ETV Bharat / city

ಜಿಂದಾಲ್ ಉಕ್ಕು ಕಾರ್ಖಾನೆಗೆ ಭೂಮಿ ಪರಭಾರೆ.. ಕಾಂಗ್ರೆಸ್​ ಮಾಜಿ ಶಾಸಕ ಅನಿಲ್‌ ಲಾಡ್‌ ಅಪಸ್ವರ

author img

By

Published : Jun 17, 2019, 5:26 PM IST

ಜಿಂದಾಲ್ ಉಕ್ಕು ಕಾರ್ಖಾನೆಗೆ ರಾಜ್ಯ ಸರ್ಕಾರ ಭೂಮಿ ಪರಭಾರೆ ಮಾಡುತ್ತಿರುವುದನ್ನು ಕಾಂಗ್ರೆಸ್​ ಮಾಜಿ ಶಾಸಕ ಹೆಚ್ ಅನಿಲ್ ಲಾಡ್ ವಿರೋಧಿಸಿದ್ದಾರೆ. ಸಚಿವ ಸಂಪುಟದ ಉಪಸಮಿತಿಗೆ ಈ ಕುರಿತಾದ ಸಮಗ್ರ ವರದಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಮಾಜಿ ಶಾಸಕ ಹೆಚ್ ಅನಿಲ್ ಲಾಡ್

ಬಳ್ಳಾರಿ: ರಾಜ್ಯ ಸರ್ಕಾರ ಜಿಂದಾಲ್ ಉಕ್ಕು ಕಾರ್ಖಾನೆಗೆ ಅಂದಾಜು 3,666 ಎಕರೆ ಭೂಮಿ ಪರಭಾರೆ ವಿಚಾರವಾಗಿ ಮಾಜಿ ಶಾಸಕ ಹೆಚ್. ಅನಿಲ್ ಲಾಡ್ ಅಪಸ್ವರ ಎತ್ತಿದ್ದಾರೆ.

ಜಿಂದಾಲ್ ಉಕ್ಕು ಕಾರ್ಖಾನೆಗೆ ಭೂಮಿ ಪರಭಾರೆ ಮಾಡುತ್ತಿರುವುದಕ್ಕೆ ವಿರೋಧ

ಬಳ್ಳಾರಿಯ ಪತ್ರಿಕಾಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಂದಾಲ್ ಉಕ್ಕು ಕಾರ್ಖಾನೆಗೆ ಭೂಮಿ ಪರಭಾರೆ ಮಾಡೋದು ನಮ್ಮದೂ ವಿರೋಧವಿದೆ. ಗುತ್ತಿಗೆ ಆಧಾರದಡಿ ಭೂಮಿ ಕೊಡೋದು ನನಗೆ ಸಹಮತವಿದೆ. ಅದನ್ನು ನವೀಕರಣಗೊಳಿಸಿಕೊಳ್ಳುವ ಸೌಲಭ್ಯ ಕಲ್ಪಿಸಬೇಕು ಎಂದು ಕೋರಿದರು. ಈ ವೇಳೆ ಹಾಲಿ ಶಾಸಕ ಆನಂದಸಿಂಗ್ ಕೂಡ ಅನಿಲ್ ಲಾಡ್ ಅವರಿಗೆ ಸಾಥ್​ ನೀಡಿದರು.

ಜಿಂದಾಲ್ ಸಮೂಹ ಸಂಸ್ಥೆಗೆ ಇಷ್ಟೊಂದು ಬೆಲೆಬಾಳುವ ಭೂಮಿಯನ್ನು ಪರಭಾರೆ ಮಾಡೋದು ಯಾವ ಆಧಾರದ ಮೇಲೆ ಎಂಬುದನ್ನು ರಾಜ್ಯ ಸರ್ಕಾರ ಮೊದಲು ಸ್ಪಷ್ಟಪಡಿಸಬೇಕು. ಒಂದು ವೇಳೆ ಸರ್ಕಾರ ಭೂಮಿ ಪರಭಾರೆ ಮಾಡಲು ಒಪ್ಪದರೆ, ಸಾವಿರಾರು ಕೋಟಿ ರೂ. ಬೆಲೆ ಬಾಳುವ ಈ ಭೂಮಿಯನ್ನು ಜಿಂದಾಲ್ ಸಮೂಹ ಸಂಸ್ಥೆಯು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಅಡಮಾನವಿಟ್ಟು ಸಾಲಸೌಲಭ್ಯ ಪಡೆಯುವ ಸಾಧ್ಯತೆಯಿದೆ.‌ ಹಾಗಾಗಿ, ರಾಜ್ಯ ಸರ್ಕಾರವು ಯಾವುದೇ ಕಾರಣಕ್ಕೂ ಬ್ಯಾಂಕಿನಲ್ಲಿ ಈ ಭೂಮಿಯನ್ನು ಅಡಮಾನ ಇಡಬಾರದೆಂಬ ಷರತ್ತು ಹಾಕುವ ಮುಖೇನ ಜಿಂದಾಲ್ ಸಂಸ್ಥೆಯವರೆಗೆ ಮಾರಾಟ ಮಾಡಲು ಮುಂದಾಗಬೇಕೆಂದು ಒತ್ತಾಯಿಸಿದರು.

ಜಿಂದಾಲ್ ಉಕ್ಕು ಕಾರ್ಖಾನೆಗೆ ಭೂಮಿ ಪರಭಾರೆ ಮಾಡೋದನ್ನ ವಿರೋಧಿಸಿ ಸಚಿವ ಸಂಪುಟದ ಉಪಸಮಿತಿಗೆ ಸಮಗ್ರ ವರದಿಯನ್ನೂ ನೀಡಲಾಗುವುದು ಎಂದು ಮಾಜಿ ಶಾಸಕ ಅನಿಲ್‌ ಲಾಡ್‌ ತಿಳಿಸಿದ್ದಾರೆ.

