ETV Bharat / city

110 ಹಳ್ಳಿಗಳಿಗೆ 5ನೇ ಹಂತದ ಕಾವೇರಿ ಕುಡಿಯುವ ನೀರು: ಯೋಜನೆ ಪೂರ್ಣ ಯಾವಾಗ? - ಬೆಂಗಳೂರು

ಐದನೇ ಹಂತದ ಕಾವೇರಿ ಕುಡಿಯುವ ನೀರಿನ ಸೌಲಭ್ಯ ಯೋಜನೆಯ ಕಾಮಗಾರಿ ವೇಗವಾಗಿ ನಡೆಯುತ್ತಿದೆ. 110 ಹಳ್ಳಿಗಳಿಗೆ ಕಾವೇರಿ ನೀರು ಒದಗಿಸುವ ಯೋಜನೆ ಇದಾಗಿದ್ದು, 2023ರ ಹೊತ್ತಿಗೆ ಪೂರ್ಣಗೊಳ್ಳುವ ಭರವಸೆ ನೀಡಲಾಗಿದೆ.

Bangalore
ಬೆಂಗಳೂರು
author img

By

Published : May 25, 2021, 6:48 AM IST

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕಾವೇರಿ ಐದನೇ ಹಂತದ ಮೂಲಕ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗ್ತಿದೆ. ಈ ಯೋಜನೆಯ ಕಾಮಗಾರಿ ಪ್ರಗತಿ ವೇಗವಾಗಿ ನಡೆಯುತ್ತಿದ್ದು, 2023 ಕ್ಕೆ ಪೂರ್ಣಗೊಳಿಸಲಾಗುವುದು ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ತಿಳಿಸಿದೆ.

ಈ ಯೋಜನೆಯನ್ನು 5,550 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಯಡಿ ಈಗಾಗಲೇ ಟಿ.ಕೆ. ಹಳ್ಳಿಯ 775 ದಶ ಲಕ್ಷ ಲೀ. ಸಾಮರ್ಥ್ಯದ ಜಲಶುದ್ಧೀಕರಣ ಘಟಕ, ಟಿ.ಕೆ.ಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿಗಳಲ್ಲಿ ನಿರ್ಮಿಸಲಾಗುವ ಜಲಸಂಗ್ರಹಾಗಾರ, ಟಿ.ಕೆ ಹಳ್ಳಿಯಿಂದ ನಗರಕ್ಕೆ ನೀರು ಸಾಗಿಸುವ ಮುಖ್ಯ ಕೊಳವೆ ಮಾರ್ಗದ ಕೆಲಸ ನಿಗದಿತ ಸಮಯಕ್ಕಿಂತ ವೇಗವಾಗಿ ಪೂರ್ಣಗೊಂಡಿದೆ.

ಈಗಾಗಲೇ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಎಲ್ಲಾ ಇಲಾಖೆಗಳ ಮುಖ್ಯಸ್ಥರ ಸಮನ್ವಯ ಸಮಿತಿ ಕೂಡಾ ರಚಿಸಲಾಗಿದ್ದು, ಸಮಸ್ಯೆಗಳೇನೇ ಇದ್ದರೂ ತಕ್ಷಣ ಪರಿಹಾರ ನೀಡಲಾಗ್ತಿದೆ. ಹೀಗಾಗಿ 2023 ಕ್ಕೆ ಈ ಯೋಜನೆಯನ್ನು ಪೂರ್ಣವಾಗಿ ಕಾರ್ಯರೂಪಕ್ಕೆ ತರುವ ಗುರಿ ಇಟ್ಟುಕೊಳ್ಳಲಾಗಿದೆ.

ಇದನ್ನೂ ಓದಿ: ವ್ಯಾಕ್ಸಿನ್​ ಹಾಕಲು ತೆರಳಿದ್ದವರ ಮೇಲೆ ರಾಡ್​​, ಕತ್ತಿಯಿಂದ ಹಲ್ಲೆ... ವೈರಲ್​ ಆಯ್ತು ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.