ETV Bharat / city

ಗತಕಾಲದ ಸಂಬಂಧ ಕಳೆದುಕೊಳ್ಳಲಿದೆ 'ಕಂಪ್ಲಿ': ಬಳ್ಳಾರಿ ಜಿಲ್ಲೆ ವಿಭಜನೆಯಿಂದ ದೂರವಾಯ್ತು 'ವಿಜಯನಗರ'ದ ನಂಟು

author img

By

Published : Dec 6, 2020, 3:55 PM IST

ವಿಜಯನಗರ ಸ್ಥಾಪನೆಗೆ ಕಂಪ್ಲಿ ಗಂಡುಗಲಿ ಕುಮಾರರಾಮ ಪ್ರೇರಣೆಯಾಗಿದ್ದರು.‌ ಕುಮಾರರಾಮನ‌ ಕಾಲದಲ್ಲಿ ಹಕ್ಕ-ಬುಕ್ಕರು ಸೇನಾಧಿಕಾರಿಗಳಾಗಿದ್ದರು.‌ ಅಲ್ಲಿನ ಆಡಳಿತ ನೈಪುಣ್ಯತೆಯನ್ನು‌‌ ಪಡೆದುಕೊಂಡು ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ‌ ಮುಂದಾಗುತ್ತಾರೆ.‌ ಆದರೆ, ಈಗ ವಿಜಯನಗರ ಜಿಲ್ಲೆ ರಚನೆಯಿಂದ ಕಂಪ್ಲಿ ಬಳ್ಳಾರಿ ಜಿಲ್ಲೆಗೆ ಸೇರಿಕೊಳ್ಳಲಿದೆ. ಇದರಿಂದ ಇತಿಹಾಸದ ನಂಟನ್ನು ಕಂಪ್ಲಿ ಇನ್ನು ಮುಂದೆ ಕಳೆದುಕೊಳ್ಳಲಿದೆ.

kampli-will-lost-its-historical-link-from-vijayanagar-empire-by-dividing-bellary-district
ಹಂಪಿ ಏಕಶಿಲಾ ರಥ

ಹೊಸಪೇಟೆ: ವಿಜಯನಗರ ಸಾಮ್ರಾಜ್ಯ ರಚನೆಗೆ ತನ್ನದೇ ವಿಶಿಷ್ಟ ಕೊಡುಗೆ ನೀಡಿದ್ದ ಕಂಪ್ಲಿ ಬಳ್ಳಾರಿ ಜಿಲ್ಲೆಯ ವಿಭಜನೆಯಿಂದಾಗಿ ಗತಕಾಲಕದ ಭವ್ಯ ಇತಿಹಾಸದ ನಂಟನ್ನು ಕಳೆದುಕೊಳ್ಳಲಿದೆ.

ವಿಜಯನಗರ ಸ್ಥಾಪನೆಗೆ ಕಂಪ್ಲಿ ಗಂಡುಗಲಿ ಕುಮಾರರಾಮ ಪ್ರೇರಣೆಯಾಗಿದ್ದರು.‌ ಕುಮಾರರಾಮನ‌ ಕಾಲದಲ್ಲಿ ಹಕ್ಕ-ಬುಕ್ಕರು ಸೇನಾಧಿಕಾರಿಗಳಾಗಿದ್ದರು.‌ ಅಲ್ಲಿನ ಆಡಳಿತ ನೈಪುಣ್ಯತೆಯನ್ನು‌‌ ಪಡೆದುಕೊಂಡು ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ‌ ಮುಂದಾಗುತ್ತಾರೆ.‌ ಆದರೆ, ಈಗ ವಿಜಯನಗರ ಜಿಲ್ಲೆ ರಚನೆಯಿಂದ ಕಂಪ್ಲಿ ಬಳ್ಳಾರಿ ಜಿಲ್ಲೆಗೆ ಸೇರಿಕೊಳ್ಳಲಿದೆ. ಇದರಿಂದ ಇತಿಹಾಸದ ನಂಟನ್ನು ಕಂಪ್ಲಿ ಇನ್ಮುಂದೆ ಕಳೆದುಕೊಳ್ಳಲಿದೆ ಎನ್ನುವ ಮಾತುಗಳು ಈ ಭಾಗದಲ್ಲಿ ಕೇಳಿಬರುತ್ತಿವೆ.

ವಿಜಯನಗರ ಕಾಲದ ಪೂರ್ವದಲ್ಲಿ ಕಂಪ್ಲಿಯು ಆಡಳಿತ ಕೇಂದ್ರವಾಗಿತ್ತು. ಇತಿಹಾಸದಲ್ಲಿ ಇದರ ಉಲ್ಲೇಖವನ್ನು‌ ಕಾಣಬಹುದು. ಕಂಪ್ಲಿ ಹಾಗೂ ಹೊಸಪೇಟೆಗೆ ಐತಿಹಾಸಿಕ ಮತ್ತು ಭಾವನಾತ್ಮಕ ನಂಟು ಇದೆ. ಅದು ವಿಜಯನಗರ ಜಿಲ್ಲೆ ರಚನೆಯಿಂದ ಕಳೆದು ಹೋಗಲಿದೆ.

