ETV Bharat / city

ಸ್ಪೀಕರ್ ಬಳಸಿ ವ್ಯಾಪಾರ ಮಾಡುತ್ತಿದ್ದವರಿಗೆ ಪೊಲೀಸರ ಖಡಕ್​​ ವಾರ್ನಿಂಗ್.. 15 ಮೆಗಾಫೋನ್​ಗಳ ವಶ

author img

By

Published : Oct 5, 2021, 5:37 PM IST

ಮೆಗಾಫೋನ್‌/ಲೌಡ್‌​ಸ್ಪೀಕರ್ ಬಳಸಿ ವ್ಯಾಪಾರ-ವಹಿವಾಟು ಮಾಡುವುದರಿಂದ ಹೆಚ್ಚು ಶಬ್ದ ಮಾಲಿನ್ಯ ಉಂಟಾಗಿ, ಜನರಿಗೆ ತೊಂದರೆಯಾಗುತ್ತದೆ. ಈ ಕುರಿತು ಸಾಕಷ್ಟು ದೂರುಗಳು ಬಂದ ಹಿನ್ನೆಲೆ, ಪೂರ್ವ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ಇಂದು 15 ಮೆಗಾಫೋನ್​ಗಳನ್ನು ವಶಪಡಿಸಿಕೊಂಡಿದ್ದಾರೆ.

15 megaphones detained by Bangalore East Division Police staff
ಮೆಗಾಫೋನ್​ಗಳನ್ನು ವಶಕ್ಕೆ ಪಡೆದ ಬೆಂಗಳೂರು ಪೊಲೀಸರು

ಬೆಂಗಳೂರು: ಮೆಗಾಫೋನ್‌/ಲೌಡ್‌​ಸ್ಪೀಕರ್​​ ಬಳಸಿ ವ್ಯಾಪಾರ ಮಾಡುತ್ತಿದ್ದವರಿಗೆ ಪೂರ್ವ ವಿಭಾಗದ ಪೊಲೀಸರು ಖಡಕ್​ ವಾರ್ನಿಂಗ್ ಕೊಟ್ಟಿದ್ದಾರೆ.

megaphones detained by Bangalore East Division Police staff
ಮೆಗಾಫೋನ್​​ಗಳನ್ನು ವಶಕ್ಕೆ ಪಡೆದ ಪೊಲೀಸರು

ಮೆಗಾಫೋನ್‌/ಲೌಡ್‌​ಸ್ಪೀಕರ್ ಬಳಸಿ ವ್ಯಾಪಾರ-ವಹಿವಾಟು ಮಾಡುವುದರಿಂದ ಹೆಚ್ಚು ಶಬ್ದ ಮಾಲಿನ್ಯ ಉಂಟಾಗಿ, ಜನರಿಗೆ ತೊಂದರೆಯಾಗುತ್ತದೆ. ಈ ಕುರಿತು ಪೊಲೀಸ್ ಆಯುಕ್ತರಿಗೆ ಮತ್ತು ಸ್ಥಳೀಯ ಠಾಣೆಗಳಿಗೆ ಸಾಕಷ್ಟು ದೂರುಗಳು ಬಂದಿದ್ದವು. ಈ ಹಿನ್ನೆಲೆ, ಪೂರ್ವ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ಇಂದು 15 ಮೆಗಾಫೋನ್​ಗಳನ್ನು ವಶಪಡಿಸಿಕೊಂಡಿದ್ದಾರೆ.

ಈಟಿವಿ ಭಾರತ ವರದಿ:

