ETV Bharat / city

ಓರ್ವನಿಂದ 35 ಮಂದಿಗೆ ಕೊರೊನಾ: ನಮ್ಮೂರ್ಗೆ ನಮ್ಮನ್ನ ಬಿಟ್ಬಿಡಿ ಅಂತಿದಾರೆ ಬಚಾವಾದವರು - ಹೊಂಗಸಂದ್ರದಲ್ಲಿ ಕೊರೊನಾ

ಬೆಂಗಳೂರಿನಲ್ಲಿ ಒಬ್ಬ ಸೋಂಕಿತನಿಂದ 35 ಮಂದಿಗೆ ಕೊರೊನಾ ಹರಡಿದ್ದು, ಈಗ ಸೋಂಕಿನಿಂದ ಪಾರಾದವರೆಲ್ಲಾ ತಮ್ಮೂರುಗಳಿಗೆ ತೆರಳಲು ಅನುವು ಮಾಡಿಕೊಡಲು ಮನವಿ ಮಾಡಿಕೊಳ್ಳುತ್ತಿದ್ದಾರೆ.

migrant labours
ವಲಸೆ ಕಾರ್ಮಿಕರು
author img

By

Published : May 9, 2020, 2:43 PM IST

Updated : May 9, 2020, 3:02 PM IST

ಬೆಂಗಳೂರು: ಕೊರೊನಾ ವೈರಸ್ ನಗರದ ಹೊಂಗಸಂದ್ರದಲ್ಲಿ ನೆಲೆಸಿದ್ದ ವಲಸೆ ಕಾರ್ಮಿಕರನ್ನು ಶೋಚನೀಯ ಸ್ಥಿತಿಗೆ ತಳ್ಳಿದೆ‌‌. ಒಟ್ಟು 220 ವಲಸೆ ಕಾರ್ಮಿಕರಲ್ಲಿ ಒಬ್ಬನಿಂದ 35 ಮಂದಿಗೆ ಕೊರೊನಾ ಹರಡಿತ್ತು‌. ಇಂದು ಕೂಡಾ ಐವರಿಗೆ ಕೊರೊನಾ ದೃಢಪಟ್ಟಿದೆ.

ಈ ವಲಸೆ ಕಾರ್ಮಿಕರೆಲ್ಲರೂ ಕ್ವಾರಂಟೈನ್​​​ನಲ್ಲಿದ್ದ ಕಾರಣ ಬಿಬಿಎಂಪಿ ಅಧಿಕಾರಿಗಳಿಗೆ, ಇವರ ಸಂಪರ್ಕಿತರನ್ನು ಹುಡುಕುವ ತಲೆಬಿಸಿ ತಪ್ಪಿದೆ. ಒಟ್ಟು 191 ಮಂದಿಗೆ ಒಟ್ಟಾಗಿ ತಪಾಸಣೆ ನಡೆಸಿದ ಕಾರಣದಿಂದ ಐವರಲ್ಲಿ ಸೋಂಕು ದೃಢಪಟ್ಟಿದೆ. ಉಳಿದವರೆಲ್ಲರ ರಿಪೋರ್ಟ್​ ನೆಗೆಟಿವ್ ಬಂದಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಐವರು ಡಿಸ್ಚಾರ್ಜ್​ ಆಗಿದ್ದು, ಈಗ 191 ಮಂದಿ ತಮ್ಮ ತವರೂರಿಗೆ ಹೊರಡಲು ಸಿದ್ಧರಾಗಿದ್ದಾರೆ. ರೈಲು ವ್ಯವಸ್ಥೆ ಆದ ಕೂಡಲೇ ಬಿಹಾರ, ಒಡಿಶಾ, ಪಶ್ಚಿಮ ಬಂಗಾಳ, ಉಳಿದೆಡೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಬೊಮ್ಮನಹಳ್ಳಿ ವಲಯದ ಆರೋಗ್ಯ ಅಧಿಕಾರಿ ಡಾ. ಸುರೇಶ್​ ಈಟಿವಿ ಭಾರತ್​ಗೆ ತಿಳಿಸಿದ್ದಾರೆ.

ಕೊರೊನಾದಿಂದ ಬಚಾವಾಗಿರೋ ಎಲ್ಲರಿಗೂ ನಗರದ ಸಹವಾಸ ಬೇಡ ಎಂಬಂತಾಗಿದೆ. ಕೆಲಸವಿಲ್ಲದಿದ್ದರೂ ಪರವಾಗಿಲ್ಲ, ನಮ್ಮನ್ನ ಊರಿಗೆ ಕಳುಹಿಸಿಕೊಡಿ ಎಂದು ವಲಸೆ ಕಾರ್ಮಿಕರು ಆರೋಗ್ಯಾಧಿಕಾರಿಗಳನ್ನು ಒತ್ತಾಯಿಸುತ್ತಿದ್ದಾರೆ.

Last Updated : May 9, 2020, 3:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.