ETV Bharat / city

ಬಳ್ಳಾರಿಯಲ್ಲಿ ಸೆ.19 ರಂದು ಮೆಗಾ ಇ-ಲೋಕ ಅದಾಲತ್ - ಕೋವಿಡ್ ಸಂದರ್ಭದಲಿ ಕಕ್ಷಿದಾರರು ರಾಜೀ ಸಂಧಾನ

ಬಳ್ಳಾರಿ ಜಿಲ್ಲೆಯಲ್ಲಿರುವ ಅಂದಾಜು 27044 ಪ್ರಕರಣಗಳ ಪೈಕಿ ಸರಿಸುಮಾರು 4796 ಪ್ರಕರಣಗಳನ್ನು ಈ ರಾಜೀ ಸಂಧಾನ ಮೂಲಕ ಬಗೆಹರಿಸಿಕೊಳ್ಳುವ ವ್ಯಾಜ್ಯಗಳೆಂದು ಗುರುತಿಸಿದ್ದು, ಆಸಕ್ತ ಕಕ್ಷಿದಾರರು ಮೆಗಾ ಇ-ಲೋಕ ಅದಾಲತ್​ನಲ್ಲಿ ಭಾಗವಹಿಸಬಹುದಾಗಿದೆ.

JUDGE Arvind Kumara reconciles through e-Lok Adalat on Sept. 19
ಸೆ.19 ರಂದು ಮೇಘ ಇ- ಲೋಕ ಅದಾಲತ್ ಮೂಲಕ ರಾಜಿ ಸಂಧಾನ: ನ್ಯಾ.ಅರವಿಂದ ಕುಮಾರ
author img

By

Published : Aug 29, 2020, 9:56 PM IST

ಬಳ್ಳಾರಿ: ಇಲ್ಲಿನ ಜೆಎಂಎಫ್​​ಸಿ ನ್ಯಾಯಾಲಯದ ಆವರಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾದ ನ್ಯಾಯಾಧೀಶ ಅರವಿಂದ ಕುಮಾರ, ಮತ್ತೋರ್ವ ನ್ಯಾಯಾಧೀಶ ಅಲೋಕ ಅರಾಧ್ಯ ಸಮಕ್ಷಮದಲ್ಲಿ ಮೆಗಾ ಇ- ಲೋಕ ಅದಾಲತ್ ನ ಸ್ವರೂಪದ ಕುರಿತು ವಿಡಿಯೋ ಕಾನ್ಫರೆನ್ಸ್ ಮುಖೇನ ಮಾಧ್ಯಮದವರಿಗೆ ತಿಳಿಸಲಾಯಿತು.

ಸೆ.19 ರಂದು ಮೇಘ ಇ- ಲೋಕ ಅದಾಲತ್ ಮೂಲಕ ರಾಜಿ ಸಂಧಾನ: ನ್ಯಾ.ಅರವಿಂದ ಕುಮಾರ

ಮೊದಲ ಬಾರಿಗೆ ಮೆಗಾ ಇ-ಲೋಕ ಅದಾಲತ್ ಆಯೋಜಿಸಿದ್ದು, ಕೋವಿಡ್ ಸಂದರ್ಭದಲಿ ಕಕ್ಷಿದಾರರು ರಾಜೀ ಸಂಧಾನಕ್ಕೆ ಇಚ್ಛಿಸಿದ್ದಲ್ಲಿ ಇ-ಲೋಕ ಅದಾಲತ್​ನಲ್ಲಿ ಬಗೆಹರಿಸಿಕೊಳ್ಳಬಹುದಾಗಿದೆ. ತಮ್ಮಲ್ಲಿರುವ ಸಣ್ಣ ಮೊಬೈಲ್ ಮೂಲಕವೂ ಕೂಡ ಈ ಲೋಕ ಅದಾಲತ್​ನಲ್ಲಿ ಹಾಜರಿರುವ ಜಡ್ಜ್ ಗೆ ಕರೆ ಮಾಡಿದರೆ ಸಾಕು. ನಿಮ್ಮ ರಾಜೀ ಸಂಧಾನದ ಪ್ರಕ್ರಿಯೆಯನ್ನ ಆಲಿಸಿ, ಪರ-ವಿರೋಧ ಕಕ್ಷಿದಾರರ ಒಪ್ಪಿಗೆ ಮೇರೆಗೆ ಬಗೆಹರಿಸುವ ಪ್ರಯತ್ನ ಇಲ್ಲಿ ನಡೆಸಲಾಗುವುದೆಂದು ಹೈಕೋರ್ಟಿನ ನ್ಯಾಯಾಧೀಶ ಅರವಿಂದ ಕುಮಾರ ತಿಳಿಸಿದರು.

ವಿಡಿಯೋ ಕಾನ್ಫರೆನ್ಸ್ ಮುಗಿದ ಬಳಿಕ ಜಿಲ್ಲಾ ಜೆಎಂಎಫ್​ಸಿ ಕೋರ್ಟಿನ ನ್ಯಾಯಾಧೀಶ ಕೃಷ್ಣ ಬಿ. ಅಸೋಡೆ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸೆಪ್ಟೆಂಬರ್ 19 ರಂದು ನಡೆಯಲಿರುವ ಮೆಗಾ ಇ-ಲೋಕ ಅದಾಲತ್​ನಲ್ಲಿ ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಯಸುವ ಕಕ್ಷಿದಾರರು ತಮ್ಮ ವಕೀಲರ ಮೂಲಕ ಅಥವಾ ಮನೆಯಲ್ಲೇ ಕುಳಿತುಕೊಂಡು ಮೊಬೈಲ್ ಸಂಖ್ಯೆಗೆ ಕರೆಮಾಡಬಹುದು.

ಜಿಲ್ಲೆಯಲ್ಲಿರುವ ಅಂದಾಜು 27044 ಪ್ರಕರಣಗಳ ಪೈಕಿ ಸರಿಸುಮಾರು 4796 ಪ್ರಕರಣಗಳನ್ನು ಈ ರಾಜೀ ಸಂಧಾನ ಮೂಲಕ ಬಗೆಹರಿಸಿಕೊಳ್ಳುವ ವ್ಯಾಜ್ಯಗಳೆಂದು ಗುರುತಿಸಿದ್ದು, ಆಸಕ್ತ ಕಕ್ಷಿದಾರರು ಮೆಗಾ ಇ-ಲೋಕ ಅದಾಲತ್​ನಲ್ಲಿ ಭಾಗವಹಿಸಬಹುದಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಬಾಕಿಯಿರುವ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಬಳ್ಳಾರಿ ಜಿಲ್ಲಾ ನ್ಯಾಯಾಲಯದ ಇ-ಮೇಲ್, ballari.dlsa@gmail.com ಅಥವಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ದೂ: 08392-278077 ಸಂಪರ್ಕಿಸಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.