ETV Bharat / city

'ವಾಸಿಸುವವನೇ ನೆಲದೊಡೆಯ' ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಅನುಷ್ಠಾನಕ್ಕೆ ಗ್ರಹಣ - ಸಿದ್ದರಾಮಯ್ಯ ಸರ್ಕಾರ

2017ರಲ್ಲಿ ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದಿದ್ದ 'ವಾಸಿಸುವವನೇ ನೆಲದೊಡೆಯ' ಭೂ ಸುಧಾರಣಾ ಕಾಯ್ದೆ-1961ರ ತಿದ್ದುಪಡಿ ಕಾಯ್ದೆ ಜಾರಿಗೆ ಬಂದು 4 ವರ್ಷ ಕಳೆದರೂ ಈವರೆಗೂ ಅನುಷ್ಠಾನಕ್ಕೆ ಬಂದಿಲ್ಲ. ಈ ತಿದ್ದುಪಡಿ ಕಾಯ್ದೆಗೆ ರಾಷ್ಟ್ರಪತಿಗಳು ಅಂಕಿತವನ್ನೂ ಹಾಕಿದ್ದರು.

Allegations of Official Negligence on the Implementation of the Land Reform Amendment Act
'ವಾಸಿಸುವವನೇ ನೆಲದೊಡೆಯ' ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಅನುಷ್ಠಾನಕ್ಕೆ ಗ್ರಹಣ!
author img

By

Published : Aug 31, 2021, 9:25 AM IST

Updated : Aug 31, 2021, 9:42 AM IST

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದಿದ್ದ ಐತಿಹಾಸಿಕ ವಾಸಿಸುವವನೇ ನೆಲದೊಡೆಯ ಎಂಬ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಅನುಷ್ಠಾನ ಹಂತದಲ್ಲೇ ವಿಫಲವಾಗಿದೆ. ಕಾಯ್ದೆಗೆ ರಾಷ್ಟ್ರಪತಿಗಳ ಅಂಕಿತ ಸಿಕ್ಕಿ ನಾಲ್ಕು ವರ್ಷ ಕಳೆದರೂ ಸಮಗ್ರ ಅನುಷ್ಠಾನದಲ್ಲಿ ಎಡವಿ ಬಿದ್ದಿದೆ.

'ವಾಸಿಸುವವನೇ ನೆಲದೊಡೆಯ' ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಅನುಷ್ಠಾನಕ್ಕೆ ಗ್ರಹಣ

ವಾಸಿಸುವವನೇ ನೆಲದೊಡೆಯ, ಭೂ ಸುಧಾರಣಾ ಕಾಯ್ದೆ-1961ಗೆ ತಿದ್ದುಪಡಿ ತರುವ ಮೂಲಕ ಈ ಐತಿಹಾಸಿಕ ಕಾಯ್ದೆ 2017ರಂದು ವಿಧಾನಮಂಡಲದಲ್ಲಿ ಅಂಗೀಕಾರಗೊಂಡಿತ್ತು. ಅಂದಿನ ಸಿದ್ದರಾಮಯ್ಯ ಸರ್ಕಾರ ಈ ಐತಿಹಾಸಿಕ, ಕ್ರಾಂತಿಕಾರಿ ವಾಸಿಸುವವನೇ ನೆಲದೊಡೆಯ ಕಾಯ್ದೆಯನ್ನು ಜಾರಿಗೆ ತಂದಿದ್ದರು. ಅಂದಿನ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಈ ತಿದ್ದುಪಡಿ ಮಸೂದೆಯನ್ನು ಮಂಡಿಸಿದ್ದರು. ಉಭಯ ಸದನಗಳಲ್ಲೂ ವಿಧೇಯಕ ಅಂಗೀಕಾರಗೊಂಡು ಬಳಿಕ ರಾಷ್ಟ್ರಪತಿಗಳ ಅಂಕಿತವೂ ಸಿಕ್ಕಿತ್ತು. ಸಮಾಜದ ಕೆಳಸ್ತರದ ಲಕ್ಷಾಂತರ ಕುಟುಂಬಗಳಿಗೆ ವಾಸದ ಸ್ಥಳದ ಮೇಲೆ ಮಾಲೀಕತ್ವದ ಹಕ್ಕು ಒದಗಿಸುವ 'ವಾಸಿಸುವವನೇ ನೆಲದೊಡೆಯ' ಘೋಷಣೆಯೊಂದಿಗೆ ರಾಜ್ಯ ಸರ್ಕಾರ ರೂಪಿಸಿದ್ದ ಕಾಯ್ದೆ ಇದಾಗಿದೆ.

