ಬಳ್ಳಾರಿ : ರೈಲು ಹಳಿ ಮೇಲೆ ಬಿದ್ದು ಯುವಕನೋರ್ವ ಸಾವನ್ನಪ್ಪಿರುವ ಘಟನೆ ನಗರದ ಮೊದಲನೇ ರೈಲ್ವೆ ಗೇಟ್ ಹತ್ತಿರ ನಡೆದಿದೆ.
ಅನಿಲ್‌ಕುಮಾರ್ (28 ವರ್ಷ) ತಂದೆ ಶ್ರೀರಾಮುಲು ಮೃತ ಯುವಕ. ಸದ್ಯ ಯುವಕನ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ರೈಲ್ವೆ ಪೊಲೀಸರು ದೂರವಾಣಿ ಮೂಲಕ ಈಟಿವಿ ಭಾರತ್ಗೆ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರೀಶಿಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.