ಬೆಂಗಳೂರು : ಹಬ್ಬದ ಸೀಸನ್ ಮತ್ತು ಬಿಗ್ ಬಿಲಿಯನ್ ಡೇಗಳಿಗೆ ಸಿದ್ಧತೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಫ್ಲಿಪ್‌ಕಾರ್ಟ್ ತನ್ನ ವ್ಯಾಪ್ತಿಗೆ ಕಿರಾಣಿಗಳನ್ನು ಸೇರ್ಪಡೆ ಮಾಡಿಕೊಳ್ಳುವ ಯೋಜನೆಯನ್ನು ವಿಸ್ತರಣೆ ಮಾಡಿಕೊಂಡಿದೆ. 850ಕ್ಕೂ ಹೆಚ್ಚು ನಗರಗದ ಗ್ರಾಹಕರಿಗೆ ಉತ್ಪನ್ನಗಳನ್ನು ತ್ವರಿತವಾಗಿ ತಲುಪಿಸುವುದು ಇದರ ಉದ್ದೇಶ.
50,000ಕ್ಕೂ ಅಧಿಕ ಕಿರಾಣಿಗಳ ಜತೆಗೆ ಪಾಲುದಾರಿಕೆ ಹೊಂದಿರುವ ಫ್ಲಿಪ್‌ಕಾರ್ಟ್ ಲಕ್ಷಾಂತರ ಗ್ರಾಹಕರಿಗೆ ತ್ವರಿತ ಮತ್ತು ವ್ಯಕ್ತಿಗತವಾದ ಇ-ಕಾಮರ್ಸ್ ಅನುಭವವನ್ನು ನೀಡುವ ಉದ್ದೇಶ ಹೊಂದಿದೆ. ಇದೇ ವೇಳೆ, ಕಿರಾಣಿಗಳಿಗೆ ಡಿಜಿಟಲ್ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುವುದು ಮತ್ತು ಹೆಚ್ಚುವರಿ ಆದಾಯ ಗಳಿಕೆಗೆ ಅವಕಾಶಗಳನ್ನು ಕಲ್ಪಿಸುತ್ತಿದೆ.
ಪಾಲುದಾರಿಕೆಯನ್ನು ಹೊಂದಿರುವ ಕಿರಾಣಿಗಳಿಗೆ ನೆರವಾಗುವುದು ಮತ್ತು ಹಬ್ಬದ ಸಂದರ್ಭದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಹಾಯ ಮಾಡಲೆಂದು ಫ್ಲಿಪ್ ಕಾರ್ಟ್ನ ತಂಡವು ಸಂಪರ್ಕರಹಿತ ಸೇರ್ಪಡೆ ಪ್ರಕ್ರಿಯೆಯನ್ನು ನಡೆಸುತ್ತಿದೆ. ಅಂದರೆ, ಕಿರಾಣಿ ಪಾಲುದಾರರು ನೇರವಾಗಿ ಆನ್ಲೈನ್ ಮೂಲಕ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಅಪ್‌ಲೋಡ್ ಮಾಡಬಹುದು.
ಕೋವಿಡ್-19 ಸಂದರ್ಭದಲ್ಲಿ ಅವರು ಹೊರಗೆ ಬಾರದೇ ತಡೆರಹಿತವಾಗಿ ಆನ್ ಬೋರ್ಡಿಂಗ್‌ನ ಇದು ಸಕ್ರಿಯಗೊಳಿಸುತ್ತದೆ. ವಿವರವಾದ ಪರಿಶೀಲನೆಯ ನಂತರ ಕಿರಾಣಿಗಳನ್ನು ಈ ಕಾರ್ಯಕ್ರಮದಡಿಗೆ ತರಲಾಗುತ್ತದೆ. ಅದಕ್ಕೂ ಮೊದಲು ಅವರು ಡೆಲಿವರಿ ಶಿಪ್ಮೆಂಟ್ಗಳನ್ನು ಮಾಡಬಹುದಾಗಿದೆ. ಆ್ಯಪ್ ಆಧಾರಿತ ಡ್ಯಾಶ್ ಬೋರ್ಡ್‌ಗಳು ಮತ್ತು ಡಿಜಿಟಲ್ ಪಾವತಿಗಳು ಸೇರಿ ವಿವಿಧ ಟೂಲ್‌ಗಳಲ್ಲಿ ತಂಡವು ಡಿಜಿಟಲ್ ತರಬೇತಿ ನೀಡಲಿದೆ.