ಬಳ್ಳಾರಿ ಜಿಲ್ಲೆ ವಿಭಜನೆಯಿಂದ ದೂರವಾಯ್ತು 'ವಿಜಯನಗರ'ದ ನಂಟು

1799 ರಲ್ಲಿ ಟಿಪ್ಪು ಸುಲ್ತಾನ ಮರಣ ನಂತರ ಬಳ್ಳಾರಿ‌ ಜಿಲ್ಲೆ ರಚನೆಯಾಯಿತು. 1800ರಲ್ಲಿ ಬಳ್ಳಾರಿ ಜಿಲ್ಲಯಲ್ಲಿ 20 ತಾಲೂಕು ಕೇಂದ್ರಗಳಿದ್ದವು. 1800 ರಿಂದ 1859 ರವರೆಗೆ ಕಂಪ್ಲಿ ತಾಲೂಕು ಕೇಂದ್ರವಾಗಿತ್ತು. ಆ ಸಂದರ್ಭದಲ್ಲಿ ಹೊಸಪೇಟೆ ಒಂದು ಸಣ್ಣ ಹಳ್ಳಿಯಾಗಿತ್ತು. ನಂತರ ತಾಲೂಕು ಕೇಂದ್ರವನ್ನಾಗಿ ಮಾಡಲಾಯಿತು. ಪಶ್ಚಿಮ ತಾಲೂಕುಗಳಿಗಾಗಿ ಹೊಸಪೇಟೆಯಲ್ಲಿ ಉಪವಿಭಾಗದ ಕಚೇರಿಯನ್ನು ತೆರೆಯಲಾಯಿತು.

ಓದಿ-ವಿಜಯನಗರ ಜಿಲ್ಲೆಗೆ ಸಂಕಷ್ಟ.. ಅರ್ಥಶಾಸ್ತ್ರಜ್ಞರಲ್ಲಿ ಕಾಡುತ್ತಿರುವ ಪ್ರಶ್ನೆ ಏನು?

ವಿಜಯನಗರ ಕಾಲದ ಮುಂಚೆ ರಾಜ ಮುಮ್ಮಡಿ‌ ಸಿಂಗ್ ಮಕ್ಕಳಾದ ಕಂಪಲಿರಾಯ, ಕುಮಾರರಾಮ ಕಂಪ್ಲಿಯನ್ನು ಕೇಂದ್ರಸ್ಥಾನವನ್ನಾಗಿ ಮಾಡಿ ರಾಜ್ಯಭಾರವನ್ನು ಮಾಡುತ್ತಿದ್ದರು. ದಕ್ಷಿಣ ಭಾರತದಲ್ಲಿ ಗಮನ ಸೆಳೆದಂತ ರಾಜಮನೆತನ ಇವರದ್ದಾಗಿತ್ತು. ಈ‌ ಕುರಿತು ಇತಿಹಾಸ ಪುಟದಲ್ಲಿ ದಾಖಲಾಗಿದೆ. ಕಾಲಾನಂತರ‌ ಕಂಪ್ಲಿ ಸಾಮ್ರಾಜ್ಯ ಪತನವಾಯಿತು.

ಬಳಿಕ ವಿಜಯನಗರ ಸಾಮ್ರಾಜ್ಯ ಉದಯವಾಯಿತು.‌ ಕುಮಾರರಾಮ ಜತೆಗೆ ಸೇನಾಧಿಕಾರಿಗಳಾಗಿ ಇದ್ದ ಸಹೋದರಾದ ಹಕ್ಕ, ಬುಕ್ಕ ವಿಜಯನಗರ ಸ್ಥಾಪನೆಗೆ ಕಾರಣೀಕರ್ತರಾಗುತ್ತಾರೆ. ‌ಬಳಿಕ ಹೊಸ ರಾಜ್ಯವನ್ನು ಪುನಶ್ಚೇತನಗೊಳಿಸಿದರು.

ಇತಿಹಾಸ ಹಿನ್ನೆಲೆ ಇರುವ ಕಂಪ್ಲಿಯನ್ನು ವಿಜಯನಗರ ಜಿಲ್ಲೆಗೆ ಸೇರಿಸುವಂತೆ ಜನರು ಹೋರಾಟ ಮಾಡುತ್ತಿದ್ದಾರೆ. ಈಗಾಗಲೇ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ‌. ಅಲ್ಲದೇ, ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಅವರು ಯಾವ ತ್ಯಾಗಕ್ಕೂ ಸಿದ್ಧ ಎಂದು ಹೇಳಿಕೆಯನ್ನು ನೀಡಿದ್ದಾರೆ. ಆದರೆ, ಮುಂದಿನ ವಿಜಯನಗರ ಜಿಲ್ಲೆಗೆ ಕಂಪ್ಲಿ ತಾಲೂಕು ಸೇರ್ಪಡೆಗೊಳ್ಳುತ್ತೋ, ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.