ಬಳ್ಳಾರಿ: ಮಂಗಳೂರಿನಲ್ಲಿ ನ. 4, 5 ರಂದು ಮಾಸ್ಟರ್ ಗೇಮ್ಸ್ ಆ್ಯಂಡ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಏರ್ಪಡಿಸಿದ್ದ ಹಿರಿಯ ನಾಗರಿಕರ ಕರ್ನಾಟಕ ರಾಜ್ಯ ಈಜು, ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಬಳ್ಳಾರಿಯ 11 ಸ್ಪರ್ಧಿಗಳು ಭಾಗವಹಿಸಿ 28 ಪದಕಗಳನ್ನು ಪಡೆದಿದ್ದಾರೆ ಎಂದು ಜಿಲ್ಲಾ ಮಾಸ್ಟರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಹೆಚ್.ಚಂದ್ರಶೇಖರ್ ಗೌಡ ತಿಳಿಸಿದರು.
ನಗರದ ಖಾಸಗಿ ಹೋಟಲ್ನಲ್ಲಿ ಪ್ರತಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪದಕ ಪಡೆದವರು ಫೆ.5-9 ರಂದು ವಡೋದರಾದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ಡಿ. 14, 15 ರಂದು ಚಿತ್ರದುರ್ಗದಲ್ಲಿಯೂ ರಾಜ್ಯಮಟ್ಟದ ಸ್ಪರ್ಧೆಗಳು ನಡೆಯಲಿದ್ದು, ಅಲ್ಲಿ ಪದಕ ಪಡೆದವರು ಮುಂದೆ ಟ್ರಿವೆಂಡ್ರಮ್ನಲ್ಲಿ ನಡೆಯುವ ರಾಷ್ಟ್ರಮಟ್ಟದ ಕೂಟದಲ್ಲಿ ಭಾಗವಹಿಸಲಿದ್ದಾರೆ. ಇಷ್ಟೆಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕ ಪಡೆದರೂ ನಮಗೆ ಈವರೆಗೆ ಸರ್ಕಾರದಿಂದ ಯಾವುದೇ ಸೌಲಭ್ಯ ನೀಡಿಲ್ಲ. ಸ್ವಂತ ಖರ್ಚಿನಲ್ಲಿ ಹೋಗುತ್ತಿದ್ದೇವೆ ಎಂದು ಹೇಳಿದರು.
![Bellary athletes in Senior citizens' sports](https://etvbharatimages.akamaized.net/etvbharat/prod-images/4990875_bbbb.jpg)
ಮಂಗಳೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರವೀಣಾ 5, ರಜಿನಿ ಲಕ್ಕ 3, ಶಿವಕುಮಾರ 3, ಶ್ರೀನಿವಾಸ 2, ಬಸುದೇವ್ ರಾಯ್ 3, ಡಾ.ವಿಲ್ಸನ್ 3, ಎನ್.ನಾಗರತ್ನಮ್ಮ 3 ಹಾಗೂ ಹೆಚ್.ಚಂದ್ರಶೇಖರ್ ಗೌಡ 2 ಪದಕ ಸೇರಿದಂತೆ ಒಟ್ಟು 11 ಮಂದಿ ಪದಕ ಪಡೆದಿದ್ದಾರೆ.
![Bellary athletes in Senior citizens' sports](https://etvbharatimages.akamaized.net/etvbharat/prod-images/4990875_ccc.jpg)