ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೊರೊನಾ ಸೋಂಕಿಗೆ 146 ಮಂದಿ ಬಲಿಯಾಗಿದ್ದು, 19 ಸೋಂಕಿತರು ಅನ್ಯಕಾರಣಕ್ಕೆ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 6680 ಕ್ಕೆ ಏರಿಕೆಯಾಗಿದೆ.
ಇಂದು 7866 ಮಂದಿಗೆ ಸೋಂಕು ತಗುಲಿದ್ದು 7803 ಡಿಸ್ಜಾರ್ಜ್ ಆಗಿದ್ದಾರೆ. ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 4,12,190. 308573 ಜನರು ಗುಣಮುಖರಾಗಿದ್ದಾರೆ. 96918 ಸಕ್ರಿಯ ಪ್ರಕರಣಗಳು ಇದ್ದು, 784 ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
5,16,958 ಜನರು ಹೋಂ ಕ್ವಾರೆಂಟೈನ್ನಲ್ಲಿ ಇದ್ದಾರೆ. 34,61,119 ಜನರು ಕೊರೊನಾ ಪರೀಕ್ಷೆಗೆ ಒಳಗಾಗಿದ್ದಾರೆ. ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ 6,21,033 ಮಂದಿ ದ್ವಿತೀಯ ಸಂಪರ್ಕದಲ್ಲಿ 5,58,931 ಮಂದಿ ಇದ್ದಾರೆ.
ಟ್ರಾವೆಲ್ ಹಿಸ್ಟರಿ ಇಲ್ಲದ ಸೋಂಕಿತರು
- ಟ್ರಾವೆಲ್ ಹಿಸ್ಟರಿ ಇಲ್ಲದವರು- 2,15,003
- ಅಂಡರ್ ಇನ್ವೆಸ್ಟಿಗೇಶನ್- 1,12,387
- ಐಎಲ್ಐ ಕೇಸ್ - 28,214
- ಸಂಪರ್ಕ- 8153
- ಸಾರಿ ಕೇಸ್- 5653
- ಟ್ರಾವೆಲ್ ಹಿಸ್ಟರಿ( ಇಂಟರ್ ನ್ಯಾಷನಲ್)- 796
ಬೆಂಗಳೂರು: 3102 ಪಾಸಿಟಿವ್, 55 ಮರಣ
ನಗರದಲ್ಲಿ ಇಂದು ಪಾಸಿಟಿವ್ ಹಾಗೂ ಮರಣ ಪ್ರಕರಣದಲ್ಲಿ ಆತಂಕಕಾರಿ ಏರಿಕೆ ಕಂಡಿದೆ. ಒಂದೇ ದಿನ 3102 ಪಾಸಿಟಿವ್ ಪ್ರಕರಣ ಕಂಡುಬಂದಿದೆ.
55 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಈವರೆಗೆ ಮೃತಪಟ್ಟವರ ಸಂಖ್ಯೆ 2266 ಆಗಿದೆ. ನಗರದ ಒಟ್ಟು ಸೋಂಕಿತರ ಸಂಖ್ಯೆ 153625 ಕ್ಕೆ ಏರಿಕೆಯಾಗಿದೆ.
ಇಂದು 2330 ಮಂದಿ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು 110972 ಮಂದಿ ಚೇತರಿಸಿಕೊಂಡಿದ್ದಾರೆ. 40386 ಸಕ್ರಿಯ ಪ್ರಕರಣಗಳಿವೆ. ಒಟ್ಟು 265 ಮಂದಿ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.