ನಗರದಲ್ಲಿ ತರಕಾರಿ ಸೇರಿದಂತೆ ವಿವಿಧ ವಸ್ತುಗಳ ಮಾರಾಟ ಮಾಡುವ ಸಣ್ಣ-ಪುಟ್ಟ ವ್ಯಾಪಾರಿಗಳು ಮೆಗಾಫೋನ್ ಸ್ಪೀಕರ್ ಬಳಸಿ ವ್ಯಾಪಾರ ಮಾಡುವುದರಿಂದ ಹಿರಿಯ ನಾಗರಿಕರು ಹಾಗೂ ಮನೆಯಲ್ಲಿ ಆನ್​ಲೈನ್ ಕ್ಲಾಸ್​ನಲ್ಲಿರುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವ ದೂರುಗಳು ಸುಮಾರು ತಿಂಗಳಿನಿಂದ ಕೇಳಿ ಬಂದಿದ್ದವು. ಈ ಕುರಿತು 'ಈಟಿವಿ ಭಾರತ' ಸಹ ವರದಿ ಮಾಡಿತ್ತು. ''ಮೆಗಾಫೋನ್‌/ಲೌಡ್‌​ಸ್ಪೀಕರ್ ಬಳಸಿ ವ್ಯಾಪಾರಿಗಳಿಂದ ಕಿರಿಕಿರಿ: ಪೊಲೀಸ್‌ ಕಂಟ್ರೋಲ್ ರೂಮ್​ಗೆ ದೂರು'' ಶೀರ್ಷಿಕೆಯಡಿ ಈಟಿವಿ ಭಾರತ ಸುದ್ದಿ ಮಾಡಿತ್ತು.

ಈಟಿವಿ ಭಾರತ ವರದಿಯಲ್ಲಿ ಉಲ್ಲೇಖಿಸಿದ ಅಂಶಗಳಿವು:

ತಳ್ಳುವ ಗಾಡಿ, ಆಟೋ ಸೇರಿದಂತೆ ವಿವಿಧ ವಾಹನಗಳ ಮುಖಾಂತರ ತರಕಾರಿ ಸೇರಿದಂತೆ ವಿವಿಧ ವಸ್ತುಗಳನ್ನು ಮಾರಾಟ ಮಾಡುವ ಸಣ್ಣ ವ್ಯಾಪಾರಿಗಳು, ಇತ್ತೀಚಿನ ದಿನಗಳಲ್ಲಿ ಮೊಬೈಲ್​ನಲ್ಲಿ ರೆಕಾರ್ಡ್ ಮಾಡಿ ಮೆಗಾಫೋನ್ ಸ್ಪಿಕರ್ ಮುಖಾಂತರ ಮಾರಾಟ ಮಾಡುತ್ತಿದ್ದಾರೆ. ಪ್ರತಿ ಏರಿಯಾದ ಮನೆಗಳ‌ ಮುಂದೆ ಲೌಡ್ ಸ್ಪೀಕರ್ ಹಾವಳಿ ಹೆಚ್ಚುವುದದರಿಂದ ಹಿರಿಯ ನಾಗರಿಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ವೃತ್ತಿಪರ ಉದ್ಯೋಗಿಗಳಿಗೂ ಕಿರಿಕಿರಿಯಾಗುತ್ತಿದೆ‌ ಎಂದು ಪೊಲೀಸ್ ಕಂಟ್ರೋಲ್ ರೂಂ ಗೆ ಕರೆ ಮಾಡಿ ದೂರುವವರ ಸಂಖ್ಯೆಯೂ ಹೆಚ್ಚಾಗಿತ್ತು ಎಂದು ಉಲ್ಲೇಖಿಸಲಾಗಿತ್ತು.

ಜನವರಿಯಿಂದ ಆಗಸ್ಟ್​ವರೆಗೆ ದಾಖಲಾದ ದೂರುಗಳೆಷ್ಟು?

ಮೆಗಾಪೋನ್ ಸ್ಪೀಕರ್ ಬಳಕೆಯಿಂದ ತೊಂದರೆಯಾಗುತ್ತಿದೆ ಎಂದು ಜನವರಿಯಲ್ಲಿ 711 ಮಂದಿ ದೂರು ನೀಡಿದ್ರೆ, ಫೆಬ್ರವರಿಯಲ್ಲಿ 650 ಮಂದಿ ದೂರು ದಾಖಲಿಸಿದ್ದರು. ಮಾರ್ಚ್‌ನಲ್ಲಿ 621 ದೂರುಗಳು ದಾಖಲಾದರೆ ಲಾಕ್​ಡೌನ್ ಅವಧಿಯಾದ ಏಪ್ರಿಲ್‌ನಲ್ಲಿ 275 ದೂರುಗಳು ದಾಖಲಾಗಿದ್ದವು. ಮೇ ತಿಂಗಲಿನಲ್ಲಿ 136 ಮತ್ತು ಜೂನ್​ನಲ್ಲಿ 186, ಜುಲೈನಲ್ಲಿ 250ಕ್ಕೆ ಸಿಮೀತವಾಗಿತ್ತು. ಆಗಸ್ಟ್​​ನಲ್ಲಿ 484 ದೂರುಗಳು ದಾಖಲಾಗಿದ್ದವು ಎಂದು ವರದಿಯಾಗಿತ್ತು.

