ETV Bharat / city

ಕೋವಿಡ್ ನಿಯಂತ್ರಣಕ್ಕೆ ಲಾಕ್​​​ಡೌನ್ ಒಂದೇ ಪರಿಹಾರವಲ್ಲ: ಉಗ್ರಪ್ಪ - ಕೋವಿಡ್ ನಿಯಂತ್ರಣಕ್ಕೆ ಲಾಕ್ ಡೌನ್

ಕೋವಿಡ್ ನಿಯಂತ್ರಣಕ್ಕೆ ಲಾಕ್​​ಡೌನ್ ಒಂದೇ ಪರಿಹಾರವಲ್ಲ. ಅದರ ಬದಲಾಗಿ ಪರ್ಯಾಯ ಮಾರ್ಗಗಳನ್ನ ಕಂಡುಕೊಳ್ಳಲು ರಾಜ್ಯ ಸರ್ಕಾರ ಮುಂದಾಗಬೇಕು. ಇದು ಕಾಂಗ್ರೆಸ್ ಪಕ್ಷದ ಸ್ಪಷ್ಟವಾದ ನಿಲುವಾಗಿದೆ ಎಂದು ಮಾಜಿ ಸಂಸದ ಉಗ್ರಪ್ಪ ಹೇಳಿದರು.

former mp ugrappa talk
ಮಾಜಿ ಸಂಸದ ಉಗ್ರಪ್ಪ
author img

By

Published : Apr 20, 2021, 7:42 PM IST

ಬಳ್ಳಾರಿ: ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಹೆಚ್ಚಾಗಿದ್ದು, ಕೇವಲ ಲಾಕ್​ಡೌನ್ ಒಂದೇ ಮಾರ್ಗವಲ್ಲ. ಅದರಿಂದ ಕೋವಿಡ್ ನಿಯಂತ್ರಣಕ್ಕೆ ಬರಲ್ಲ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.

ಮಾಜಿ ಸಂಸದ ಉಗ್ರಪ್ಪ

ಬಳ್ಳಾರಿಯ ರಾಯಲ್ ಪೋರ್ಟ್ ಹೋಟೆಲ್​​ನಲ್ಲಿಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೋವಿಡ್ ಎರಡನೇ ಅಲೆ ಶುರುವಾದಾಗಲೇ ಮುಂಜಾಗ್ರತಾ ಕ್ರಮಗಳನ್ನ ರಾಜ್ಯ ಸರ್ಕಾರ ಕೈಗೊಳ್ಳಬೇಕಿತ್ತು. ಎಸ್​ಓಪಿ ಪ್ರಕಾರ ಏನೇನು ಕಠಿಣ ನಿಯಮಗಳಿದ್ದವೋ ಅವುಗಳನ್ನ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಿತ್ತು.‌ ಅದನ್ನೂ ಕೂಡ ಈ ರಾಜ್ಯ ಸರ್ಕಾರ ಮಾಡಲಿಲ್ಲ.

ಈಗ ಲಾಕ್​ಡೌನ್ ಮಾಡೋ ವಿಚಾರವನ್ನ ರಾಜ್ಯ ಸರ್ಕಾರ ಪ್ರಸ್ತಾಪ ಮಾಡುತ್ತಿದೆ. ಆದರೆ ಅದರಿಂದ ಏನೂ ಪ್ರಯೋಜನ ಆಗಲ್ಲ. ಕೋವಿಡ್ ನಿಯಂತ್ರಣಕ್ಕೆ ಲಾಕ್​​​ಡೌನ್ ಒಂದೇ ಪರಿಹಾರವಲ್ಲ. ಅದರ ಬದಲಾಗಿ ಪರ್ಯಾಯ ಮಾರ್ಗಗಳನ್ನ ಕಂಡುಕೊಳ್ಳಲು ರಾಜ್ಯ ಸರ್ಕಾರ ಮುಂದಾಗಬೇಕು. ಇದು ಕಾಂಗ್ರೆಸ್ ಪಕ್ಷದ ಸ್ಪಷ್ಟವಾದ ನಿಲುವಾಗಿದೆ ಎಂದು ಮಾಜಿ ಸಂಸದ ಉಗ್ರಪ್ಪ ಹೇಳಿದರು.

ಈ ಕೂಡಲೇ 307 ಕೇಸ್ ಬುಕ್ ಮಾಡಿ:

ಬಳ್ಳಾರಿ ಮಹಾನಗರದ ಪಾಲಿಕೆ ವ್ಯಾಪ್ತಿಯ ಎಂಟನೇಯ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ರಾಮಾಂಜನೇಯ ಅವರಿಗೆ ಜೀವಬೆದರಿಕೆ ಇದೆ. ಅದು 307 ಕೇಸ್ ಆಗಿರುತ್ತೆ. ಅದಕ್ಕೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ಅನುಮತಿ ಅಗತ್ಯವಿಲ್ಲ. ಇದನ್ನ ಮೊದಲು ಜಿಲ್ಲಾ ಪೊಲೀಸ್ ಇಲಾಖೆ ಅರಿಯಬೇಕು.

ಕೂಡಲೇ ನಮ್ಮ ಪಕ್ಷದ ಅಭ್ಯರ್ಥಿ ರಾಮಾಂಜನೇಯ ನೀಡಿರುವ ದೂರಿನ ಮೇರೆಗೆ ಕೇಸ್ ದಾಖಲಿಸಬೇಕು. ಇಲ್ಲ ಎಂದರೆ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯನ್ನ ಶಾಂತಿಯುತವಾಗಿ ಎದುರಿಸಲು ತುಂಬಾ ಕಷ್ಟಕರ ಆಗುತ್ತದೆ ಎಂದು ಉಗ್ರಪ್ಪ ಎಚ್ಚರಿಕೆ ನೀಡಿದ್ದಾರೆ.

ಡಿಸಿಸಿ ಅಧ್ಯಕ್ಷರ ವಿರುದ್ಧ ಕೇಸ್ ದಾಖಲಿಸಿದ್ದು ಕಾನೂನು ಬಾಹಿರ:

ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜಿ.ಎಸ್.ಮಹಮ್ಮದ ರಫೀಕ್ ಅವರ ವಿರುದ್ಧ ಕೇಸ್ ದಾಖಲಿಸೋಕೆ ಮುಂದಾಗಿರೋದು ಕಾನೂನು ಬಾಹಿರವಾಗಿದೆ. ಕೂಡಲೇ ಆ ಕೇಸ್ ಹಿಂಪಡೆಯಬೇಕೆಂದು ಈಗಾಗಲೇ ಡಿಸಿಯವರಿಗೆ ಸೂಚನೆ ನೀಡಿರುವೆ. ಈ ಬಿಜೆಪಿಗರ ಕೆಲಸವೇ ಇಂಥದ್ದು. ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರ ಮೇಲೆ ಈ ರೀತಿಯ ಇಲ್ಲಸಲ್ಲದ ಕೇಸ್​​ಗಳನ್ನ ದಾಖಲಿಸಿ ಅವರನ್ನ ಹಿಮ್ಮೆಟ್ಟಿಸುವ ಕಾರ್ಯಕ್ಕೆ ಮುಂದಾಗೋದು ಅವರ ಉದ್ದೇಶವಾಗಿರುತ್ತೆ ಎಂದು ಮಾಜಿ ಸಂಸದ ಉಗ್ರಪ್ಪ ದೂರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.