ಬೆಂಗಳೂರು: ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿದ ಪ್ರಕರಣದಲಿ ಪಾಗಲ್ ಪ್ರೇಮಿ ನಾಗೇಶ್ ಸಹೋದರ ಹಾಗೂ ಪೋಷಕರನ್ನು ಕಾಮಾಕ್ಷಿ ಪಾಳ್ಯ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದ ಬಳಿಕ ಆರೋಪಿ ನಾಗೇಶ್ ಅಣ್ಣನಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದನಂತೆ.
ಪ್ರಕರಣದ ಬಳಿಕ ಪರಾರಿಯಾಗಿ ಮಾಗಡಿ ಸಮೀಪದಲ್ಲಿ ಅಡಗಿದ್ದ ನಾಗೇಶ್ ಅಣ್ಣ ರಮೇಶ್ ಬಾಬು ಹಾಗೂ ಆತನ ತಂದೆ ತಾಯಿಯನ್ನ ವಶಕ್ಕೆ ಪಡೆಯಲಾಗಿದೆ. ಸದ್ಯ ಇವರನ್ನು ಅಜ್ಞಾತ ಸ್ಥಳದಲ್ಲಿರಿಸಿ ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ವೇಳೆ, ನಾಗೇಶ್ ಪೋಷಕರು 'ಆತನ ಕೃತ್ಯದಿಂದ ಭಯಭೀತರಾಗಿ ನಾವೆಲ್ಲರೂ ಮನೆ ಬಿಟ್ಟು ಓಡಿ ಹೋಗಿದ್ದೆವು' ಎಂದು ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸದ್ಯ ತೀವ್ರ ವಿಚಾರಣೆ ಮುಂದುವರೆದಿದೆ. ಆದರೆ, ಆರೋಪಿ ನಾಗೇಶ್ ಇದುವರೆಗೂ ನಾಪತ್ತೆಯಾಗಿಯೇ ಉಳಿದಿದ್ದು, ಪೋಷಕರ ಮಾಹಿತಿ ಮೂಲಕ ಆತನ ಪತ್ತೆಗೆ ಬಲೆ ಬೀಸಲಾಗಿದೆ.
ಇದನ್ನೂ ಓದಿ: ಬೆಂಗಳೂರು: ಕೆಲಸಕ್ಕೆಂದು ತೆರಳಿದ್ದ ಯುವತಿ ಮೇಲೆ ಭಗ್ನ ಪ್ರೇಮಿಯಿಂದ ಆ್ಯಸಿಡ್ ದಾಳಿ...!