ಬೆಂಗಳೂರು: ಕೋವಿಡ್ ಸೋಂಕು ಕಡಿಮೆ ಮಾಡುವ ಉದ್ದೇಶದಿಂದ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ. ಇಂದು ಎರಡನೇ ದಿನದ ಕರ್ಫ್ಯೂ ಮುಂದುವರೆದಿದ್ದು ಯಾವಾಗಲೂ ಜನ ಜಂಗುಳಿಯಿಂದ ಕೂಡಿರುತ್ತಿದ್ದ ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿವೆ.
ನಿನ್ನೆ ಕೆಲ ಬಸ್ಗಳ ಸಂಚಾರ ಇತ್ತು. ಆದರೆ ಹೆಚ್ಚು ಜನರ ಓಡಾಟ ಇರಲಿಲ್ಲ. ಹೀಗಾಗಿ, ಖಾಲಿ ಬಸ್ಗಳ ಓಡಾಟದಿಂದ ಹೆಚ್ಚು ನಷ್ಟ ಅನುಭವಿಸುವ ದೃಷ್ಟಿಯಿಂದ ಇಂದು ಬಸ್ಗಳ ಸಂಚಾರದಲ್ಲಿ ಇಳಿಕೆ ಕಂಡಿದೆ.
ಇತ್ತ ರೈಲ್ವೆ ನಿಲ್ದಾಣದಿಂದ ದಂಡು ದಂಡಾಗಿ ಬರುವ ಅಂತಾರಾಜ್ಯ ಪ್ರಯಾಣಿಕರಿಗೆ ಮೆಜೆಸ್ಟಿಕ್ ನಿಲ್ದಾಣದಲ್ಲಿ ಆರ್ಟಿ-ಪಿಸಿಆರ್ ಟೆಸ್ಟ್ ಮಾಡಲಾಗುತ್ತಿದೆ. ಇದಕ್ಕಾಗಿಯೇ ಆರೋಗ್ಯ ಕಾರ್ಯಕರ್ತರು ಟೆಸ್ಟ್ ಕಿಟ್ನೊಂದಿಗೆ ಫ್ಲಾಟ್ ಫಾರಂಗಳಲ್ಲಿ ಬೀಡುಬಿಟ್ಟಿದ್ದಾರೆ.
ಮೆಜೆಸ್ಟಿಕ್ ಒಳಗಿರುವ ಫುಡ್ ಕೌಂಟರ್ಗಳಿಗೆ ಬೀಗ:
ಬಿಎಂಟಿಸಿ ನಿಲ್ದಾಣದ ಫ್ಲಾಟ್ ಫಾರಂಗಳಲ್ಲಿ ಇರುವ ಫುಡ್ ಕೌಂಟರ್ಗಳು ಬಂದ್ ಆಗಿವೆ. ಪ್ರಯಾಣಿಕರು ಇಲ್ಲದ ಕಾರಣ ಹಾಗೂ ಕೊರೊನಾ ನಿಯಮ ಪಾಲಿಸುವ ಉದ್ದೇಶದಿಂದ ಪಾರ್ಲರ್ ಸೇರಿದಂತೆ ತಿಂಡಿ ತಿನಿಸುಗಳ ಅಂಗಡಿಗಳು ಬಂದ್ ಮಾಡಲಾಗಿದೆ.
ನಗರದ ಹಲವೆಡೆ ವಾಹನ ತಪಾಸಣೆ:
ಮುಂಜಾನೆಯಿಂದಲೇ ಪೊಲೀಸರು ತಪಾಸಣೆ ಆರಂಭಿಸಿದ್ದು, ವಿನಾಕಾರಣ ರಸ್ತೆಗಿಳಿದವರಿಗೆ ಮುಲಾಜಿಲ್ಲದೆ ದಂಡ ಪ್ರಯೋಗ ಮಾಡುತ್ತಿದ್ದಾರೆ. ನಿನ್ನೆ ಒಂದೇ ದಿನ 798 ವಾಹನ ಸೀಜ್ ಮಾಡಲಾಗಿದ್ದು, ಇಂದು ಬೆಳಗ್ಗೆಯೇ ಕಾರ್ಯಾಚರಣೆ ಆರಂಭಿಸಿದ್ದಾರೆ. ಐಡಿ ಕಾರ್ಡ್ ತೋರಿಸಿ, ಸೂಕ್ತವಾದ ಕಾರಣವಿದ್ದ ವಾಹನಗಳಿಗೆ ಮಾತ್ರ ಅನುಮತಿ ನೀಡಲಾಗುತ್ತಿದೆ.