ETV Bharat / city

ಬೆಂಗಳೂರು : ನಾಟಿ ಔಷಧಿ ತೆಗೆದುಕೊಳ್ಳಲು ಹೋದ ಮಹಿಳೆ ಶವವಾಗಿ ಪತ್ತೆ - ಚಿನ್ನದಾಸೆಗೆ ಮಹಿಳೆ ಕೊಂದನಾ ನಾಟಿ ವೈದ್ಯ

ಬೆಂಗಳೂರಿನ ಕಟ್ಟಿಗೇನಹಳ್ಳಿ ನಿವಾಸಿಯಾಗಿರುವ ಸಿದ್ಧಮ್ಮ ಮೃತಪಟ್ಟ ಮಹಿಳೆ. ಸಿದ್ದಮ್ಮ ಅವರು ಗುರುವಾರ ನಾಟಿ ಔಷಧಿ ಪಡೆಯಲು ಸಲೀಂ ಮನೆಗೆ ಹೋಗಿ ಹೆಣವಾಗಿದ್ದಾರೆ..

a-woman-suspicious
ಮಹಿಳೆ ಶವವಾಗಿ ಪತ್ತೆ
author img

By

Published : Jan 21, 2022, 7:05 PM IST

ಬೆಂಗಳೂರು : ನಾಟಿ ಔಷಧಿ ಪಡೆಯಲು ಬರುತ್ತಿದ್ದ ಮಹಿಳೆಯನ್ನು ನಾಟಿ ವೈದ್ಯನೊಬ್ಬ ಕೊಲೆ ಮಾಡಿ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕದ್ದು ಪರಾರಿಯಾದ ಆರೋಪ ಕೇಳಿ ಬಂದಿದೆ.

ಬೆಂಗಳೂರಿನ ಕಟ್ಟಿಗೇನಹಳ್ಳಿ ನಿವಾಸಿಯಾಗಿರುವ ಸಿದ್ಧಮ್ಮ ಮೃತಪಟ್ಟ ಮಹಿಳೆ. ಸಿದ್ದಮ್ಮ ಅವರು ಗುರುವಾರ ನಾಟಿ ಔಷಧಿ ಪಡೆಯಲು ಸಲೀಂ ಎಂಬಾತನ ಮನೆಗೆ ಹೋಗಿ ಹೆಣವಾಗಿದ್ದಾರೆ.

ಸಿದ್ದಮ್ಮ ಅವರು ಕಳೆದ 20 ವರ್ಷಗಳಿಂದ ಸಲೀಂ ಎಂಬಾತನ ಬಳಿ ಯಾವುದೋ ರೋಗದ ಹಿನ್ನೆಲೆಯಲ್ಲಿ ನಾಟಿ ಔಷಧಿ ಪಡೆಯುತ್ತಿದ್ದರು. ಅದರಂತೆ ಗುರುವಾರವೂ ನಾಟಿ ಔಷಧಿ ಪಡೆಯಲು ನಾಟಿ ವೈದ್ಯ ಸಲೀಂ ಮನೆಗೆ ಹೋಗಿದ್ದರು.

ಬಳಿಕ ಸಿದ್ದಮ್ಮ ಮನೆಗೆ ತಡವಾದರೂ ಬಾರದಿದ್ದಾಗ ಅವರ ಕುಟುಂಬಸ್ಥರು ಸಲೀಂ ಮನೆಗೆ ಬಂದು ಪರಿಶೀಲಿಸಿದಾಗ ಸಿದ್ದಮ್ಮ ಶವವಾಗಿ ಪತ್ತೆಯಾಗಿದ್ದಾರೆ.

ಮನೆಯ ಮಾಲೀಕ ಸಲೀಂ ಕೂಡ ನಾಪತ್ತೆಯಾಗಿದ್ದ. ಸಿದ್ದಮ್ಮ ಅವರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಸಲೀಂ ಎಗರಿಸಿ, ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ದೂರು ನೀಡಲಾಗಿದೆ.

ಯಲಹಂಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮೃತದೇಹವನ್ನು ಸ್ಥಳೀಯ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆಂದು ಕಳುಹಿಸಲಾಗಿದೆ. ಅಲ್ಲದೇ, ನಾಪತ್ತೆಯಾಗಿರುವ ಸಲೀಂಗಾಗಿ ಶೋಧ ನಡೆಸುತ್ತಿದ್ದಾರೆ.

ಇದನ್ನೂ ಓದಿ: ತೆಲಂಗಾಣ : ಪತ್ನಿ, ಪುತ್ರಿಗೆ ವಿಷ ಉಣಿಸಿ ಕೊಂದು ಆತ್ಮಹತ್ಯೆಗೆ ಶರಣಾದ ಟೆಕ್ಕಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.