ಏನಿದು ವಾಸಿಸುವವನೇ ನೆಲದೊಡೆಯ ಶಾಸನ?

ಈ ಶಾಸನದ ಮೂಲಕ ರಾಜ್ಯದಲ್ಲಿರುವ 58 ಸಾವಿರ ಗೊಲ್ಲರ ಹಟ್ಟಿ, ಲಂಬಾಣಿ ತಾಂಡಾ, ವಡ್ಡರ ಹಟ್ಟಿ, ಕುರುಬರ ಹಟ್ಟಿ, ನಾಯಕರ ಹಟ್ಟಿ, ಮಜಾರೆ ಗ್ರಾಮ, ದೊಡ್ಡಿ, ಪಾಳ್ಯ, ಕ್ಯಾಂಪ್‌, ಗೌಳಿ ದೊಡ್ಡಿ, ಕಾಲೋನಿಯಂತಹ ದಾಖಲೆ ಇಲ್ಲದ ಜನ ವಸತಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ ಸರ್ಕಾರದ ಎಲ್ಲ ಸವಲತ್ತು ದೊರೆಯಲಿದೆ.

ರಾಜ್ಯದ 58 ಸಾವಿರ ಜನ ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ ವಾಸಿಸುವವನೇ ಮನೆಯೊಡೆಯ ಎಂಬ ಹಕ್ಕು ನೀಡುವ ಕಾಯ್ದೆ ಇದಾಗಿದೆ. ತಾಂಡಾ, ಹಟ್ಟಿ, ದೊಡ್ಡಿ, ಪಾಳ್ಯ ಮತ್ತು ಕ್ಯಾಂಪ್‌ಗಳಂಥ ದಾಖಲೆ ಇಲ್ಲದ ಜನವಸತಿ ಪ್ರದೇಶಗಳಲ್ಲಿನ ವಾಸದ ಮನೆಗಳನ್ನು ವಾಸವಾಗಿರುವವರ ಹೆಸರಿನಲ್ಲೇ ನೋಂದಣಿ ಮಾಡಿಕೊಳ್ಳುವ ಹಕ್ಕನ್ನು ಈ ಕರ್ನಾಟಕ ಭೂ ಸುಧಾರಣೆಗಳ (ತಿದ್ದುಪಡಿ) ಕಾಯ್ದೆ ನೀಡುತ್ತದೆ.

ರೂಪಿಸಿರುವ ಕಾಯ್ದೆಯ ಮಾರ್ಗಸೂಚಿ ಏನು?

ಕರ್ನಾಟಕ ಭೂ ಸುಧಾರಣಾ ಕಾಯ್ದೆ,1961ರ ಕಲಂ 38ಎ ಅಡಿಯಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ವಾಸದ ಮನೆ ಹಾಗೂ ಬಳಕೆಯ ಜಾಗದ ವಿಸ್ತೀರ್ಣವನ್ನು ಸಕ್ರಮಗೊಳಿಸಲು 2-ಎಫ್ ನಮೂನೆಯಲ್ಲಿ ಸಹಾಯಕ ಆಯುಕ್ತರಿಗೆ ಅರ್ಜಿ ಸಲ್ಲಿಸಬೇಕು. ಅರ್ಹ ಫಲಾನುಭವಿಗಳಿಗೆ 4 ಸಾವಿರ ಚ.ಅಡಿ ವಿಸ್ತೀರ್ಣದವರೆಗೆ ಜಾಗವನ್ನು ಮಂಜೂರು ಮಾಡಬಹುದು. ಈ ಅರ್ಜಿದಾರರು ಸಲ್ಲಿಸಿದ ಅರ್ಜಿ ಮತ್ತು ಅರ್ಜಿಗಳೊಂದಿಗೆ ಲಗತ್ತಿಸಿದ ದಾಖಲಾತಿಗಳನ್ನು ಪರಿಶೀಲಿಸಿ ಸಹಾಯಕ ಆಯುಕ್ತರು ಅರ್ಹ ಫಲಾನುಭವಿಗಳನ್ನು ವಾಸದ ಮನೆ ಹಾಗೂ ಬಳಕೆಯ ಜಾಗದ ಮಾಲೀಕರೆಂದು ನೋಂದಾಯಿಸುವ ಕುರಿತು ಆದೇಶ ಹೊರಡಿಸಬೇಕು.

