ಬೆಂಗಳೂರು: ಕುವೈತ್ನಲ್ಲಿ ಅತಂತ್ರರಾಗಿರುವ 196 ಮಂದಿಯಲ್ಲಿ 98 ಕನ್ನಡಿಗರು ಭಾರತಕ್ಕೆ ಆಗಮಿಸುವ ಸಾಧ್ಯತೆ ಇದೆ. ಅನಿವಾಸಿ ಭಾರತೀಯ ಸಚಿವಾಲಯದ ಮಾಜಿ ಸಲಹೆಗಾರ್ತಿ ಆರತಿ ಕೃಷ್ಣ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಅನಿವಾಸಿ ಭಾರತೀಯ ಮೋಹನ್ ದಾಸ್ ಕಾಮತ್, ಶಾಸಕ ರಾಜಶೇಖರ್ ಪಾಟೀಲ್ ಅವರ ಸಹಕಾರ ಮತ್ತು ಪ್ರಯತ್ನದಿಂದ ಕನ್ನಡಿಗರು ಸ್ವದೇಶಕ್ಕೆ ಮರಳುತ್ತಿದ್ದಾರೆ.
ಕುವೈಟ್ನ ಮಹೆಬುಲ್ಲ ನಗರದಲ್ಲಿ ಹೈದರಾಬಾದ್ ಮೆಗಾ ಎಂಜಿನಿಯರಿಂಗ್ ಆ್ಯಂಡ್ ಇನ್ಸ್ಟ್ರಕ್ಟರ್ ಕಂಪನಿಯಡಿ ಬೀದರ್ನ ಈ ಎಲ್ಲಾ 196 ಕನ್ನಡಿಗರು ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆರು ತಿಂಗಳಿಂದ ಸಂಕಷ್ಟ ಎದುರಿಸುತ್ತಿರುವ ಕಾರ್ಮಿಕರ ನೆರವಿಗೆ ಜಿಲ್ಲೆಯ ಭಾಲ್ಕಿ ಕ್ಷೇತ್ರದ ಶಾಸಕ ಈಶ್ವರ ಖಂಡ್ರೆ ಅವರು ಆರತಿ ಕೃಷ್ಣ ಅವರನ್ನು ಸಂಪರ್ಕಿಸಿ ಸಹಾಯ ಯಾಚಿಸಿದ್ದರು.
ಇದಕ್ಕೆ ಅವರು ಉತ್ತಮವಾಗಿ ಸ್ಪಂದಿಸಿದ್ದಾರೆ. ಖಂಡ್ರೆ ಪ್ರಯತ್ನ ಫಲ ಕೊಟ್ಟಿದ್ದು, ಕಾರ್ಮಿಕರು ಹಂತ ಹಂತವಾಗಿ ತಾಯ್ನಾಡಿಗೆ ವಾಪಸ್ ಆಗಲಿದ್ದಾರೆ. ಉಳಿದ 98 ಕಾರ್ಮಿಕರನ್ನು ಆದಷ್ಟು ಬೇಗನೆ ಭಾರತಕ್ಕೆ ಕರೆತರುವ ಭರವಸೆ ನೀಡಿದ ಈಶ್ವರ ಖಂಡ್ರೆ, ನಮ್ಮವರು ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ.