ETV Bharat / city

ಕೃಷಿ ನಮ್ಮ ಕಾಲಕ್ಕೇ ಸಾಕು ಅನ್ನೋ ರೈತ ಕುಟುಂಬಗಳಿಗೆ ಕೃಷಿ ವಿದ್ಯಾರ್ಥಿಗಳಿಂದ ಸ್ಫೂರ್ತಿದಾಯಕ ಸಂದೇಶ

ಕೃಷಿ ಎಂದರೆ ಮಾರುದ್ದ ದೂರ ಓಡುವ ಇಂದಿನ ಯುವ ಪೀಳಿಗೆಗೆ ಈ ವಿದ್ಯಾರ್ಥಿಗಳು ನಿಜಕ್ಕೂ ಮಾದರಿ. ಕೃಷಿಯಲ್ಲಿ ಏನಾದ್ರೂ ಸಾಧನೆ ಮಾಡಬೇಕೆಂದು ಪಣ ತೊಟ್ಟ ಇವರು ಓದಿನಲ್ಲಿ ಸಾಧನೆ ಮಾಡಿ ಚಿನ್ನದ ಬೇಟೆ ಆಡಿದ್ದಾರೆ.

author img

By

Published : Nov 28, 2020, 10:42 PM IST

Bangalore Agricultural University
ಕೃಷಿ ವಿವಿ

ಬೆಂಗಳೂರು: ಸ್ಕೂಲ್ ಮುಗಿಸಿ ಕಾಲೇಜು ಮೆಟ್ಟಿಲು ಹತ್ತುವಾಗ ಎಲ್ಲರೂ ನಮ್ಮ ಮಕ್ಕಳು ಡಾಕ್ಟರ್, ಎಂಜಿನಿಯರ್ ಆಗಬೇಕು ಅಂತ ಹೇಳ್ತಾರೆಯೇ ಹೊರತು ಕೃಷಿ ಪದವಿ ಪಡೆದು ಹೊಸತು ಏನಾದರೂ ಮಾಡು ಅಂತ ಹೇಳುವವರು ಕಡಿಮೆ. ‌ಆದರೆ ಕೃಷಿಯಲ್ಲೇ ಏನಾದರೂ ಸಾಧನೆ ಮಾಡಿ ಹೊಸ ಭವಿಷ್ಯ ಬರೀತಿವಿ ಅಂತಾರೆ ಕೃಷಿ ವಿವಿಯಲ್ಲಿ ನಾನಾ ಪದವಿಯಲ್ಲಿ ಚಿನ್ನದ ಪದಕ ಪಡೆದವರು.

ಕೃಷಿ ವಿವಿಯಲ್ಲಿ ಚಿನ್ನದ ಬೇಟೆ

ಅಂದಹಾಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 54ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳು ಭರ್ಜರಿ ಚಿನ್ನದ ಬೇಟೆ ಮಾಡಿದ್ದಾರೆ. ಚಿನ್ನದ ಪದಕ ವಿಜೇತರಲ್ಲಿ ಒಟ್ಟಾರೆ 986 ವಿದ್ಯಾರ್ಥಿಗಳಿದ್ದು, ಇದರಲ್ಲಿ ಸ್ನಾತಕ ಪದವಿ 638 ವಿದ್ಯಾರ್ಥಿಗಳು, ಸ್ನಾತಕೋತ್ತರ 280 ವಿದ್ಯಾರ್ಥಿಗಳು, ಡಾಕ್ಟರೇಟ್​​ ಪಡೆದ 68 ವಿದ್ಯಾರ್ಥಿಗಳು ಪದಕವನ್ನು ತಮ್ಮದಾಗಿಸಿಕೊಂಡರು. ಈಟಿವಿ ಭಾರತದೊಂದಿಗೆ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳು ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ಕೃಷಿ ಮಹಾವಿದ್ಯಾಲಯದ ಬಿ.ಎಸ್ಸಿ (ಕೃಷಿ ಮಾರುಕಟ್ಟೆ ಮತ್ತು ಸಹಕಾರ) ವಿದ್ಯಾರ್ಥಿನಿ ಹಂಸ ಪಿ. ಮಾತಾಡಿ, ಚಿನ್ನದ ಪದಕ ಬರುವ ಯಾವುದೇ ನಿರೀಕ್ಷೆ ಇರಲಿಲ್ಲ. ಚಿನ್ನದ ಪದಕ ಗಳಿಸಿದ್ದು ಬಹಳ ಸಂತಸ ತಂದಿದೆ. ರೈತ ಕುಟುಂಬದವರೇ ಆದ ಕಾರಣ, ಕೃಷಿಯಲ್ಲೇ ಏನಾದರೂ ಮಾಡಬೇಕು ಎಂಬ ಹಂಬಲ ಇತ್ತು ಅಂತ ತಿಳಿಸಿದರು. ಇನ್ನು ಹಂಸ ಅವ್ರು, ಒಟ್ಟಾರೆ ಸರಾಸರಿ ಅಂಕ (ಒಜಿಪಿಎ): 9.07 (90.70%)ಕೃಷಿ ವಿಶ್ವವಿದ್ಯಾನಿಲಯದ ಚಿನ್ನದ ಪದಕ-1, ದಾನಿಗಳ ಚಿನ್ನದ ಪದಕ - 6, ದಾನಿಗಳ ಚಿನ್ನದ ಪದಕದ ಪ್ರಮಾಣ ಪತ್ರ -1 ಪಡೆದಿದ್ದಾರೆ.‌