ಈ ಮೂಲಕ ಕಿರಾಣಿಗಳು ಸಾಂಪ್ರದಾಯಿಕ ಸಾಮಾನ್ಯ ವ್ಯವಹಾರ ಸ್ಟೋರ್‌ಗಳಿಂದ ಆಧುನಿಕ ಅನುಕೂಲಕರ ಸ್ಟೋರ್‌ಗಳಿಗೆ ತಮ್ಮ ವ್ಯವಹಾರವನ್ನು ರೂಪಾಂತರ ಅಥವಾ ಪರಿವರ್ತನೆ ಮಾಡಿಕೊಳ್ಳಲು ನೆರವಾಗುತ್ತದೆ. ಕಿರಾಣಿ ಕಾರ್ಯಕ್ರಮವನ್ನು ಅಸ್ಸೋಂನ ಟಿನ್ಸುಕಿಯಾ, ತ್ರಿಪುರಾದ ಅಗರ್ತಲ ಮತ್ತು ಕೇರಳದ ಕಣ್ಣೂರಿನಂತಹ ನಗರ ಪ್ರದೇಶಗಳಿಂದ ಬಹುದೂರ ಇರುವ ಪ್ರದೇಶಗಳಿಗೂ ವಿಸ್ತರಣೆ ಮಾಡಲಾಗುತ್ತಿದೆ.
ಈ ಮೂಲಕ ದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಕಾಮರ್ಸ್ ವ್ಯವಸ್ಥೆಯಾಗಿರುವ ಇ-ಕಾಮರ್ಸ್ ಮಾರುಕಟ್ಟೆಗೆ ಕಿರಾಣಿಗಳು ಮತ್ತು ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ಕಿರಾಣಿಗಳು ಹೆಚ್ಚಿನ ಗ್ರಾಹಕರ ತೃಪ್ತಿದಾಯಕ ಸ್ಟೋರ್‌ಗಳಾಗಿವೆ ಮತ್ತು ಈ ಕಾರ್ಯಕ್ರಮವು ಕಿರಾಣಿಗಳಿಗೆ ಹೆಚ್ಚುವರಿಯಾಗಿ ಆದಾಯವನ್ನು ಗಳಿಸಬಹುದಾದ ಅವಕಾಶವನ್ನು ಕಲ್ಪಿಸುತ್ತಿದೆ. ಇದೇ ವೇಳೆ, ಗ್ರಾಹಕ ಕೇಂದ್ರಿತ ಕೌಶಲ್ಯಗಳನ್ನು ನಿರ್ಮಾಣ ಮಾಡಲಾಗುತ್ತದೆ.
ಫ್ಲಿಪ್ ಕಾರ್ಟ್ನ ಇ-ಕಾರ್ಟ್ ಮತ್ತು ಮಾರ್ಕೇಟ್ ಪ್ಲೇಸ್ನ ಹಿರಿಯ ಉಪಾಧ್ಯಕ್ಷ ಅಮಿತೇಶ್ ಝಾ ಅವರು ಮಾತನಾಡಿ, ಫ್ಲಿಪ್‌ಕಾರ್ಟ್ ತಂತ್ರಜ್ಞಾನ ಆಧಾರಿತ ಅಂತರ್ಗತ ಬೆಳವಣಿಗೆಯಲ್ಲಿ ನಂಬಿಕೆ ಇಟ್ಟಿದೆ. ಕಿರಾಣಿ ಪಾಲುದಾರರು ಸಮಾಜದ ಅವಿಭಾಜ್ಯ ಅಂಗವಾಗಿದ್ದಾರೆ. ಭಾರತದ ಅತ್ಯಂತ ಹಳೆಯ ರೀಟೇಲ್ ಮಾದರಿಯಾಗಿರುವ ಕಿರಾಣಿಗಳು ಸೌಲಭ್ಯಗಳು, ದಾಸ್ತಾನು, ಮಾಹಿತಿ ಮತ್ತು ಸೋರ್ಸಿಂಗ್‌ನಂತಹ ಸಪ್ಲೈ ಚೈನ್‌ನ ಪರಿಣಾಮಕಾರಿಯಾಗಿ ನಿರ್ವಹಣೆ ಮಾಡುತ್ತವೆ ಮತ್ತು ಗ್ರಾಹಕರೊಂದಿಗೆ ದೀರ್ಘಕಾಲದ ಸಂಬಂಧ ಕಾಪಾಡಿಕೊಳ್ಳುತ್ತವೆ. ಅವರ ಸಂಯೋಜಿತ ಉಪಸ್ಥಿತಿ ಮತ್ತು ಫ್ಲಿಪ್‌ಕಾರ್ಟ್‌ನ ಆವಿಷ್ಕಾರಗಳಿಂದಾಗಿ ಈ ಕಾರ್ಯಕ್ರಮ ದೇಶದಲ್ಲಿ ಕಿರಾಣಿ ಪರಿಸರ ವ್ಯವಸ್ಥೆ ಬಲಪಡಿಸುವಲ್ಲಿ ಸಹಕಾರಿಯಾಗಿದೆ ಎಂದರು.