ETV Bharat / city

ಕಮಲಾಪುರ ಪಟ್ಟಣ ಪಂಚಾಯತಿ ಚುನಾವಣೆಗೆ ಹೈಕೋರ್ಟ್ ತಡೆ: ಆಕಾಂಕ್ಷಿಗಳಲ್ಲಿ ನಿರಾಸೆ - ಹೊಸಪೇಟೆ ನ್ಯೂಸ್​

ಹೊಸಪೇಟೆ ತಾಲೂಕಿನ ಕಮಲಾಪುರ ಪಟ್ಟಣ ಪಂಚಾಯತಿ ಚುನಾವಣೆಗೆ ಬೆಂಗಳೂರು ಹೈಕೋರ್ಟ್ ತಡೆಯಾಜ್ಞೆ ನೀಡಿದ ಹಿನ್ನೆಲೆ, ಆಕಾಂಕ್ಷಿಗಳಲ್ಲಿ ನಿರಾಸೆ ಮೂಡಿಸಿದೆ.

High Court barrier to Kamalapur Town Panchayat Election
ಕಮಲಾಪುರ ಪಟ್ಟಣ ಪಂಚಾಯತಿ ಚುನಾವಣೆಗೆ ಹೈಕೋರ್ಟ್ ತಡೆ: ಆಕಾಂಕ್ಷಿಗಳಲ್ಲಿ ನಿರಾಸೆ
author img

By

Published : Oct 20, 2020, 3:44 PM IST

ಹೊಸಪೇಟೆ (ಬಳ್ಳಾರಿ): ತಾಲೂಕಿನ‌ ಕಮಲಾಪುರ ಪಟ್ಟಣ ಪಂಚಾಯತಿ ಚುನಾವಣೆಗೆ ಬೆಂಗಳೂರು ಹೈಕೋರ್ಟ್ ತಡೆಯಾಜ್ಞೆ ನೀಡಿದ ಹಿನ್ನೆಲೆ, ಆಕಾಂಕ್ಷಿಗಳಲ್ಲಿ ನಿರಾಸೆ ಮೂಡಿಸಿದೆ.

ಕಮಲಾಪುರ ಪಟ್ಟಣ ಪಂಚಾಯತಿ ಚುನಾವಣೆಗೆ ಹೈಕೋರ್ಟ್ ತಡೆ: ಆಕಾಂಕ್ಷಿಗಳಲ್ಲಿ ನಿರಾಸೆ

ಇಂದು ಬೆಳಿಗ್ಗೆ ಪಟ್ಟಣ ಪಂಚಾಯಿತಿಗೆ ತಹಶೀಲ್ದಾರ್ ಎಚ್.ವಿಶ್ವನಾಥ್​ ಭೇಟಿ ನೀಡಿ, ಪರಿಶೀಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕೋರ್ಟ್ ಆದೇಶದಂತೆ ಚುನಾವಣೆಯನ್ನು ತಡೆ ಹಿಡಿಯಲಾಗಿದೆ. ಹಾಗಾಗಿ ಪಟ್ಟಣ ಪಂಚಾಯತಿ ಭೇಟಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ ಎಂದರು.

ಕಮಲಾಪುರ ಪಟ್ಟಣ ಪಂಚಾಯಿತಿ 20 ಸದಸ್ಯರನೊಳಗೊಂಡಿದೆ. ಆ ಪೈಕಿ 14 ಜನ ಕಾಂಗ್ರೆಸ್, ಓರ್ವ ಬಿಜೆಪಿ ಸದಸ್ಯ, 5 ಪಕ್ಷೇತರ ಸದಸ್ಯರು ಚುನಾಯಿತರಾಗಿದ್ದರು. ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಮೇಲುಗೈಯನ್ನು ಸಾಧಿಸಿತ್ತು.‌ ಅಧ್ಯಕ್ಷ ಸಾಮಾನ್ಯ ಹಾಗೂ ಉಪಾಧ್ಯಕ್ಷ ಎಸ್ಟಿ ಮಹಿಳೆ ಮೀಸಲಾಗಿತ್ತು. ಭಾನುವಾರ ಸಂಜೆ ಜಿಲ್ಲಾ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ಶಿವಯೋಗಿ ನೇತೃತ್ವದಲ್ಲಿ ಮುಖಂಡರು ಸಭೆ ನಡೆಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಯಾರು ಎಂಬುದು ಎಂದು ಖಚಿತಪಡಿಸಿದ್ದರು.

ಸೈಯದ್ ಅಮನುಲ್ಲಾ ಅಧ್ಯಕ್ಷ ಹಾಗೂ ಉಪಾಧ್ಯಕ್ಷೆ ಬೋರಮ್ಮ ಅವರು ಅವಿರೋಧ ಆಯ್ಕೆಯಾಗುವ ಸಂಭವವಿತ್ತು.‌ ಆದರೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ಆಕಾಂಕ್ಷಿಗಳ ಅಧಿಕಾರದ ಆಸೆಗೆ ತಣ್ಣೀರು ಎರಚಿದಂತಾಗಿದೆ. ಕಳೆದ ವರ್ಷದಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ನೆನೆಗುದಿಗೆ ಬಿದ್ದಿತ್ತು. ಒಂದು ವಾರದ ಹಿಂದೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಘೋಷಣೆಯಾಗಿತ್ತು.‌ ಇದರಿಂದ ಆಕಾಂಕ್ಷಿಗಳಲ್ಲಿ ಅಧಿಕಾರಿದ ಆಸೆ ರೆಕ್ಕೆ ಬಿಚ್ಚಿತ್ತು. ಆದ್ರೀಗ ಚುನಾವಣೆಗೆ ತಡೆಯಾಜ್ಞೆ ನೀಡಿರುವುದು ಆಕಾಂಕ್ಷಿಗಳಲ್ಲಿ ನಿರಾಸೆ ಉಂಟುಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.