ಹೊಸಪೇಟೆ (ವಿಜಯನಗರ): ಕಬ್ಬಿಣದ ರಾಡ್ನಿಂದ ಹೊಡೆದು ಹರಪನಹಳ್ಳಿಯಲ್ಲಿ ಆರ್ಟಿಐ ಕಾರ್ಯಕರ್ತ ಶ್ರೀಧರ್ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಮದುರ್ಗದ ವಾಗೀಶ್, ರಾಮದುರ್ಗದ ಯಲ್ಲಪ್ಪ, ಹಳೇ ಬೇಡರ ಹನುಮಂತಪ್ಪ, ಮ್ಯಾಕಿ ಹನುಮಂತ, ರಾಮದುರ್ಗದ ಹನುಮಂತ, ಎಚ್.ಕೆ.ಹಾಲೇಶ್ ಬಂಧಿತ ಆರೋಪಿಗಳು. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಕಬ್ಬಿಣ ರಾಡ್ ಹಾಗೂ ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ವಕೀಲ ಎಚ್.ಕೆ.ಹಾಲೇಶ್ ಕೊಲೆ ಪ್ರಕರಣದ ರೂವಾರಿ ಎಂದು ತಿಳಿದು ಬಂದಿದ್ದು, ಈಗಾಗಲೇ ಹಾಲೇಶ್ನನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಆರ್ಟಿಐ ಕಾರ್ಯಕರ್ತ ಶ್ರೀಧರ್ ಕೊಲೆ ಪ್ರಕರಣ: ಆರೋಪಿಯ ಬಂಧನ
ಎಚ್.ಕೆ.ಹಾಲೇಶ್ ಅಕ್ರಮ ಭೂ ಕಬಳಿಕೆ ವಿರುದ್ಧ ಆರ್ಟಿಐ ಕಾರ್ಯಕರ್ತ ಶ್ರೀಧರ್ ಪ್ರಕರಣ ದಾಖಲಿಸಿದ್ದರು. ಇದರಿಂದ ಶ್ರೀಧರ್ ಮೇಲೆ ದ್ವೇಷ ಇಟ್ಟುಕೊಂಡಿದ್ದ ಹಾಲೇಶ್, ಕೊಲೆ ಮಾಡಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ 6 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಪತ್ತೆಗಾಗಿ ಹರಪನಹಳ್ಳಿ ಡಿವೈಎಸ್ಪಿ ಹಾಲಮೂರ್ತಿ, ಸಿಪಿಐ ನಾಗರಾಜ, ಪಿಎಸ್ಐ ಗಳಾದ ಪ್ರಕಾಶ್, ಕಿರಣ್ ಕುಮಾರ, ಪ್ರಶಾಂತ, ನಾಗರಾಜ ಚಿಟಗೇರಿ ಸೇರಿ ಮೂರು ತಂಡಗಳನ್ನು ರಚಿಸಲಾಗಿತ್ತು.
ಇದನ್ನೂ ಓದಿ: ಹೊಸಪೇಟೆ: ಆರ್ಟಿಐ ಕಾರ್ಯಕರ್ತನ ಬರ್ಬರ ಕೊಲೆ
ಪ್ರಕರಣದ ಹಿನ್ನೆಲೆ: ವಿಜಯನಗರ ಜಿಲ್ಲೆ ಹರಪನಹಳ್ಳಿ ಪಟ್ಟಣದಲ್ಲಿ ಜು.15 ರಂದು ಸಂಜೆ ಆರ್ಟಿಐ ಕಾರ್ಯಕರ್ತ ಶ್ರೀಧರ್ ಅವರನ್ನು ಕಬ್ಬಿಣ ರಾಡಿನಿಂದ ಹೊಡೆದು ಕೊಲೆ ಮಾಡಲಾಗಿತ್ತು. ಈ ಕುರಿತು ಪೊಲೀಸ್ ಠಾಣೆಯಲ್ಲಿ ಶ್ರೀಧರ್ ಅವರ ಪತ್ನಿ ಶಿಲ್ಪಾ ದೂರು ದಾಖಲಿಸಿದ್ದರು.