ಬೆಂಗಳೂರು: ಪುನೀತ್ ರಾಜ್‌ಕುಮಾರ್ ಕನ್ನಡ ಚಿತ್ರರಂಗ ಕಂಡಿರುವ ಮೇರು ನಟ.. ಇಡೀ ಕರುನಾಡು ಇವರನ್ನ ಪ್ರೀತಿಯಿಂದ 'ಅಪ್ಪು' ಎಂದು ಕರೆಯುತ್ತಿತ್ತು. ಇನ್ನು ನೆಚ್ಚಿನ ನಟನಿಗೆ ಅಭಿಮಾನಿಗಳು 'ಪವರ್ ಸ್ಟಾರ್' ಎಂಬ ಬಿರುದನ್ನ ನೀಡಿದ್ದಾರೆ. ಚಿತ್ರರಂಗಕ್ಕೆ ಬಾಲ್ಯ ನಟನಾಗಿ ಪಾದಾರ್ಪಣೆ ಮಾಡಿ, ಭಕ್ತ ಪ್ರಹ್ಲಾದ್‌ನ ಪಾತ್ರಕ್ಕೆ ಜೀವ ತುಂಬಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಆದರೆ 46ನೇ ವಯಸ್ಸಿನ ಈ 'ಯುವರತ್ನ' ಶುಕ್ರವಾರ ಬೆಳಗ್ಗೆ ವ್ಯಾಯಾಮ ಮಾಡುತ್ತಿರುವಾಗ ಎದೆ ನೋವಿನಿಂದ ಕುಸಿದು ಬಿದ್ದು, ನಗರದ ವಿಕ್ರಮ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ವಿಧಿಯಾಟ ಬೇರೆಯೇ ಇತ್ತು. ವೈದ್ಯರ ಎಲ್ಲ ಪ್ರಯತ್ನಗಳು ವಿಫಲವಾಯಿತು. ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಹೃದಯಾಘಾತದಿಂದ ಆಸ್ಪತ್ರೆಗೆ ಬರುವ ದಾರಿಯಲ್ಲೇ ನಿಧರಾಗಿದ್ದರು.
ದಿವಂಗತ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ತಮ್ಮ ಸಿನಿ ಜರ್ನಿಯಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಾಯಕ ನಟನಾಗಿ 28 ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ.. 'ಅಪ್ಪು' ನಾಯಕ ನಟನಾಗಿ ಪುನೀತ್ ನಟಿಸಿರುವ ಮೊದಲ ಚಿತ್ರ. ನಂತರ ಸಾಲು ಸಾಲಾಗಿ ಒಂದಕ್ಕಿಂತ ಒಂದು ವಿಭಿನ್ನ ಪಾತ್ರಗಳಿರುವ ಚಿತ್ರಗಳಲ್ಲಿ ನಟಿಸುತ್ತಾ ಬಂದರು. ಇತ್ತೀಚೆಗಷ್ಟೆ ಇವರು ನಟಿಸಿರುವ ಚಿತ್ರ ಯುವರತ್ನ. ಕೊರೊನಾ ಕಾರಣದಿಂದಾಗಿ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಿತ್ತು.
'ಇಂಡಿಯನ್ ಮೈಕಲ್ ಜಾಕ್ಸನ್' ಪ್ರಭುದೇವ ಜೊತೆಗೆ ಹೆಜ್ಜೆ ಹಾಕಿದ 'ಪವರ್ ಸ್ಟಾರ್'
ಭಾರತದ ಮೈಕಲ್ ಜಾಕ್ಸನ್ ಎಂದು ಹೆಸರುಗಳಿಸಿರುವ ಪ್ರಭುದೇವ ಅವರ ಸಹೋದರ ನಾಗೇಂದ್ರ ಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಹೆಸರಿಡದ ಚಿತ್ರದಲ್ಲಿ ಬಹುಮುಖ್ಯ ಪಾತ್ರದಲ್ಲಿ ಪುನೀತ್ ರಾಜ್‌ಕುಮಾರ್ ಕಾಣಿಸಿಕೊಳ್ಳಲಿದ್ದಾರೆ.
ಹೊಸ ಚಿತ್ರದಲ್ಲಿ ಪುನೀತ್ ನಟನೆ
ತಮಿಳು ಚಿತ್ರವಾದ ಓ ಮೈ ಕಡವುಲೇ ರೀಮೇಕ್ ಇದಾಗಿದ್ದು, ನಟ ವಿಜಯ್ ಸೇತುಪತಿ ನಿರ್ವಹಿಸಿದ್ದ ಪಾತ್ರದಲ್ಲಿ ನಟ ಪುನೀತ್ ಕಾಣಿಸಿಕೊಳ್ಳಲಿದ್ದಾರೆ. ಆದರೆ ನಟ ಪುನೀತ್ ರಾಜ್‌ಕುಮಾರ್ ದೇವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಈ ಚಿತ್ರಕ್ಕೆ ಇಬ್ಬರು ನಾಯಕಿಯರಿದ್ದು, ಡಾರ್ಲಿಂಗ್ ಕೃಷ್ಣ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.