ಸಾರ್ವಜನಿಕರ ದೂರು:

ನಗರ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡುವ ಸಾರ್ವಜನಿಕರು, ಮನೆ ಬಳಿ ಬೆಳಗಿನ ಅವಧಿಯಲ್ಲಿ ಲೌಡ್ ಸ್ಪೀಕರ್ ಮೂಲಕ ವ್ಯಾಪಾರ ಮಾಡುವ ವ್ಯಾಪಾರಿಗಳಿಗೆ ಮೆಗಾಫೋನ್ ಬಳಸದಂತೆ ಅಥವಾ ಶಬ್ದ ಕಡಿಮೆ ಮಾಡುವಂತೆ ಮನವಿ ಮಾಡಿದರೂ ನಮ್ಮ ಮಾತನ್ನು ಕೇಳುವುದಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳಿಗೆ ತೊಂದರೆಯಾಗಲಿದೆ ‌ಎಂದು ದೂರಿದ್ದರು.

ಕ್ರಮ ಕೈಗೊಳ್ಳುತ್ತೇವೆಂದ ಪೊಲೀಸ್ ಆಯುಕ್ತರು:

ಈ ಬಗ್ಗೆ 'ಈಟಿವಿ ಭಾರತ'ಕ್ಕೆ ಪ್ರತಿಕ್ರಿಯಿಸಿದ್ದ ನಗರ ಪೊಲೀಸ್ ಆಯುಕ್ತ ಕಮಲ್‌ ಪಂತ್, ಕರ್ನಾಟಕ ಪೊಲೀಸ್ ಕಾಯ್ದೆ 92ರ ಅಡಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮೆಗಾಫೋನ್ ಅಥವಾ ಲೌಡ್​ ಸ್ಪಿಕರ್ ಬಳಸುವುದು ಅಪರಾಧ‌. ಅಲ್ಲದೇ‌ ಮೆಗಾಫೋನ್ ಬಳಸುವ ಮುನ್ನ ಅನುಮತಿ ಪಡೆಯಬೇಕು. ಸಣ್ಣ ವ್ಯಾಪಾರಿಗಳು ಲೌಡ್ ಸ್ಪೀಕರ್ ಹಾಕಿಕೊಂಡು ವ್ಯಾಪಾರ ಮಾಡುತ್ತಿರುವುದು ಗಮನಕ್ಕೆ ಬಂದಿದೆ‌. ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದರು.

ವ್ಯಾಪಾರಸ್ಥರು ಹೇಳಿದ್ದೇನು?

ಕೆಲ ವರ್ಷಗಳ ಹಿಂದೆ ನಮಗೆ ಯಾವುದೇ ರೀತಿಯ ಮೆಗಾಫೋನ್ ಅಥವಾ ಲೌಡ್ ಸ್ಪೀಕರ್​ಗಳ ಅಗತ್ಯವಿರಲಿಲ್ಲ. ಕೊರೊನಾ ಬಿಕ್ಕಟ್ಟು ಬಳಿಕ ಇದರ ಅವಶ್ಯಕತೆ ಹೆಚ್ಚಾಗಿದೆ. 1,000 ರಿಂದ 1,500 ರೂಪಾಯಿಯ ಮೆಗಾಫೋನ್ ಖರೀದಿಸಿ ವಾಯ್ಸ್ ರೆಕಾರ್ಡ್ ಮಾಡಿ ನಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತೇವೆ. ಅಪಾರ್ಟ್​​ಮೆಂಟ್​ಗಳು ಹೆಚ್ಚಾದ ಹಿನ್ನೆಲೆ, ಪ್ರತಿಯೊಬ್ಬ ಗ್ರಾಹಕರಿಗೆ ತಲುಪುವ ಉದ್ದೇಶದಿಂದ ಮೆಗಾಫೋನ್ ಬಳಸುತ್ತೇವೆಂದು ಸಣ್ಣ ವ್ಯಾಪಾರಸ್ಥರು ಹೇಳಿದ್ದರು.