ಸಹಾಯಕ ಆಯುಕ್ತರ ಆದೇಶದ ನಂತರ 7 ದಿನಗಳವರೆಗೆ ಅರ್ಜಿದಾರರ ವಿರುದ್ಧ ಯಾವುದೇ ಆಕ್ಷೇಪಣೆ ಸ್ವೀಕೃತವಾಗದಿದ್ದಲ್ಲಿ ತಹಶೀಲ್ದಾರ್ 2 ಎಲ್ ನಮೂನೆಯಲ್ಲಿ ವಾಸದ ಮನೆ ಹಾಗೂ ಬಳಕೆಯ ಜಾಗಕ್ಕೆ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಬೇಕು. ವಾಸದ ಮನೆ ಹಾಗೂ ಬಳಕೆಯ ಜಾಗವನ್ನು ಹಕ್ಕುಪತ್ರ ಪಡೆದ ದಿನಾಂಕದಿಂದ 15 ವರ್ಷಗಳವರೆಗೆ ಮಾರಾಟ, ದಾನ, ವಿನಿಮಯ, ಭೋಗ್ಯ ಮತ್ತು ಅಡಮಾನದ ಮೂಲಕ ಪರಭಾರೆ ಮಾಡುವಂತಿಲ್ಲ.

ಅನುಷ್ಠಾನ ಹಂತದಲ್ಲಿ ವೈಫಲ್ಯ ಕಂಡ ಕಾಯ್ದೆ:

ಕ್ರಾಂತಿಕಾರಕ, ಐತಿಹಾಸಿಕ ಎಂದೇ ಬಿಂಬಿತವಾದ ಈ ಕಾಯ್ದೆ ಅನುಷ್ಠಾನ ಹಂತದಲ್ಲಿ ವೈಫಲ್ಯ ಕಂಡಿದೆ. ಅಧಿಕಾರಿ ವರ್ಗ ಇದರ ಅನುಷ್ಠಾನ ಮಾಡುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ವಾಸಿಸುವವನೇ ನೆಲದೊಡೆಯ ಎಂಬ ಘೋಷಣೆಯೊಂದಿಗೆ ರೂಪಿಸಲಾದ ಯೋಜನೆ ಕೇವಲ ಘೋಷಣೆಯಾಗೇ ಉಳಿದಿದೆ. ವಾಸ್ತವದಲ್ಲಿ ಇದರ ಅನುಷ್ಠಾನ ಕಾಣುತ್ತಿಲ್ಲ.

ಕಾಯ್ದೆ ಬರುವಲ್ಲಿ ಸಕ್ರಿಯವಾಗಿ ಹೋರಾಟ ನಡೆಸಿದ್ದ ಕಾಂಗ್ರೆಸ್‌ನ ಮಾಜಿ ಶಾಸಕ ಶಿವಮೂರ್ತಿ ನಾಯ್ಕ ಕಾಯ್ದೆ ಅನುಷ್ಠಾನಗೊಳ್ಳದ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಈ ಸಂಬಂಧ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದು ಕಾಯ್ದೆ ಅನುಷ್ಠಾನ ಸಂಬಂಧ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ. ಈ ಮಸೂದೆ ಕುರಿತಂತೆ ಜಿಲ್ಲಾಧಿಕಾರಿಗಳು, ತಹಶೀಲ್ದಾರ್, ಎಸಿಗಳು ಈತನಕ ನೋಡಿಯೇ ಇಲ್ಲ ಎಂದು ಆರೋಪಿಸಿದ್ದಾರೆ. ಕಾಯ್ದೆ ಅನುಷ್ಠಾನಕ್ಕೆ ಅಧಿಕಾರಿಗಳು ಹಾಗೂ ಸರ್ಕಾರಗಳಲ್ಲಿ ಇಚ್ಛಾ ಶಕ್ತಿ ಕೊರತೆ ಇದೆ. ಈ ಸಂಬಂಧ ನೂತನ ಸಿಎಂ ಬೊಮ್ಮಾಯಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಭೂ ಸುಧಾರಣಾ ಕಾಯ್ದೆ ತಿದ್ದುಪಡಿ: ನಿಲುವು ಸಮರ್ಥಿಸಿಕೊಂಡ ರಾಜ್ಯ ಸರ್ಕಾರ

