ETV Bharat / city

ಕ್ರಿಕೆಟ್ ಬೆಟ್ಟಿಂಗ್: ಬೆಂಗಳೂರಲ್ಲಿ ಓರ್ವ ಅರೆಸ್ಟ್​, 4 ಲಕ್ಷ ರೂ. ಜಪ್ತಿ

ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, 4 ಲಕ್ಷ ರೂ. ನಗದು ಹಾಗೂ 1 ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.

ಕ್ರಿಕೆಟ್ ಬೆಟ್ಟಿಂಗ್ ಆರೋಪಿ ಅರೆಸ್ಟ್​​
ಕ್ರಿಕೆಟ್ ಬೆಟ್ಟಿಂಗ್ ಆರೋಪಿ ಅರೆಸ್ಟ್​​
author img

By

Published : Dec 9, 2020, 11:06 AM IST

Updated : Dec 10, 2020, 5:55 AM IST

ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಓರ್ವ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಭು ಬಿನ್ ಕಾಳಯ್ಯ ಬಂಧಿತ ಆರೋಪಿ. ಶ್ರೀಲಂಕಾದಲ್ಲಿ ನಡೆಯುತ್ತಿರುವ ಎಲ್​ಪಿಎಲ್​ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳ ನಡುವೆ ಮ್ಯಾಚ್​ ನಡೆಯುತ್ತಿದ್ದ ವೇಳೆ ಈತ ಬೆಟ್ಟಿಂಗ್​ನಲ್ಲಿ ತೊಡಗಿದ್ದ ಎಂದು ಸಿಸಿಬಿ ಪೊಲೀಸರಿಗೆ ಮಾಹಿತಿ ಬಂದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಈ ಕುರಿತು ಹೆಚ್ಚಿನ ತನಿಖೆ ನಡೆಸಿದಾಗ ವೆಬ್​ಸೈಟ್​ವೊಂದರ ಮೂಲಕ ಬೆಟ್ಟಿಂಗ್ ಆಡುತ್ತಿದ್ದ ಎಂದು ತಿಳಿದುಬಂದಿದೆ. ಈತ ಗೆದ್ದವರಿಗೆ ಹಣ ಕೊಡಲು ಹಾಗೂ ಸೋತವರಿಂದ ಹಣ ಪಡೆಯಲು ರಾಮ್ ದಾಸ್ ಹೋಟೆಲ್ ಬಳಿ ಬಂದಿದ್ದ ಎನ್ನಲಾಗ್ತಿದೆ. ಈ ವೇಳೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ, 4 ಲಕ್ಷ ರೂ. ನಗದು ಹಾಗೂ 1 ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಕೆ.ಪಿ. ಅಗ್ರಹಾರ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ.

Last Updated : Dec 10, 2020, 5:55 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.