ETV Bharat / city

ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸಿದ ಸಚಿವ ಆನಂದ್​ ಸಿಂಗ್ - ಅರಣ್ಯ ಇಲಾಖೆ ಖಾತೆ ಸಚಿವ ಆನಂದ್​ ಸಿಂಗ್

ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಹಿನ್ನೆಲೆ ನಿಧಿ ಸಮರ್ಪಣಾ ಅಭಿಯಾನದಲ್ಲಿ ಭಾಗಿಯಾದ ಅರಣ್ಯ ಇಲಾಖೆ ಖಾತೆ ಸಚಿವ ಆನಂದ್​ ಸಿಂಗ್ ಅವರು, ಹೊಸಪೇಟೆ ನಗರದಲ್ಲಿ ದೇಣಿಗೆ ಸಂಗ್ರಹಿಸಿದರು.

ಹೊಸಪೇಟೆಯಲ್ಲಿ  ದೇಣಿಗೆ ಸಂಗ್ರಹಿಸಿದ ಸಚಿವ ಆನಂದ್​ ಸಿಂಗ್

author img

By

Published : Jan 16, 2021, 7:15 PM IST

ಹೊಸಪೇಟೆ: ಅರಣ್ಯ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ್​ ಸಿಂಗ್ ಅವರು ಕುಟುಂಬ ಸಮೇತವಾಗಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಗರದಲ್ಲಿ ದೇಣಿಗೆ ಸಂಗ್ರಹಿಸಿದರು.

ಹೊಸಪೇಟೆಯಲ್ಲಿ ದೇಣಿಗೆ ಸಂಗ್ರಹಿಸಿದ ಸಚಿವ ಆನಂದ್​ ಸಿಂಗ್

ಇಲ್ಲಿನ ಮೇನ್ ಬಜಾರ್, ಹೂವಿನ ಮಾರುಕಟ್ಟೆ, ತರಕಾರಿ ಮಾರುಕಟ್ಟೆ ಸೇರಿದಂತೆ ನಗರದ ನಾನಾ ಕಡೆ ಜನರಿಂದ ನಿಧಿ ಸಂಗ್ರಹಿಸಿ ನಂತರ ಮಾತನಾಡಿದ ಅವರು, ಈ ಐತಿಹಾಸಿಕ ಕ್ಷಣದಲ್ಲಿ ದೇಶದ ಪ್ರತಿಯೊಬ್ಬರು ಭಾಗವಹಿಸಬೇಕೆಂಬ ಆಶಾಭಾವನೆ ನಮ್ಮದು. ನಿಧಿ ಸಂಗ್ರಹ ಅಭಿಯಾನ ಸ್ವಾಭಿಮಾನದ ಸಂಕೇತವಾಗಿದ್ದು, ಎಲ್ಲರೂ ಇದಕ್ಕೆ ಕೈಜೋಡಿಸುವ ಮೂಲಕ ಸಹಕಾರ ನೀಡಬೇಕು. ಸರ್ವರೂ ಸಮರ್ಪಣಾ ಭಾವದಿಂದ ನೀಡಿದ ದೇಣಿಗೆಯಿಂದ ಭವ್ಯವಾದ ರಾಮಮಂದಿರ ಎದ್ದೇಳಬೇಕು ಎಂಬುದು ನಮ್ಮ ಆಶಯ ಎಂದು ಹೇಳಿದರು.

ದೇಣಿಗೆ ಸಂಗ್ರಹಣೆ ಅಭಿಯಾನದಲ್ಲಿ ಸಚಿವರ ಪುತ್ರ ಸಿದ್ಧಾರ್ಥ್ ಸಿಂಗ್, ಮಗಳು ವೈಷ್ಣ ವಿ ಸಿಂಗ್ ಹಾಗೂ ಯಶಸ್ವಿನಿ ಸಿಂಗ್ ಕೂಡ ಭಾಗಿಯಾದರು. ಸ್ವತಃ ನಿಧಿ ಸಂಗ್ರಹಿಸಿದ ಸಚಿವರು, ದೇಣಿಗೆ ನೀಡಿದವರಿಗೆ ರಶೀದಿ ವಿತರಿಸಿ, ಕೃತಜ್ಞತೆ ಸಲ್ಲಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.