ಈ ಸಂಬಂಧ ಪ್ರಸ್ತಾವನೆಗಳನ್ನು ಪರಿಶೀಲಿಸಿ ಕಂದಾಯ ಗ್ರಾಮಗಳಾಗಿ ಘೋಷಿಸಲು ಕಂದಾಯ ಇಲಾಖೆಯಲ್ಲಿ ವಿಶೇಷ ಕೋಶ ರಚನೆಯಾಗಿದೆ. ಆದರೆ, ಅಧಿಕಾರಿವರ್ಗದ ನಿರಾಸಕ್ತಿ ಹಾಗೂ ಪಟ್ಟಭದ್ರ ಹಿತಾಸಕ್ತಿಗಳ ಅಡ್ಡಿಯಿಂದಾಗಿ ಅರ್ಜಿ ಸ್ವೀಕಾರ ಅಷ್ಟಕಷ್ಟೇ ಇದೆ ಎಂದು ಮೂಲಗಳು ತಿಳಿಸಿವೆ. ಜೊತೆಗೆ ಕಾಯ್ದೆ ಜಾರಿಗಾಗಿ ಹೊರಡಿಸಿದ ಆದೇಶದಲ್ಲಿನ ದೋಷದಿಂದ ಪ್ರಸ್ತಾವನೆಗಳೇ ಸಲ್ಲಿಕೆಯಾಗಿಲ್ಲ. ಕಂದಾಯ ನಿರೀಕ್ಷಕರು, ಸರ್ವೇ ಅಧಿಕಾರಿಗಳು, ಪಿಡಿಒಗಳು ಸಮನ್ವಯದ ಮೂಲಕ ಅಗತ್ಯ ಜನವಸತಿ ಪ್ರದೇಶಗಳ ಮಾಹಿತಿ ಕಲೆಹಾಕಿ ಜಿಲ್ಲಾಧಿಕಾರಿಗಳು ವಿಶೇಷ ಕೋಶಕ್ಕೆ ಪ್ರಸ್ತಾವನೆ ಸಲ್ಲಿಸಬೇಕಾಗಿದೆ. ಆದರೆ ಪ್ರಕ್ರಿಯೆಯಲ್ಲಿ ನಿರಾಸಕ್ತಿ, ವಿಳಂಬ ತೋರಲಾಗುತ್ತಿದೆ ಎನ್ನಲಾಗಿದೆ.

ಕಂದಾಯ ಇಲಾಖೆ ಹೇಳುವುದೇನು?

ಕಾಯ್ದೆ ಅನುಷ್ಠಾನದಲ್ಲಿ ವಿಫಲವಾಗಿರುವ ಬಗ್ಗೆ ಕಂದಾಯ ಇಲಾಖೆಯೇ ಒಪ್ಪಿಕೊಂಡಿದೆ. ಈ ಹಿಂದಿನ ಸಿಎಂ ಯಡಿಯೂರಪ್ಪ ಕಾಯ್ದೆ ಅನುಷ್ಠಾನ ಪ್ರಗತಿ ಸಂಬಂಧ ಅವಲೋಕಿಸಿ ಡಿಸಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಇಲಾಖೆ ತಿಳಿಸಿದೆ.

ಈಗಾಗಲೇ ಕಂದಾಯ ಸಚಿವರು ವಿಡಿಯೋ ಸಂವಾದದ ಮೂಲಕ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಶೀಘ್ರವಾಗಿ ಪ್ರಗತಿ ಸಾಧಿಸಲು ಸೂಚನೆ ನೀಡಿದ್ದಾರೆ. ಅಪರ ಮುಖ್ಯ ಕಾರ್ಯದರ್ಶಿಗಳು‌ ಕೂಡ ಈ ಕುರಿತು ಬಾಕಿ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಭೂ ಸುಧಾರಣಾ ಕಾಯ್ದೆ: ವ್ಯಾಪಕ ಪ್ರಚಾರ ನೀಡುವಂತೆ ಹೈಕೋರ್ಟ್ ನಿರ್ದೇಶನ

Last Updated : Aug 31, 2021, 9:42 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.