆದರುವುದಿಲ್ಲ" ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಹೇಳಿದರು.

ಬಿಜೆಪಿ ಎಂಎಲ್​ಸಿ ಡಿ.ಎಸ್.ಅರುಣ್ ಪ್ರತಿಕ್ರಿಯಿಸಿ​, "ಈ ಮಸೂದೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿಸಬೇಕು. ವಿಧಾನಪರಿಷತ್​​ನಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯಬೇಕು. ನಾವೆಲ್ಲರೂ ಉತ್ಸುಕರಾಗಿದ್ದು, ಮಸೂದೆ ಅಂಗೀಕಾರವಾಗಲಿದೆ" ಎಂದರು.

ಇದನ್ನೂ ಓದಿ: ಮತಾಂತರ ನಿಷೇಧ ವಿಧೇಯಕ ಮಂಡನೆ: ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ ಬೊಮ್ಮಾಯಿ ಸರ್ಕಾರ!

ಇದೇ ವಿಚಾರವಾಗಿ ಮಾತನಾಡಿರುವ ಕಾಂಗ್ರೆಸ್ ಎಂಎಲ್​ಸಿ ನಾಗರಾಜ್​, "ರಾಜ್ಯದಲ್ಲಿ ಭಾರಿ ಮಳೆಯ ನಂತರ ಅನೇಕ ಸಮಸ್ಯೆಗಳು ಉಂಟಾಗಿವೆ. ಇದರ ಮಧ್ಯದಲ್ಲಿ ಈ ಮಸೂದೆ​ ಪಾಸ್​ ಮಾಡುವ ತುರ್ತು ಏನಿದೆ? ಜನರು ಸಹೋದರತ್ವದಿಂದ ಬದಕಲು ಇಷ್ಟಪಡುತ್ತಾರೆ. ಈ ಮಸೂದೆ​ ಜನರಿಗೆ ಸ್ವೀಕಾರಾರ್ಹವಲ್ಲ" ಎಂದು ಹೇಳಿದರು.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಈ ವಿಧೇಯಕ ಅಂಗೀಕಾರಗೊಂಡಿತ್ತು. ಆದರೆ, ಸಂಖ್ಯಾಬಲದ ಕೊರತೆಯ ಕಾರಣ ವಿಧಾನಪರಿಷತ್ತಿನಲ್ಲಿ ಒಪ್ಪಿಗೆ ಸಿಕ್ಕಿರಲಿಲ್ಲ.

Last Updated : Sep 15, 2022, 12:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.