ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಸಂಯೋಜಿತ ಕಾಲೇಜುಗಳಲ್ಲಿ 2020-21ನೇ ಸಾಲಿನ ಸ್ನಾತಕೋತ್ತರ ಕೋರ್ಸ್ಗಳ ಉಳಿಕೆ ಸೀಟ್ಗಳ ಪ್ರವೇಶ ಪ್ರಕ್ರಿಯೆಯು ಫೆಬ್ರವರಿ 22, 23 ಮತ್ತು 24 ರಂದು ಬೆಳಗ್ಗೆ 9 ಗಂಟೆಯಿಂದ ನಡೆಯಲಿದೆ.
22 ಮತ್ತು 24ರಂದು ಜ್ಞಾನಭಾರತಿ ಹಾಗೂ ಹೆಚ್.ಎನ್. ಸಭಾಂಗಣದಲ್ಲಿ ಅರ್ಥಶಾಸ್ತ್ರ, ಇತಿಹಾಸ, ರಾಜ್ಯಶಾಸ್ತ್ರ ವಿಷಯಕ್ಕೆ ಸಂಬಂಧಿಸಿದ ಪ್ರವೇಶ ಪ್ರಕ್ರಿಯೆ ನಡೆಯಲಿದೆ. ಅದೇ ದಿನ ರಸಾಯನಶಾಸ್ತ್ರ, ಜೀವಶಾಸ್ತ್ರ ಸೇರಿದಂತೆ ಉಳಿದ ಎಲ್ಲಾ ವಿಷಯಗಳ ಪ್ರವೇಶ ಪ್ರಕ್ರಿಯೆ ಪ್ರೊ. ಕೆ.ವೆಂಕಟಗಿರಿ ಗೌಡ ಸಭಾಂಗಣ ಹಾಗೂ ಜ್ಞಾನಭಾರತಿ ಆವರಣದಲ್ಲಿರುವ ಸಂಬಂಧಪಟ್ಟ ಸ್ನಾತಕೋತ್ತರ ವಿಭಾಗಗಳಲ್ಲಿ ನಡೆಯಲಿದೆ.
ಓದಿ: ರಾಜ್ಯದಲ್ಲಿ ಅಕ್ರಮ ಪಡಿತರ ಚೀಟಿ ಹಾವಳಿ: ಈವರೆಗೆ ಪತ್ತೆ ಮಾಡಿದ ಅಕ್ರಮ ಪಡಿತರ ಚೀಟಿ ಎಷ್ಟು ಗೊತ್ತಾ?
22 ಮತ್ತು 23ರಂದು ಜ್ಞಾನಭಾರತಿ ಕ್ಯಾಂಪಸ್ನಲ್ಲಿರುವ ಪ್ರೊ. ಎಂ.ಎಸ್. ತಿಮ್ಮಪ್ಪ ಸಭಾಂಗಣದ ಮನಃಶಾಸ್ತ್ರ ಬ್ಲಾಕ್ನಲ್ಲಿ ವಾಣಿಜ್ಯಶಾಸ್ತ್ರ (ಎಂ.ಕಾಂ) ಪ್ರವೇಶ ಪ್ರಕ್ರಿಯೆ ನಡೆಯಲಿದೆ.
ವಿದ್ಯಾರ್ಥಿಗಳು ಪ್ರವೇಶ ಪ್ರಕ್ರಿಯೆಯ ನಿಗದಿತ ಸಮಯದಲ್ಲಿ ಮೂಲ ದಾಖಲೆಗಳು ಹಾಗೂ ಶುಲ್ಕ ಪಾವತಿಸಬೇಕೆಂದು ಬೆಂಗಳೂರು ವಿವಿ ಪ್ರಕಟಣೆ ಹೊರಡಿಸಿದೆ.