ETV Bharat / city

ಕುಟುಂಬ ರಾಜಕಾರಣ : ಪರಿಷತ್ ಅಖಾಡದಲ್ಲಿ ಗೆದ್ದ 25 ಅಭ್ಯರ್ಥಿಗಳಲ್ಲಿ 11 ಮಂದಿಗೆ ಕುಟುಂಬ ರಾಜಕೀಯದ ಹಿನ್ನೆಲೆ..

ವಿಧಾನ ಪರಿಷತ್​ನ 25 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗೆದ್ದ ಬರೋಬ್ಬರಿ 11 ಮಂದಿ ಅಭ್ಯರ್ಥಿಗಳಿಗೆ ರಾಜಕೀಯ ಕುಟುಂಬದ ಹಿನ್ನೆಲೆ ಇರುವುದು ಸ್ಪಷ್ಟ ಕಂಡು ಬಂದಿದ್ದು, ಈ ಕುರಿತಾದ ಮಾಹಿತಿ ಇಲ್ಲಿದೆ ನೋಡಿ..

ಪರಿಷತ್ ಚುನಾವಣೆ
MLC
author img

By

Published : Dec 15, 2021, 2:18 PM IST

Updated : Dec 15, 2021, 7:26 PM IST

ಬೆಂಗಳೂರು : ಕುಟುಂಬ ರಾಜಕಾರಣ ರಾಜ್ಯದಲ್ಲಿ ಕೇವಲ ಜೆಡಿಎಸ್​ಗೆ ಮಾತ್ರ ಸೀಮಿತವಾಗದೆ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್​ ಅನ್ನು ಸುತ್ತಿಕೊಂಡಿದೆ. ಪರಿಷತ್​ನ 25 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಗೆದ್ದ ಬರೋಬ್ಬರಿ 11 ಮಂದಿ ಅಭ್ಯರ್ಥಿಗಳಿಗೆ ರಾಜಕೀಯ ಕುಟುಂಬದ ಹಿನ್ನೆಲೆ ಇರುವುದು ಸಾಬೀತಾಗಿದೆ.

ರಾಜ್ಯದ 20 ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್​ನ 25 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕುಟುಂಬ ರಾಜಕಾರಣ ಹಿನ್ನೆಲೆಯದ್ದು ಈ ಬಾರಿ ದೊಡ್ಡ ಪಾಲಿದೆ. ಕಾಂಗ್ರೆಸ್​ನಿಂದ- 6, ಬಿಜೆಪಿಯಿಂದ -3, ಜೆಡಿಎಸ್‌ನಿಂದ ಒಬ್ಬರು ಹಾಗೂ ಪಕ್ಷೇತರವಾಗಿ ಗೆದ್ದ ಒಬ್ಬ ಅಭ್ಯರ್ಥಿಗೆ ರಾಜಕೀಯ ಕುಟುಂಬದ ಹಿನ್ನೆಲೆ ಇದೆ. ಇದು ಒಬ್ಬರನ್ನೊಬ್ಬರು ಕುಟುಂಬ ರಾಜಕೀಯ ಎಂದು ಆರೋಪಿಸಿಕೊಳ್ಳುವ ಮೂರು ಪಕ್ಷಗಳ ರಾಜಕೀಯ ನಾಯಕರು ದ್ವಂದ್ವ ನೀತಿಗೆ ಹಿಡಿದ ಕೈಗನ್ನಡಿಯಾಗಿದೆ.

ಕುಟುಂಬ ರಾಜಕಾರಣದ ಹಿನ್ನೆಲೆಯಲ್ಲಿ ಗೆದ್ದ ಕಾಂಗ್ರೆಸ್ ಅಭ್ಯರ್ಥಿಗಳು:

  • ಮಾಜಿ ಶಾಸಕ ಕೆ.ಎನ್. ರಾಜ ಪುತ್ರ ಆರ್.ರಾಜೇಂದ್ರ-ತುಮಕೂರು,
  • ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಹೋದರ ಸಂಬಂಧಿ ಎಸ್. ರವಿ - ಬೆಂಗಳೂರು ಗ್ರಾಮಾಂತರ
  • ಶಾಸಕಿ ಲಕ್ಷ್ಮಿ ಹೆಬ್ಬಾಳ್ವರ್‌ ಸಹೋದರ ಚನ್ನರಾಜು ಹಟ್ಟಿಹೊಳಿ- ಬೆಳಗಾವಿ
  • ಮಾಜಿ ಸಚಿವ ಎಂ.ಬಿ.ಪಾಟೀಲ್ ಸೋದರ ಸುನೀಲ್‌ ಗೌಡ ಪಾಟೀಲ್ -ವಿಜಯಪುರ
  • ಶಾಸಕ ಅಮರೇಗೌಡ ಪಾಟೀಲ್ ಸಹೋದರ ಶರಣಗೌಡ ಪಾಟೀಲ್ -ರಾಯಚೂರು
  • ಶಾಸಕ ರಾಜಶೇಖರ ಪಾಟೀಲ್​ ಅವರ ಸಹೋದರ ಭೀಮರಾವ್ ಬಿ.​ ಪಾಟೀಲ್​-ಬೀದರ್​

ಕುಟುಂಬ ರಾಜಕಾರಣದ ಹಿನ್ನೆಲೆಯಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿಗಳು:

  • ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್- ಹುಬ್ಬಳ್ಳಿ
  • ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಪುತ್ರ ಡಿ.ಎಸ್. ಅರುಣ್ - ಶಿವಮೊಗ್ಗ
  • ಶಾಸಕ ಅಪ್ಪಚ್ಚು ರಂಜನ್ ಸಹೋದರ ಸುಜಾ ಕುಶಾಲಪ್ಪ- ಮಡಿಕೇರಿ

ಕುಟುಂಬ ರಾಜಕಾರಣದ ಹಿನ್ನೆಲೆಯಲ್ಲಿ ಗೆದ್ದ ಜೆಡಿಎಸ್ ಅಭ್ಯರ್ಥಿ:

  • ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಮೊಮ್ಮಗ, ಹೆಚ್.ಡಿ. ರೇವಣ್ಣನವರ ಪುತ್ರ ಸೂರಜ್ ರೇವಣ್ಣ -ಹಾಸನ

ಕುಟುಂಬ ರಾಜಕಾರಣದ ಹಿನ್ನೆಲೆಯಲ್ಲಿ ಗೆದ್ದ ಪಕ್ಷೇತರ ಅಭ್ಯರ್ಥಿ:

  • ಬಿಜೆಪಿಯ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಹೋದರ ಲಖನ್ ಜಾರಕಿಹೊಳಿ-ಬೆಳಗಾವಿ

ಕುಟುಂಬ ರಾಜಕಾರಣ ಹಿನ್ನೆಲೆಯಲ್ಲಿ ಸೋತ ಅಭ್ಯರ್ಥಿಗಳು :

ಕುಟುಂಬ ರಾಜಕೀಯ ಹಿನ್ನೆಲೆಯಲ್ಲಿ ಸ್ಪರ್ಧಿಸಿ ಕಾಂಗ್ರೆಸ್​ನ ಓರ್ವ ಅಭ್ಯರ್ಥಿ ಸೋತಿದ್ದಾರೆ. ಬಿಜೆಪಿ ಹಿನ್ನೆಲೆ ಇರುವ ವ್ಯಕ್ತಿ ಕಾಂಗ್ರೆಸ್ ಟಿಕೆಟ್ ಪಡೆದು ಸೋತಿರುವುದು ಸೋಜಿಗವಾಗಿದೆ. ಬಿಜೆಪಿ ನಾಯಕ ಮಾಜಿ, ಸಚಿವ ಎ ಮಂಜು ಪುತ್ರ ಮಂಥರ್ ಗೌಡ ಕೊಡಗು ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲುಂಡಿದ್ದಾರೆ.

ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್ ಅತಿ ಹೆಚ್ಚು ಕುಟುಂಬ ರಾಜಕಾರಣದಿಂದ ಟೀಕೆ ಎದುರಿಸಿದೆ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಪುತ್ರರಾದ ಹೆಚ್.ಡಿ ರೇವಣ್ಣ, ಹೆಚ್.ಡಿ ಕುಮಾರಸ್ವಾಮಿ, ಗೌಡರ ಸೊಸೆಯಂದಿರಾದ ಅನಿತಾ ಕುಮಾರಸ್ವಾಮಿ, ಭವಾನಿ ರೇವಣ್ಣ, ಮೊಮ್ಮಕ್ಕಳಾದ ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ ಚುನಾಯಿತ ಪ್ರತಿನಿಧಿಗಳಾಗಿದ್ದಾರೆ. ಹೀಗಾಗಿ, ಜೆಡಿಎಸ್ ಕುಟುಂಬದ ಪಕ್ಷ ಎನ್ನುವ ಟೀಕೆ ನಿರಂತರವಾಗಿ ಎದುರಿಸುತ್ತಲೇ ಬಂದಿದೆ.

ಬಿಜೆಪಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಪುತ್ರ, ಈಶ್ವರಪ್ಪ ಪುತ್ರ, ಜಗದೀಶ್ ಶೆಟ್ಟರ್ ಸಹೋದರ, ಜಾರಕಿಹೊಳಿ ಸಹೋದರರು, ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯ ಪುತ್ರ, ಡಿ.ಕೆ ಶಿವಕುಮಾರ್ ಸಹೋದರ, ಶಾಮನೂರು ಶಿವಶಂಕರಪ್ಪ ಪುತ್ರ, ಲಕ್ಷ್ಮಿ ಹೆಬ್ಬಾಳ್ಕರ್ ಸಂಬಂಧಿ ಹೀಗೆ ಯಾವ ಪಕ್ಷವೂ ಕುಟುಂಬ ರಾಜಕಾರಣದಿಂದ ಹೊರತಾಗಿಲ್ಲ.

ಆದರೆ, ಈ ಬಾರಿ ನಡೆದ ಪರಿಷತ್ ಚುನಾವಣೆಯಲ್ಲಿ ಕುಟುಂಬ ರಾಜಕೀಯ ಹಿನ್ನೆಲೆಯವರ ಸ್ಪರ್ಧೆ ದೊಡ್ಡ ಸಂಖ್ಯೆಯದ್ದಾಗಿದ್ದು, ಮೂರು ಪಕ್ಷಗಳೂ ಕುಟುಂಬ ರಾಜಕಾರಣದ ಬಗ್ಗೆ ಮತ್ತೊಬ್ಬರನ್ನು ಟೀಕಿಸುವ ಅರ್ಹತೆಯನ್ನೇ ಕಳೆದುಕೊಂಡಿವೆ.

Last Updated : Dec 15, 2021, 7:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.