ETV Bharat / city

ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳ: ಜಿಂದಾಲ್ ಕಂಪನಿ ಸೀಲ್​ಡೌನ್​​​ಗೆ ಆಗ್ರಹ - protest against state government and jindal company

ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಜಿಂದಾಲ್ ಕಾರ್ಖಾನೆಯನ್ನು ಸಂಪೂರ್ಣ ಸೀಲ್​​​ಡೌನ್​ ಮಾಡಬೇಕು ಎಂದು ಒತ್ತಾಯಿಸಿ ಪ್ರಜಾಸತ್ತಾತ್ಮಕ ಪಕ್ಷಗಳ ಹಾಗೂ ಸಾಮೂಹಿಕ ಸಂಘಟನೆಗಳ ಒಕ್ಕೂಟ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಪ್ರತಿಭಟನೆ ನಡೆಸಿತು.

protest
ಪ್ರತಿಭಟನೆ
author img

By

Published : Jun 15, 2020, 6:48 PM IST

ಬಳ್ಳಾರಿ: ಜಿಂದಾಲ್ ಕಾರ್ಖಾನೆಯನ್ನು ಸಂಪೂರ್ಣ ಸೀಲ್​​​ಡೌನ್​ ಮಾಡಬೇಕು ಮತ್ತು ಕಾರ್ಮಿಕರಿಗೆ ಸೂಕ್ತ ರಕ್ಷಣೆ ಹಾಗೂ ಜೀವನ ನಿರ್ವಹಣೆಗೆ ಅಗತ್ಯ ವಸ್ತುಗಳನ್ನು ಒದಗಿಸಬೇಕು ಎಂದು ಬಳ್ಳಾರಿ ಪ್ರಜಾಸತ್ತಾತ್ಮಕ ಪಕ್ಷಗಳ ಹಾಗೂ ಸಾಮೂಹಿಕ ಸಂಘಟನೆಗಳ ಒಕ್ಕೂಟವು ಜಿಂದಾಲ್ ಕಂಪನಿ ಮತ್ತು ಜಿಲ್ಲಾಡಳಿತದ ವಿರುದ್ಧ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಪ್ರತಿಭಟನೆ ನಡೆಸಿತು.

ಜಿಂದಾಲ್​​​​​​ನಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಅಲ್ಲಿ ಕೊರೊನಾರಿಂದ ಮೃತಪಟ್ಟವರ ಮಾಹಿತಿಯನ್ನು ಮುಚ್ಚಿಡುತ್ತಿದೆ. ಹೀಗಾಗಿ, ಕಂಪನಿಯನ್ನು ಸೀಲ್​​​ಡೌನ್​​​​ ಮಾಡಬೇಕು. ಇಲ್ಲವಾದಲ್ಲಿ ಕಂಪನಿಗೆ ಹೋಗುವ ವಾಹನಗಳನ್ನು ನಿಲ್ಲಿಸಿ ಪ್ರತಿಭಟನೆ ಮಾಡುತ್ತೇವೆ ಎಂದು ಕಾಂಗ್ರೆಸ್​​​ ಮುಖಂಡ ಕುಡುತಿನಿ ಶ್ರೀನಿವಾಸ್ ಮತ್ತು ಜೆಡಿಎಸ್ ಮುಖಂಡ ಮೀನಳ್ಳಿ ತಾಯಣ್ಣ ಇದೇ ವೇಳೆ ಒತ್ತಾಯಿಸಿದರು.

ಜಿಂದಾಲ್​​ ಕಂಪನಿ ವಿರುದ್ಧ ಪ್ರತಿಭಟನೆ

ಕಾಂಗ್ರೆಸ್‌ ಮುಖಂಡ ಎ.ಮಾನಯ್ಯ ಮಾತನಾಡಿ, ರೈತರ ವಿರುದ್ಧ ಕಾನೂನು ತಿದ್ದುಪಡಿಯನ್ನು ಮಾಡುವುದರಲ್ಲಿ ಬಿ.ಎಸ್ ಯಡಿಯೂರಪ್ಪ ಅವರು ನಿರತರಾಗಿದ್ದಾರೆ. ಯಡಿಯೂರಪ್ಪ ಅವರ ಸರ್ಕಾರ ಜನ, ಕಾರ್ಮಿಕ, ರೈತರ ವಿರೋಧಿಯಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಒಕ್ಕೂಟದ ಆಗ್ರಹಗಳು

  • ಜಿಂದಾಲ್ ಕಂಪನಿಯನ್ನು ಸಂಪೂರ್ಣವಾಗಿ ಸೀಲ್​​​ಡೌನ್ ಮಾಡಬೇಕು.
  • ಕಂಪನಿಯ ಕಾರ್ಮಿಕರನ್ನು ಕೈಗಾರಿಕಾ ಪ್ರದೇಶದಲ್ಲೇ ಕ್ವಾರಂಟೈನ್ ಮಾಡಬೇಕು.
  • ಜಿಂದಾಲ್ ಕಾರ್ಮಿಕರಿಗೆ ತಿಂಗಳು ವೇತನ ಸಹಿತ ರಜೆ ಘೋಷಿಸಬೇಕು.
  • ಕಾರ್ಮಿಕರನ್ನು ರ್ಯಾಂಡಮ್ ತಪಾಸಣೆಗೆ ಒಳಪಡಿಸಬೇಕು.
  • ಸೋಂಕಿತ ಮತ್ತು ಶಂಕಿತರಿಗೆ ನೀಡುವ ಚಿಕಿತ್ಸಾ ವೆಚ್ಚವನ್ನು ಕಾರ್ಖಾನೆಯೇ ಭರಿಸಬೇಕು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.