ETV Bharat / city

'ಸ್ಥಳೀಯ ರೈತರಿಗೆ ನೀರಿಲ್ಲ, ಆದ್ರೆ ಸರ್ಕಾರ ಆಂದ್ರಕ್ಕೆ ನೀರು ಬಿಡಲು ಸಿದ್ಧವಾಗಿದೆ' - ಕರ್ನಾಟಕ ರಾಜ್ಯ ರೈತ ಸಂಘ ಪ್ರತಿಭಟನೆ

ನಮ್ಮ ರೈತರು ನೀರಿಲ್ಲದೆ ಪರದಾಡುತ್ತಿದ್ದಾರೆ, ಆದ್ರೆ ಸರ್ಕಾರ ಮಾತ್ರ ಆಂದ್ರಪ್ರದೇಶದ ಪಾವಗಡಕ್ಕೆ ನೀರು ಹರಿಸುವ ಯೋಜನೆಗೆ ಕೈಹಾಕಿ ಸ್ಥಳೀಯ ರೈತರಿಗೆ ಅನ್ಯಾಯ ಮಾಡಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ಜೆ. ಕಾರ್ತಿಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

hospete-karnataka-state-farmers-association-press-meet
ಕರ್ನಾಟಕ ರಾಜ್ಯ ರೈತ ಸಂಘದ ಸುದ್ದಿಗೊಷ್ಠಿ
author img

By

Published : Mar 13, 2020, 5:05 AM IST

ಹೊಸಪೇಟೆ : ಸ್ಥಳೀಯ ರೈತರು ನೀರಿಲ್ಲದೆ ಪರದಾಡುತ್ತಿದ್ದಾರೆ, ಆದ್ರೆ ಸರ್ಕಾರ ಮಾತ್ರ ಆಂದ್ರಪ್ರದೇಶದ ಪಾವಗಡಕ್ಕೆ ನೀರು ಹರಿಸುವ ಯೋಜನೆಗೆ ಕೈಹಾಕಿ ಸ್ಥಳೀಯ ರೈತರಿಗೆ ಅನ್ಯಾಯ ಮಾಡಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ಜೆ. ಕಾರ್ತಿಕ್ ಕಿಡಿಕಾರಿದರು.

ನಗರದಲ್ಲಿ ಸುದ್ದಿಗೊಷ್ಟಿ ನಡೆಸಿ ಮಾತನಾಡಿ, ತುಂಗಭದ್ರ ಜಲಾಶಯದಲ್ಲಿ ಹೂಳು ತುಂಬಿ ನೀರಿನ ಸಂಗ್ರಹಣಾ ಮಟ್ಟ ಕಡಿಮೆಯಾಗಿದೆ, ಅಲ್ಲದೆ ತಾಲೂಕಿನ ಕೆರೆಗಳು ನೀರಿಲ್ಲದೆ ಬತ್ತಿಹೊಗಿದೆ, ಇಂತಹ ಸಂದರ್ಭದಲ್ಲಿ ಸರ್ಕಾರ ಆಂದ್ರಪ್ರದೇಶದ ಪಾವಗಡಕ್ಕೆ ನೀರು ಬಿಡುವ ಯೋಜನೆ ಪ್ರಾರಂಭಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಸುದ್ದಿಗೊಷ್ಠಿ

ನಲ್ಲಾಪುರ ಕೆರೆ 1 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ, ಆದ್ರೆ ದುರಸ್ಥಿಕಾರ್ಯವಾಗದೆ ಕೆರೆಯಲ್ಲಿ ನೀರು ನಿಲ್ಲುತ್ತಿಲ್ಲ, ಅದನ್ನು ಸರಿಪಡಿಸಬೇಕಿದೆ. ಇನ್ನು ಅಮರಾವತಿ ಕಾಲೋನಿಯ ಬಸವಣ್ಣ ಕಾಲುವೆ ಕಾಮಗಾರಿ ಪ್ರಾರಂಭವಾಗಿದ್ದು, ಜನರು ಕಾಲುವೆಯಲ್ಲಿ ಪ್ಲಾಸ್ಟಿಕ್, ಕಸ, ಹಾಕುತ್ತಿದ್ದಾರೆ ಈ ಕುರಿತು ಅಧಿಕಾರಿಗಳು ಅಂತಹವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕಿದೆ ಎಂದು ಒತ್ತಾಯಿಸಿದರು.

ಈ ಮೇಲಿನ ಎಲ್ಲಾ ಬೇಡಿಕೆಗೆಳು ಈಡೇರಿಕೆಗಾಗಿ ಮಾರ್ಚ್​ 18 ರಂದು ನಗರದಲ್ಲಿ ಪ್ರತಿಭಟನೆ ನಡೆಸಲಾಗುವುದು, ಒಂದು ವೇಳೆ ಸರ್ಕಾರ ಶೀಘ್ರವಾಗಿ ಸಮಸ್ಯೆ ಪರಿಹರಿಸದಿದ್ದಲ್ಲಿ ಉಗ್ರವಾದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.