ಬೆಂಗಳೂರು: ಮದ್ಯಪಾನ ಮಾಡಿ ವಾಹನ ಚಲಾಯಿಸುವುದರಿಂದ ಆಗುವ ಅನಾಹುತಗಳನ್ನು ತಪ್ಪಿಸಲು ಹೊಸ ತಂತ್ರಜ್ಞಾನದ “ಅಲ್ಕೋ ಲಾಕ್‘’ ಎಂಬ ಉಪಕರಣವನ್ನು ತಯಾರಿಸಲಾಗಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಸಂಚಾರ ನಿಯಮಗಳ ಪಾಲನೆಯಲ್ಲಿ ಆಗುತ್ತಿದ್ದ ಬಹುದೊಡ್ಡ ಉಲ್ಲಂಘನೆ ಅಂದ್ರೆ ಡ್ರಿಂಕ್ ಅಂಡ್ ಡ್ರೈವ್. ಇದನ್ನು ತಡೆಗಟ್ಟಲು “ಆಲ್ಕೋ ಲಾಕ್“ ಎಂಬ ಈ ಉಪಕರಣವನ್ನು ದೇಶೀಯವಾಗಿ ವಿಜಯವಾಡದ ರಾಮ್ ನಾಥ್ ಮಂದಲಿ ಎಂಬುವವರು ಅಭಿವೃದ್ಧಿಪಡಿಸಿದ್ದಾರೆ. ಇವರು ಫ್ರೈಡ್ ಆಟೋ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ನ ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದು, ಸುಮಾರು ಹದಿನೈದು ವರ್ಷಗಳ ಸತತ ಪರಿಶ್ರಮ, ಸಂಶೋಧನೆ, ಅಭಿವೃದ್ಧಿ ಮೂಲಕ ಈ ತಂತ್ರಜ್ಞಾವನ್ನು ಸಿದ್ಧಪಡಿಸಿದ್ದಾರೆ.
ಇದನ್ನು ನಾಲ್ಕು ಚಕ್ರಗಳ ಯಾವುದೇ ವಾಹನಗಳಿಗೆ ಅಳವಡಿಸಬಹುದಾಗಿದೆ. ಮದ್ಯಪಾನದ ಪ್ರಮಾಣವನ್ನು ಉಸಿರಾಟದ ಮೂಲಕ ಅಳೆಯಲಾಗುತ್ತದೆ. ಇದೇ ಮಾದರಿಯ “ ಆಲ್ಕೋ ಲಾಕ್ “ ಉಪಕರಣವನ್ನು ವಾಹನಗಳಿಗೆ ಅಳವಡಿಸಲಾಗುತ್ತದೆ. ಪ್ರತಿ ಬಾರಿ ವಾಹನ ಚಾಲನೆ ಮಾಡುವ ಮುನ್ನ ವಾಹನ ಚಾಲಕರು ಜೋರಾಗಿ ಈ ಉಪಕರಣವನ್ನು ಊದ ಬೇಕಾಗುತ್ತದೆ. ಹಾಲ್ಕೋಹಾಲ್ ಪ್ರಮಾಣ ನಿರ್ದಿಷ್ಟ ಪರಿಮಿತಿಗಿಂತ ಹೆಚ್ಚಾಗಿದ್ದರೆ ವಾಹನ ಚಾಲೂ ಆಗುವುದಿಲ್ಲ. ಅಂತಹ ತಂತ್ರಜ್ಞಾನವನ್ನು ಇದರಲ್ಲಿ ಅಳವಡಿಸಲಾಗಿದೆ.