ಬಳ್ಳಾರಿ : ತಾಲೂಕಿನ ಮೋಕಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 20 ವರ್ಷದ ಯುವತಿವೋರ್ವಳು ಕಾಣೆಯಾದ ಬಗ್ಗೆ ದೂರು ದಾಖಲಾಗಿದೆ ಎಂದು ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಧ ಎಂಬ ಯುವತಿ ಜ. 06 ರಿಂದ ಕಾಣೆಯಾಗಿದ್ದಾಳೆ.
ಯುವತಿಯ ಚಹರೆ ಗುರುತು:
ಎತ್ತರ-5.7 ಇಂಚು, ಹಸಿರು ಬಣ್ಣದ ಟಾಪ್ ಬಿಸ್ಕೆಟ್ ಬಣ್ಣದ ಪ್ಯಾಂಟ್, ಕಪ್ಪು ಬಣ್ಣದ ವೇಲ್ ಧರಿಸಿರುತ್ತಾಳೆ, ತಿಳಿಗೆಂಪು ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ, ತೆಲುಗು ಭಾಷೆಯನ್ನು ಮಾತನಾಡುತ್ತಾಳೆ.
ಕಾಣೆಯಾದ ಯುವತಿ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂರವಾಣಿ ಸಂಖ್ಯೆ 08392-258100, 9480803021, 9480803031, 9480803050, 0892293228 ಗೆ ಸಂಪರ್ಕಿಸಲು ಪೊಲೀಸ್ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.