ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಇನ್ಸ್ಪೆಕ್ಟರ್ ಎಲ್.ದೀಪಕ್ ಸೇರಿ 65 ಇನ್‌ಸ್ಪೆಕ್ಟರ್‌ಗಳನ್ನು ಎತ್ತಂಗಡಿ ಮಾಡಿ ತಕ್ಷಣಕ್ಕೆ ಜಾರಿಗೆ ಬರುವಂತೆ ರಾಜ್ಯದ ವಿವಿಧೆಡೆ ವರ್ಗಾವಣೆ ಮಾಡಿ ಪೊಲೀಸ್ ಇಲಾಖೆ ಆದೇಶಿಸಿದೆ.
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 65 ಇನ್‌ಸ್ಪೆಕ್ಟರ್‌ಗಳನ್ನು ತಕ್ಷಣ ಜಾರಿಗೆ ಬರುವಂತೆ ವಿವಿಧ ಭಾಗಗಳಿಗೆ ವರ್ಗಾವಣೆ ಮಾಡಲಾಗಿದ್ದು, ಸಂಬಂಧಿಸಿದ ಘಟಕಾಧಿಕಾಧಿಕಾರಿಗಳು ಕರ್ತವ್ಯದಿಂದ ಬಿಡುಗಡೆಗೊಳಿಸಿ, ಯಾವುದೇ ಸೇರುವಿಕೆ ಕಾಲವನ್ನು ಉಪಯೋಗಿಸಿಕೊಳ್ಳದೆ ವರ್ಗಾಯಿಸಲಾದ ಸ್ಥಳದ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚಿಸಿದೆ.
ಪಿ.ಜಿ.ಮಧುಕರ್ (ಬೆಂಗಳೂರು ಎಟಿಸಿ), ಶಿವಾನಂದ್ ಬೇವೂರು (ಲೋಕಾಯುಕ್ತ), ಶಿಲ್ಪಾ (ಸಿಐಡಿ), ವೀರಭದ್ರಯ್ಯ ಹೀರೆಮಠ್ (ಲೋಕಾಯುಕ್ತ), ದಯಾನಂದ್ ಶೆಗುಣಿಸಿ (ಐಎಸ್‌ಡಿ), ಜಾವೆದ್ ಮುಸಾಪುರಿ(ಎಸಿಬಿ), ಬಸವರಾಜು ಬಿ(ಲೋಕಾಯುಕ್ತ), ರಂಗಸ್ವಾಮಿ ವೈಆರ್ (ರಾಜ್ಯ ಗುಪ್ತವಾರ್ತೆ), ಎಲ್.ದೀಪಕ್ (ಗಿರಿನಗರ ಠಾಣೆ), ಜಿ.ಗುರುಪ್ರಸಾದ್(ಜಯನಗರ ಸಂಚಾರ ಠಾಣೆ), ವಿ.ಮಡಿವಾಳ ಚಿದಂಬರ(ಎಸಿಬಿ), ಕೆ.ರಾಜೇಂದ್ರ(ಲೋಕಾಯುಕ್ತ), ಬಸವರಾಜ್ ಜಿ.ಪುಲಾರಿ (ಎಸಿಬಿ) ಸೇರಿ 65 ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಲಾಗಿದೆ.
ಇದನ್ನೂ ಓದಿ: ಹೆಂಡ್ತಿ ಕೊಲೆ ಮಾಡಿ, ಸೂಟ್ಕೇಸ್ನಲ್ಲಿ ಸಾಗಿಸಿ, ಕೋವಿಡ್ ಕಥೆ ಕಟ್ಟಿದ ಟೆಕ್ಕಿ!