ETV Bharat / city

ಮಹಾಮಳೆಗೆ ಸಂಡೂರು ತಾಲೂಕಿನಲ್ಲಿ 36 ಮನೆಗಳು ಭಾಗಶಃ ಕುಸಿತ! - ಅರಣ್ಯ ಖಾತೆ ಸಚಿವ ಆನಂದ ಸಿಂಗ್

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಚೋರನೂರು ಹೋಬಳಿ ವ್ಯಾಪ್ತಿಯಲ್ಲಿ ಅಂದಾಜು 27 ಹಾಗೂ ತೋರಣಗಲ್ಲು ಹೋಬಳಿ ವ್ಯಾಪ್ತಿಯಲ್ಲಿ 8 ಮತ್ತು ಸಂಡೂರು ಹೋಬಳಿ ವ್ಯಾಪ್ತಿಯಲ್ಲಿ ಒಂದು ಕಚ್ಚಾ ಮನೆ ಭಾಗಶಃ ಕುಸಿದು ಬಿದ್ದಿವೆ.

Heavy rain in Ballary
ಜಲಾವೃತವಾಗಿರುವ ದೇವಸ್ಥಾನ
author img

By

Published : Jul 25, 2020, 8:53 PM IST

ಬಳ್ಳಾರಿ: ಮೂರು ದಿನಗಳಿಂದ ಸುರಿದ ಧಾರಾಕಾರ ಮಹಾಮಳೆಗೆ ಗಣಿ ಜಿಲ್ಲೆಯ ಜನರು ತತ್ತರಿಸಿದ್ದಾರೆ. ಹಳ್ಳಕೊಳ್ಳಗಳು, ಮೇಲ್ಸೆತುವೆ ಸೇರಿದಂತೆ ಹೊಲ-ಗದ್ದೆಗಳಿಗೆ ನೀರು ನುಗ್ಗಿದೆ. ಇದರಿಂದ ಅಪಾರ ಪ್ರಮಾಣ ಬೆಳೆನಷ್ಟ ಉಂಟಾಗಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಕಚ್ಚಾ ಮನೆಗಳಲ್ಲಿ ವಾಸಿಸುವವರ ನಿದ್ದೆಗೆಡಿಸಿದೆ.

Heavy rain in Ballary
ಜಲಾವೃತವಾಗಿರುವ ದೇವಸ್ಥಾನ

ಜಿಲ್ಲೆಯ ಸಂಡೂರು ತಾಲೂಕಿನ ಚೋರನೂರು ಹೋಬಳಿ ವ್ಯಾಪ್ತಿಯಲ್ಲಿ ಅಂದಾಜು 27 ಹಾಗೂ ತೋರಣಗಲ್ಲು ಹೋಬಳಿ ವ್ಯಾಪ್ತಿಯಲ್ಲಿ 8 ಮತ್ತು ಸಂಡೂರು ಹೋಬಳಿ ವ್ಯಾಪ್ತಿಯಲ್ಲಿ ಒಂದು ಕಚ್ಚಾ ಮನೆಗಳು (ಮಣ್ಣಿನ ಮನೆಗಳು) ಭಾಗಶಃ ಕುಸಿದು ಬಿದ್ದಿದೆ. ಆ ಮನೆಗಳಲ್ಲಿ ವಾಸಿಸುವ ಕುಟುಂಬ ಸದಸ್ಯರು ಭಯಭೀತರಾಗಿದ್ದಾರೆ.

ಕೆಲವೆಡೆ ಪೂರ್ತಿ ಮನೆ, ಇನ್ನೂ ಕೆಲವೆಡೆ ಒಂದು ಭಾಗ ಅಥವಾ ಮೇಲ್ಛಾವಣಿ ಕುಸಿದಿದೆ. ಅದರಿಂದ ಮಳೆಯ ನೀರು ಮನೆಯೊಳಗೆ ನುಗ್ಗುತ್ತಿದೆ. ಹೀಗಾಗಿ, ರಾತ್ರಿಯಿಡೀ ನಿದ್ದೆಗೆಡುವ ಸನ್ನಿವೇಶ ನಿರ್ಮಾಣವಾಗಿದೆ.

Heavy rain in Ballary
ಮನೆ ಕುಸಿದಿರುವುದು

ಸಚಿವ ಆನಂದಸಿಂಗ್ ಭೇಟಿ: ಜಿಲ್ಲೆಯ ಹೊಸಪೇಟೆ ನಗರದಲ್ಲಿಂದು ಸುರಿದ ಭಾರೀ ಮಳೆಯಿಂದಾಗಿ ನಾನಾ ಪ್ರದೇಶಗಳು ಜಲಾವೃತಗೊಂಡಿವೆ. ಇಲ್ಲಿನ ಪಟೇಲಗರದ ಶ್ರೀಕೃಷ್ಣ ದೇಗುಲದಲ್ಲಿ ಒಳಗಡೆ ನೀರು ನುಗ್ಗಿದೆ. ಅರಣ್ಯ ಖಾತೆ ಸಚಿವ ಆನಂದ್​​​​​​ಸಿಂಗ್ ಅವರು ಹಾಗೂ ಅವರ ಅಳಿಯ ಧರ್ಮೇಂದ್ರ ಸಿಂಗ್ ಭೇಟಿ ನೀಡಿ ಪರಿಶೀಲಿಸಿದರು.

ಜೆ.ಪಿ. ನಗರದ ಬಳ್ಳಾರಿ ರಸ್ತೆಯಲ್ಲಿ ಮರ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ. ಬಸ್​​​ ಡಿಪೋ ಹಿಂಭಾಗದ ಬುಡ್ಗ ಜಂಗಮ ಕಾಲೊನಿಯ ಗುಡಿಸಲುಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ಸಾಕಷ್ಟು ಪ್ರಮಾಣದಲ್ಲಿ ನಷ್ಟವಾಗಿದೆ.

ಸೇತುವೆ ಮೇಲೆ ಹರಿಯುತ್ತಿರುವ ನೀರು

ರಾರಾವಿ ನದಿ ಸೇತುವೆ ಮೇಲೆ ನೀರು: ಜಿಲ್ಲೆಯ ಸಿರುಗುಪ್ಪ ತಾಲೂಕಿನಿಂದ ನೆರೆಯ ಆಂಧ್ರಪ್ರದೇಶದ ಅದೋನಿ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿಯ (ಕರ್ನೂಲು-ಕುಷ್ಟಗಿ‌) ರಾರಾವಿ ಬಳಿಯ (ವೇದಾವತಿ‌) ಹಗರಿ‌ ನದಿಯ ಸೇತುವೆ ಮೇಲ್ಭಾಗದಲ್ಲಿ ನೀರು ಹರಿಯುತ್ತಿರುವುದರಿಂದ ರಸ್ತೆ ಸಂಚಾರ ಸ್ಥಗಿತಗೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.