Intro:ಜಿಂದಾಲ್ ಉಕ್ಕು ಕಾರ್ಖಾನೆಗೆ ಭೂಮಿ ಪರಭಾರೆ:
ಕಾಂಗ್ರೆಸ್ಸಿನ ಮಾಜಿ ಶಾಸಕ ಲಾಡ್ ಅಪಸ್ವರ!.
ಬಳ್ಳಾರಿ: ರಾಜ್ಯ ಸರ್ಕಾರ ಜಿಂದಾಲ್ ಉಕ್ಕು ಕಾರ್ಖಾನೆಗೆ ಅಂದಾಜು 3, 666 ಎಕರೆ ಭೂಮಿ ಪರಭಾರೆ ವಿಚಾರವಾಗಿ ಮಾಜಿ ಶಾಸಕ ಹೆಚ್.ಅನಿಲ್ ಲಾಡ್ ಅವರೂ ಕೂಡ ಅಪಸ್ವರ ಎತ್ತಿದ್ದಾರೆ.
ಬಳ್ಳಾರಿಯ ಪತ್ರಿಕಾಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಹಾಲಿ ಶಾಸಕ ಆನಂದಸಿಂಗ್ ಅವರೊಂದಿಗೆ ಸಾಥ್ ನೀಡಿದ ಹೆಚ್. ಅನಿಲ್ ಲಾಡ್ ಅವರು, ಜಿಂದಾಲ್ ಉಕ್ಕು ಕಾರ್ಖಾನೆಗೆ ಭೂಮಿ ಪರಭಾರೆ ಮಾಡೋದು ನಮಗೂ ವಿರೋಧವಿದೆ. ಗುತ್ತಿಗೆ ಆಧಾರದಡಿ ಭೂಮಿ ಕೊಡೋದು ನನಗೆ ಸಹಮತ ವಿದೆ. ಅದನ್ನು ನವೀಕರಣಗೊಳಿಸಿಕೊಳ್ಳುವ ಸೌಲಭ್ಯ ಕಲ್ಪಿಸ ಬೇಕು ಎಂದು ಕೋರಿದ್ದಾರೆ.

Body:ಅದುಬಿಟ್ಟು ಜಿಂದಾಲ್ ಸಮೂಹ ಸಂಸ್ಥೆಗೆ ಇಷ್ಟೊಂದು ಬೆಲೆಬಾಳುವ ಭೂಮಿಯನ್ನು ಪರಭಾರೆ ಮಾಡೋದು ಯಾವ ಆಧಾರದ ಮೇಲೆ ಎಂಬುದನ್ನು ರಾಜ್ಯ ಸರ್ಕಾರ ಮೊದ್ಲು ಸ್ಪಷ್ಟ ಪಡಿಸಬೇಕೆಂದರು. ಹಾಗೊಂದು ವೇಳೆ ಸರ್ಕಾರ ಭೂಮಿ ಪರ ಭಾರೆ ಮಾಡುವುದಾದ್ರೆ, ಸಾವಿರಾರು ಕೋಟಿ ರೂ.ಗಳ ಬೆಲೆ ಬಾಳುವ ಈ ಭೂಮಿಯನ್ನು ಜಿಂದಾಲ್ ಸಮೂಹ ಸಂಸ್ಥೆಯು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಅಡಮಾನವಿಟ್ಟು ಸಾಲಸೌಲಭ್ಯ ಪಡೆಯುವ ಸಾಧ್ಯತೆಯಿದೆ.‌ ಆಗಾಗಿ, ರಾಜ್ಯ ಸರ್ಕಾರವು ಯಾವುದೇ ಕಾರಣಕ್ಕೂ ಬ್ಯಾಂಕಿನಲ್ಲಿ ಈ ಭೂಮಿಯನ್ನು ಅಡಮಾನ ಇಡಬಾರದೆಂಬ ಷರತ್ತು ಹಾಕುವ ಮುಖೇನ ಜಿಂದಾಲ್ ಸಂಸ್ಥೆಯವರೆಗೆ ಮಾರಾಟ ಮಾಡಲು ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.
ಉಪಸಮಿತಿಗೆ ಸಮಗ್ರ ವರದಿ: ಸಚಿವ ಸಂಪುಟದ ಉಪ ಸಮಿತಿಗೆ ಜಿಂದಾಲ್ ಉಕ್ಕು ಕಾರ್ಖಾನೆಗೆ ಭೂಮಿ ಪರಭಾರೆ ಮಾಡೋದನ್ನ ವಿರೋಧಿಸಿ ಸಚಿವ ಸಂಪುಟದ ಉಪಸಮಿತಿಗೆ ಸಮಗ್ರ ವರದಿಯನ್ನೂ ನೀಡಲಾಗುವುದು. ಅಲ್ಲದೇ, ಉಪ ಸಮಿತಿಯ ಸದಸ್ಯರೇ ಇಲ್ಲಿಗೆ ಬರಬೇಕು. ಸ್ಥಳೀಯವಾಗಿ ಯಾವ ರೀತಿಯ ಪರ, ವಿರೋಧವಿದೆ ಎಂಬುದನ್ನು ಅವರು ಕಣ್ಣಾರೆ ಕಂಡು ಉಪಸಮಿತಿಗೆ ಅವರೂ ಕೂಡ ವರದಿ ನೀಡ ಬೇಕೆಂದು ವಿನಂತಿಸಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_03_17_EX_MLA_ANIL_LAD_BYTE_7203310

KN_BLY_03b_17_EX_MLA_ANIL_LAD_BYTE_7203310

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.