ಬೆಂಗಳೂರು: ಕುಡಿದ ಮತ್ತಿನಲ್ಲಿ ಅಂಗಡಿಗೆ ನುಗ್ಗಿ ಉಚಿತ ಪಟಾಕಿ(crackers) ಕೊಡುವಂತೆ ಒತ್ತಾಯಿಸಿ ಮಾರಕಾಸ್ತ್ರಗಳಿಂದ ಅಂಗಡಿ ಮಾಲೀಕನ ಮೇಲೆ ಹಲ್ಲೆ( assault case) ನಡೆಸಿದ್ದ ಆರು ಆರೋಪಿಗಳನ್ನು ಕೆಂಪೇಗೌಡ ನಗರ ಪೊಲೀಸರು (kempegowda police station) ಬಂಧಿಸಿದ್ದಾರೆ.
ಪಟಾಕಿ ಅಂಗಡಿ ಮಾಲೀಕ ಮಧು ಎಂಬುವವರು ದೂರು ನೀಡಿದ ಮೇರೆಗೆ ಆರೋಪಿಗಳಾದ ವಿಕ್ರಮ್, ವೀರಮಣಿ, ಅಜಿತ್, ವಿಜಯ್, ಅಪ್ಪು ಎಂಬುವರನ್ನು ಬಂಧಿಸಲಾಗಿದೆ. ಗಲಾಟೆಯಲ್ಲಿ ಸ್ಥಳೀಯರಿಂದ ಪೆಟ್ಟು ತಿಂದ ಮತ್ತೋರ್ವ ಆರೋಪಿ ಗೌತಮ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಡಿದ ಮತ್ತಿನಲ್ಲಿ ಕಿರಿಕ್:
ದೀಪಾವಳಿ(diwali) ವೇಳೆ ನ. 3ರ ರಾತ್ರಿ ಬಸವನಗುಡಿಯ ಬುಲ್ ಟೆಂಪಲ್ ರೋಡ್ನ ಉದಯಭಾನು ಮೈದಾನದಲ್ಲಿ ಪಟಾಕಿ ಅಂಗಡಿಗೆ ಕುಡಿದ ಮತ್ತಿನಲ್ಲಿ ಬಂದ 6-7 ಆರೋಪಿಗಳು ದಾಂಧಲೆ ನಡೆಸಿದ್ದರು. ಉಚಿತವಾಗಿ ಪಟಾಕಿ ಕೊಡುವಂತೆ ಧಮ್ಕಿ ಹಾಕಿದ್ದರು. ಆದರೆ, ಪಟಾಕಿ ಕೊಡಲು ಅಂಗಡಿ ಮಾಲೀಕ ನಿರಾಕರಿಸಿದ್ದಾರೆ.
ಹಲ್ಲೆ: ಇದರಿಂದ ಅಸಮಾಧಾನಗೊಂಡ ದುಷ್ಕರ್ಮಿಗಳು ಮಾತಿನ ಚಕಮಕಿಗಿಳಿದು ಅವಾಚ್ಯ ಶಬ್ದಗಳಿಂದ ನಿಂದಿಸಿ ಲಾಂಗ್ನಿಂದ ಹೊಡೆಯಲು(assault case of bangalore) ಮುಂದಾಗಿದ್ದಾರೆ. ಪ್ರತಿರೋಧ ವ್ಯಕ್ತಪಡಿಸಿದ್ದು, ಅಂಗಡಿ ಮಾಲೀಕನ ಕೈ ಮೇಲೆ ಹಲ್ಲೆ ನಡೆಸಿದ್ದಾರೆ.
ಆರೋಪಿಯಿಂದಲೂ ದೂರು:
ಗಲಾಟೆ ಹೆಚ್ಚಾಗುತ್ತಿದ್ದಂತೆ ಸ್ಥಳೀಯರು ಆರೋಪಿಗಳನ್ನು ಅಟ್ಟಾಡಿಸಿಕೊಂಡು ಹೋಗಿದ್ದಾರೆ. ಈ ವೇಳೆ, ಗೌತಮ್ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾನೆ. ಜನರಿಂದ ಹಿಗ್ಗಾಮುಗ್ಗ ಥಳಿಸಿಕೊಂಡು ಇದೀಗ ಗೌತಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಲ್ಲದೇ ಆರೋಪಿ ಗೌತಮ್ ಸಹ ಸ್ಥಳೀಯರ ವಿರುದ್ಧ ಪ್ರತ್ಯೇಕವಾಗಿ ದೂರು ನೀಡಿದ್ದಾನೆ.
ಇದನ್ನೂ ಓದಿ: ಪತ್ನಿಯನ್ನೇ ಕೊಂದ ಪತಿ: ಅಪ್ಪನ ವಿರುದ್ಧ ಸಾಕ್ಷ್ಯ ಹೇಳಿದ 8ರ ಬಾಲಕಿ
ಅಂಗಡಿ ಮಾಲೀಕ ನೀಡಿದ ದೂರಿನ ಮೇರೆಗೆ ಆಸ್ಪತ್ರೆಯಲ್ಲಿರುವ ಗೌತಮ್ ಸೇರಿ 6 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ನಗರ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.