ಕಸ ಸಂಗ್ರಹಿಸುವವರಿಂದಲೂ ಮೆಗಾಫೋನ್ ಬಳಕೆ:

ಬೆಳಗಿನ ಅವಧಿಯಲ್ಲಿ ಕಸ ಸಂಗ್ರಹಿಸುವ ಬಿಬಿಎಂಪಿ ಸಿಬ್ಬಂದಿ ಸಹ ‌ಮೆಗಾಫೋನ್ ಬಳಸಿ ಮನೆಗಳ ಬಳಿ ಕಸ ಸಂಗ್ರಹಿಸುತ್ತಿರುವುದು ಗಮನಕ್ಕೆ ಬಂದಿತ್ತು. ಬಹುತೇಕ‌ ಕಸ ಸಂಗ್ರಹಿಸುವ ಗುತ್ತಿಗೆದಾರರು ಮೆಗಾಫೋನ್ ಬಳಕೆಗೆ ಅನುಮತಿಯೇ ಪಡೆದಿರುವುದಿಲ್ಲ. ಇದರಿಂದ ಕಿರಿಕಿರಿಯಾಗುತ್ತಿದೆ ಎಂದು ಸಾರ್ವಜನಿಕರು ಪ್ರತಿಯಾಗಿ ದೂರಿದ್ದರು.

ಇದನ್ನೂ ಓದಿ: ಮೆಗಾಫೋನ್‌/ಲೌಡ್‌​ಸ್ಪೀಕರ್ ಬಳಸಿ ವ್ಯಾಪಾರಿಗಳಿಂದ ಕಿರಿಕಿರಿ: ಪೊಲೀಸ್‌ ಕಂಟ್ರೋಲ್ ರೂಮ್​ಗೆ ದೂರು

ಮಾನವೀಯ ಆಧಾರದ ಮೇಲೆ ತಮ್ಮ ಹೊಟ್ಟೆಪಾಡಿಗಾಗಿ ಸಣ್ಣ ವ್ಯಾಪಾರಿಗಳು ಮೆಗಾಫೋನ್ ಬಳಸಿ ವ್ಯಾಪಾರ ಮಾಡಿದರೂ ಕಾನೂನು ದೃಷ್ಟಿಕೋನದಲ್ಲಿ‌ ಮೆಗಾಫೋನ್ ಬಳಸುವುದು ಅಪರಾಧವಾಗಿದೆ‌. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ವ್ಯಾಪಾರಿಗಳು ಕೆಲ ನಿಯಮಗಳು ಪಾಲಿಸಿದರೆ ಯಾರಿಗೂ ತೊಂದರೆಯಾಗುವುದಿಲ್ಲ. ಈ ಕೆಳಗಿನ ಕ್ರಮಗಳನ್ನು ವ್ಯಾಪಾರಿಗಳು ಪಾಲಿಸಬೇಕಿದೆ ಎಂದು ಈಟಿವಿ ಭಾರತದ ಮೂಲಕ ಪೊಲೀಸರು ಮನವಿ ಮಾಡಿದ್ದರು.

ಪೊಲೀಸರ ಮನವಿ:

  • ಕರ್ಕಶ ರೀತಿ ಶಬ್ದ ಉಂಟಾಗುವ ಅಥವಾ ಕಿರಿಕಿರಿಯಾಗುವ ರೀತಿ ಮೆಗಾಫೋನ್ ಸ್ಪಿಕರ್​ಗಳನ್ನ ಬಳಸಬೇಡಿ.
  • ವ್ಯಾಪಾರದ ವೇಳೆ ನಿಯಮಿತವಾಗಿ ಮೆಗಾಫೋನ್​ ಅಥವಾ ಇನ್ನಿತರೆ ಸಾಧನಗಳನ್ನು ಬಳಸಿ.
  • ಶಾಲಾ-ಕಾಲೇಜು, ಆಸ್ಪತ್ರೆಗಳ ಬಳಿ ಮೆಗಾಫೋನ್ ಬಳಸಬೇಡಿ.
  • ಅನಗತ್ಯ ಕಿರಿಕಿರಿಯಿಂದ ಯಾರಾದರೂ ಮೆಗಾಫೋನ್ ಅಫ್ ಮಾಡಲು ಸೂಚಿಸಿದರೆ ತಕ್ಷಣವೇ ಆಫ್ ಮಾಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.