ಈ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಇತ್ತೀಚೆಗಷ್ಟೆ ಪ್ರಭುದೇವ ಅವರ ಜೊತೆಗೆ ಡ್ಯಾನ್ಸ್ ಮಾಡಿದ್ದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಇದನ್ನೂ ಓದಿರಿ: ಕಂಠೀರವ ಸ್ಟುಡಿಯೋದ ಅಪ್ಪನ ಸಮಾಧಿಯ ಪಕ್ಕದಲ್ಲೇ ಅಪ್ಪು ಅಂತ್ಯಕ್ರಿಯೆ..
ಭಾರತೀಯ ಚಿತ್ರರಂಗದ ಮೈಕೆಲ್ ಜಾಕ್ಸನ್ ಎಂದೇ ಹೆಸರುವಾಸಿಯಾಗಿರುವ ಪ್ರಭುದೇವ್ ನಟ, ನಿರ್ದೇಶಕ ಹಾಗೂ ನೃತ್ಯ ನಿರ್ದೇಶಕರಾಗಿ ಎಲ್ಲಾ ಭಾಷೆಯ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
ಭಕ್ತ ಪ್ರಹ್ಲಾದ್ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ
ಇನ್ನು ನಟ ಪುನೀತ್ ರಾಜ್‌ಕುಮಾರ್ ನಟಿಸಿರುವ ಚಿತ್ರಗಳಲ್ಲಿ ಟಾಪ್ 10 ಚಿತ್ರಗಳು ಯಾವವು ಎಂದು ನೋಡೊದಾದ್ರೆ, 'ಭಕ್ತ ಪಹ್ಲಾದ್' ಚಿತ್ರಕ್ಕೆ ಇವರಿಗೆ ರಾಷ್ಟ್ರ ಪ್ರಶಸ್ತಿ ದೊರಕಿತ್ತು. ನಂತರ ಅಪ್ಪು, ಅಭಿ, ಅರಸು, ವಂಶಿ, ಪೃಥ್ವಿ, ದೊಡ್ಮನೆ ಹುಡುಗ, ಮಿಲನ, ರಣವಿಕ್ರಮ, ಜಾಕಿ, ರಾಜಕುಮಾರ್, ವೀರ ಕನ್ನಡಿಗ ಈ ಎಲ್ಲ ಚಿತ್ರಗಳಲ್ಲಿ ಒಂದಕ್ಕಿಂತಲೂ ಒಂದು ವಿಭಿನ್ನವಾದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಲ್ಲದೇ ಎಲ್ಲ ಚಿತ್ರಗಳಿಗೂ ಪ್ರಶಸ್ತಿ ದೊರಕಿದೆ.
ಅಲ್ಲದೇ ಸಂತೋಷ್ ಆನಂದ್‌ರಾಮ್ ನಿರ್ದೇಶನದ ರಾಜಕುಮಾರ್ ಚಿತ್ರ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿತ್ತು. ಇದನ್ನ ಇಂಡಸ್ಟ್ರಿ ಹಿಟ್ ಎಂದೇ ಕರೆಯಲಾಗುತ್ತೆ.ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಿಯಿಸಿರುವ ಚಿತ್ರಗಳಲ್ಲಿ ಖಡಕ್ ಪೊಲೀಸ್,ರೌಡಿ, ಕಾಲೇಜ್ ಹುಡುಗ, ಬ್ಯುಸಿನೆಸ್ ಮ್ಯಾನ್, ಸಾಮಾಜಿಕ ಕಳಕಳಿ ಇರುವ ಪಾತ್ರ, ಹೀಗೆ ಅನೇಕ ಪಾತ್ರಗಳಲ್ಲಿ ನಟಿಸಿ ಇಡೀ ಕರ್ನಾಕಟದ ಜನತೆಯ ಮನ ಗೆದ್ದಿದ್ದಾರೆ.. ಆದ್ರೆ ಇದೀಗ ಇಡೀ ಕರ್ನಾಟಕದ ಜನತೆಯ ಯೂತ್ ಐಕಾನ್ ಆಗಿದ್ದ ಕನ್ನಡದ ಯುವರತ್ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಎಲ್ಲರಿಂದಲೂ ದೂರ ಹೋಗಿದ್ದಾರೆ.