ಮತ್ತೊಬ್ಬ ವಿದ್ಯಾರ್ಥಿ ಶರತ್ ಕೊತಾರಿ ಸ್ನಾತಕ ಪದವಿ ಬಿ.ಎಸ್ಸಿ (ಕೃಷಿ) ಹಾಸನ ಕೃಷಿ ಮಹಾವಿದ್ಯಾಲಯದವರು ಅತೀ ಹೆಚ್ಚು ಚಿನ್ನದ ಪದಕ ಗೆದ್ದವರು. ಒಟ್ಟಾರೆ ಸರಾಸರಿ ಅಂಕ (ಒಜಿಪಿಎ): 9.30 (93.00%)ಕೃಷಿ ವಿಶ್ವವಿದ್ಯಾನಿಲಯದ ಚಿನ್ನದ ಪದಕ-1, ದಾನಿಗಳ ಚಿನ್ನದ ಪದಕ -10, ದಾನಿಗಳ ಚಿನ್ನದ ಪದಕದ ಪ್ರಮಾಣ ಪತ್ರ -2ನ್ನು ತಮ್ಮದಾಗಿಸಿಕೊಂಡಿದ್ದಾರೆ. ಮೂಲತಃ ಶಿರಸಿಯ ಶರತ್​ನ ಮನೆಯವರು ಎಲ್ಲರೂ ಕೃಷಿಕರೇ‌ ಆಗಿದ್ದಾರೆ. ಹೀಗಾಗಿ ಕೃಷಿಯ ಕಡೆಗೆ ಹೆಚ್ಚು ಒಲವು ಇತ್ತು ಅಂತಾರೆ. ಮನೆಯವರು ಯಾವುದೇ ಒತ್ತಡ ಮಾಡದೇ ಪ್ರೋತ್ಸಾಹಿಸಿದರು ಅಂತ ಸಂತಸ ಹಂಚಿಕೊಂಡ್ರು. ಈಗೀನ ಯುವಕರು ಡಾಕ್ಟರ್-ಎಂಜಿನಿಯರ್ ಸೀಟ್ ಸಿಕ್ಕಿಲ್ಲ ಅನ್ನೋ ಕಾರಣಕ್ಕೆ ಅಗ್ರಿಕಲ್ಚರ್ ಆಯ್ಕೆ ಮಾಡಿಕೊಳ್ಳುತ್ತಾರೆ.‌ ನೆಮ್ಮದಿ ಜೀವನಕ್ಕೆ ನೀವೂ ಕೃಷಿ ಪದವಿಯನ್ನ ಆಯ್ಕೆ ಮಾಡಿಕೊಳ್ಳಿ, ಬೇರೆಯ ಕೈ ಕೆಳಗೆ ದುಡಿಯುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.‌ ರೈತ ಕುಟುಂಬದ ಪೋಷಕರು ನಮ್ಮ ಕಾಲಕ್ಕೇ ಸಾಕು ಈ ಕೃಷಿ ಅನ್ನೋ ಮನೋಭಾವದಿಂದ ಹೊರ ಬರಬೇಕು. ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು ಎಂದರು.

