ETV Bharat / city

ಮೆಟ್ರಿ ಗ್ರಾ.ಪಂ ಬಿಲ್ ಕಲೆಕ್ಟರ್ ಆತ್ಮಹತ್ಯೆಗೆ ಯತ್ನ: ವಿಡಿಯೋ ವೈರಲ್ - suicide attempt case

ಬಳ್ಳಾರಿಯ ಮೆಟ್ರಿ ಗ್ರಾಮ ಪಂಚಾಯತ್​ನ ಬಿಲ್ ಕಲೆಕ್ಟರ್ ಹೆಚ್.ಶಿವಪ್ಪ, 'ಪಂಚಾಯತ್​ ಅಧ್ಯಕ್ಷ ಮತ್ತು ಸದಸ್ಯರು ತನಗೆ ಜಾತಿ ನಿಂದನೆ ಮಾಡುತ್ತಿದ್ದಾರೆ. ನಾನೇನಾದ್ರೂ ಸತ್ತರೆ, ನನ್ನ ಸಾವಿಗೆ ಅವರೇ ಕಾರಣ' ಎಂದು ಆರೋಪಿಸಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

h shivappa Attempt to commit suicide
ಆತ್ಮಹತ್ಯೆಗೆ ಯತ್ನಿಸಿದ ಹೆಚ್ ಶಿವಪ್ಪ
author img

By

Published : Aug 13, 2021, 7:10 AM IST

ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಮೆಟ್ರಿ ಗ್ರಾಮ ಪಂಚಾಯತ್​ನ ಬಿಲ್ ಕಲೆಕ್ಟರ್ ಹೆಚ್. ಶಿವಪ್ಪ ಆತ್ಮಹತ್ಯೆಗೆ ಯತ್ನ ನಡೆಸಿದ್ದಾರೆ. ತನ್ನ ನಿರ್ಧಾರಕ್ಕೆ ಪಂಚಾಯತ್​ ಅಧ್ಯಕ್ಷ ಮತ್ತು ಸದಸ್ಯರೇ ಕಾರಣ ಎಂದು ಆರೋಪಿಸಿರುವ ವಿಡಿಯೋ ವೈರಲ್ ಆಗಿದೆ.

ಬಿನ್‌ ಕಲೆಕ್ಟರ್‌ ಹೆಚ್‌. ಶಿವಪ್ಪ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವಿಡಿಯೋ

'ಮೆಟ್ರಿ ಗ್ರಾಮ ಪಂಚಾಯತ್​ ಅಧ್ಯಕ್ಷ, ಸದಸ್ಯರು ನನಗೆ ಕೆಲಸ ಮಾಡಲು ಬಿಡುತ್ತಿಲ್ಲ. ಜಾತಿ ನಿಂದನೆ ಮಾಡಿ ಅನಗತ್ಯ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ನಾನೇನಾದ್ರೂ ಸತ್ತರೆ, ನನ್ನ ಸಾವಿಗೆ ಅವರೇ ಕಾರಣ' ಎಂದು ಹೇಳಿರುವುದು ವಿಡಿಯೋದಲ್ಲಿದೆ.

ಇದನ್ನೂ ಓದಿ: ಮಾಂಸಾಹಾರಿ ಹೋಟೆಲ್​ನಿಂದ ಸಾಧು-ಸಂತರಿಗೆ ಅಪಮಾನ ಆರೋಪ: ಹಿಂದೂ ಸಂಘಟನೆಗಳ ಆಕ್ರೋಶ

ಇದು ಎರಡ್ಮೂರು ದಿನಗಳ ಹಿಂದೆ ನಡೆದ ಘಟನೆಯಾಗಿದ್ದು, ಇವರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಬಳಿಕ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಗುಣಮುಖರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.