ಇನ್ನು ಕೋಲಾರದ ವಿದ್ಯಾರ್ಥಿನಿ ಅರ್ಚನಾ ಮಾತನಾಡಿ, ಪಿಯು ನಂತರ ಎಂಜಿನಿಯರಿಂಗ್ ಬೇಡವಾಯ್ತು.‌ ಮೆಡಿಕಲ್​ನಲ್ಲೂ ಆಸಕ್ತಿ ಇರಲಿಲ್ಲ. ಹೀಗಾಗಿ ಆಗ್ರಿಕಲ್ಚರ್ ಕಡೆ ಮುಖ ಮಾಡಿದೆ. ಏನಾದರೂ ಕೃಷಿಯಲ್ಲೇ ಮಾಡಬೇಕೆಂಬ ಆಸೆಯಿಂದ ಈ ಕ್ಷೇತ್ರಕ್ಕೆ ಕಾಲಿಟ್ಟೆ. ಚಿನ್ನದ ಪದಕ ಬರುವ ಯಾವ ನಿರೀಕ್ಷೆಯೂ ಇರಲಿಲ್ಲ. ಆದರೆ ಕುಟುಂಬದವರ ಪ್ರೋತ್ಸಾಹದಿಂದ ಇದೆಲ್ಲ ಸಾಧ್ಯವಾಯ್ತು ಎಂದು ತಿಳಿಸಿದರು.

ಮತ್ತೊಬ್ಬರು ಸುಶ್ಮಿತಾ ಜೆ. ಹಾಸನದ ಕೃಷಿ ಮಹಾವಿದ್ಯಾಲಯ ಬಿ.ಟೆಕ್ (ಕೃಷಿ ಜೈವಿಕ ತಂತ್ರಜ್ಞಾನ) ವಿದ್ಯಾರ್ಥಿನಿ. ಒಟ್ಟಾರೆ ಸರಾಸರಿ ಅಂಕ (ಒಜಿಪಿಎ): 8.81 (88.10%)ಕೃಷಿ ವಿಶ್ವವಿದ್ಯಾನಿಲಯದ ಚಿನ್ನದ ಪದಕ-1, ದಾನಿಗಳ ಚಿನ್ನದ ಪದಕ -1, ಪದವಿ - ಬಿ.ಎಸ್ಸಿ (ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ) ಮಾಡುತ್ತಿದ್ದಾರೆ. ಮೆಡಿಕಲ್​ನಲ್ಲಿ ಬಹಳ ಆಸಕ್ತಿ ಇತ್ತು. ಆದರೆ ಅನಿರ್ವಾಯ ಕಾರಣದಿಂದ ಆಗಲಿಲ್ಲ. ಆದರೆ ಬಯೋಟೆಕ್​ನಲ್ಲಿ ಇಷ್ಟವಿತ್ತು. ಈ ಮೂಲಕ ರೈತರಿಗೆ ಏನಾದರೂ ಸಹಾಯ ಮಾಡಬೇಕು ಅನ್ನುವ ಹಂಬಲವಿದೆ ಎಂದರು.

ಮತ್ತೊಬ್ಬರು ಶೀಲಾ ಪಿ.ಎಸ್. ಕೃಷಿ ಮಹಾವಿದ್ಯಾಲಯ ಹಾಸನದ ವಿದ್ಯಾರ್ಥಿನಿಯಾಗಿದ್ದು, ಒಟ್ಟಾರೆ ಸರಾಸರಿ ಅಂಕ (ಒಜಿಪಿಎ): 8.93 (89.30%) ಕೃಷಿ ವಿಶ್ವವಿದ್ಯಾನಿಲಯದ ಚಿನ್ನದ ಪದಕ-1 ಪಡೆದಿದ್ದಾರೆ.‌ ಮದುವೆಯ ನಂತರವೂ ಓದಿನ ಆಸಕ್ತಿ ಕಳೆದುಕೊಳ್ಳದ ಶೀಲಾ ಅವ್ರು ಮನೆಯವರ ಪ್ರೋತ್ಸಾಹದಿಂದ ಇಂದು ಚಿನ್ನದ ಪದಕ ವಿಜೇತರಾಗಿರುವ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ.‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.