ETV Bharat / city

'ಮಧ್ಯರಾತ್ರಿ ಕಾನೂನು ಜಾರಿ ಮಾಡುವವರು ದೇವದಾಸಿಯರಿಗೆ ಸೌಲಭ್ಯಗಳನ್ನು ಏಕೆ ನೀಡುತ್ತಿಲ್ಲ'

author img

By

Published : Dec 14, 2019, 4:44 PM IST

ಮೂಢನಂಬಿಕೆ ಮತ್ತು ಮೌಢ್ಯತೆಯಿಂದ ದೇವದಾಸಿ ಪದ್ಧತಿ ಹುಟ್ಟಿದೆ. ಸಮಾಜದಲ್ಲಿ ಈ ಪದ್ಧತಿಯನ್ನು ಹೋಗಲಾಡಿಸಬೇಕು ಎಂದು ಬಳ್ಳಾರಿ ಪೊಲೀಸ್ ಮಹಾನಿರ್ದೇಶಕ ಡಾ.ನಂಜುಂಡಸ್ವಾಮಿ ಹೇಳಿದರು.

Bellary Police Director General Nanjundaswamy
ಬಳ್ಳಾರಿ ಪೊಲೀಸ್ ಮಹಾನಿರ್ದೇಶಕ ಡಾ.ನಂಜುಂಡಸ್ವಾಮಿ

ಹೊಸಪೇಟೆ: ಮೂಢನಂಬಿಕೆ ಮತ್ತು ಮೌಢ್ಯತೆಯಿಂದ ದೇವದಾಸಿ ಪದ್ಧತಿ ಹುಟ್ಟಿದೆ. ಸಮಾಜದಲ್ಲಿ ಈ ಪದ್ಧತಿಯನ್ನು ಹೋಗಲಾಡಿಸಬೇಕು. ದೇವದಾಸಿಗಳು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಬಳ್ಳಾರಿ ಪೊಲೀಸ್ ಮಹಾನಿರ್ದೇಶಕ ಡಾ.ನಂಜುಂಡಸ್ವಾಮಿ ಹೇಳಿದರು.

ನಗರದ ಬಲಿಜ ಭವನದಲ್ಲಿ ಆಯೋಜಿಸಿದ್ದ ದೇವದಾಸಿ ತಾಯಂದಿರ ಮತ್ತು ಮಕ್ಕಳ ಸ್ವಾಭಿಮಾನ ಸಮಾವೇಶದಲ್ಲಿ ಮಾತನಾಡಿದ ಅವರು, ದೇವದಾಸಿ ಅಂದರೆ ದೇವರಿಗೆ ದಾಸಿಯಾಗಿರುವವರು. ಆದರೆ, ಉನ್ನತ ವರ್ಗ ದೇವರ ಸೇವೆಗೆ ಬಿಡುತ್ತಿಲ್ಲ. ಸರ್ಕಾರ ಅವರಿಗೆ ಸೇರಬೇಕಾದ ಸೌಲಭ್ಯಗಳನ್ನು ಶೀಘ್ರ ತಲುಪಿಸಬೇಕು ಎಂದರು.

ಬಳ್ಳಾರಿ ಪೊಲೀಸ್ ಮಹಾನಿರ್ದೇಶಕ ಡಾ.ನಂಜುಂಡಸ್ವಾಮಿ

ಭಾರತದ ಮೂಲ ನಿವಾಸಿಗಳು ಇಂದು ದೇಶದ ಅಸ್ಪೃಶ್ಯತೆಗೆ ಒಳಾಗಾಗಿದ್ದಾರೆ‌. ದಲಿತರನ್ನು ಕಿಳಿರಿಮೆ ಭಾವನೆಯಿಂದ ಕಾಣುತ್ತಿದ್ದಾರೆ. ಬಾದಾಮಿ ಚಾಲುಕ್ಯರು, ಹೊಯ್ಸಳರ ಅರಸರು ದಲಿತರು. ಮೊದಲು ಮೈಸೂರಿನ ಚಾಮುಂಡಿಗೆ ದಲಿತ ಜನಾಂಗದವರೇ ಪೂಜೆ ಸಲ್ಲಿಸುತ್ತಿದ್ದರು. ಕಾಲ ಬದಲಾದಂತೆ ಬ್ರಾಹ್ಮಣರು ದೇವಸ್ಥಾನದ ಆಡಳಿತ ಚುಕ್ಕಾಣಿ ಹಿಡಿದರು ಎಂದು ವಿವರಿಸಿದರು.

ದೇಶದಲ್ಲಿ ಮಧ್ಯ ರಾತ್ರಿಯಲ್ಲಿ ಕಾನೂನು ತರುತ್ತಾರೆ. ಅದಕ್ಕೆ ತಿದ್ದುಪಡಿ ತರುತ್ತಾರೆ. ಆದರೆ ದಲಿತರಿಗೆ ಹಾಗೂ ದೇವದಾಸಿ ತಾಯಂದಿರಿಗೆ ಮತ್ತು ಮಕ್ಕಳಿಗೆ ಸಂಬಂಧಿಸಿದ ಕಾನೂನುಗಳನ್ನು ಮಾತ್ರ ಏಕೆ ಜಾರಿ ಮಾಡುತ್ತಿಲ್ಲ. ಅವರಿಗೆ ಮೂಲಸೌಲಭ್ಯಗಳನ್ನು ಏಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ದಲಿತ ಜನಾಂಗದಲ್ಲಿ ಹುಟ್ಟಿದ್ದೇವೆ ಎಂಬ ಕೀಳರಿಮೆ ಭಾವನೆಯನ್ನು ಯುವಕರು ತಮ್ಮ ಮನಸ್ಸಿನಿಂದ ಮೊದಲು ತೆಗೆದು ಹಾಕಬೇಕು ಎಂದು ಧೈರ್ಯ ನೀಡಿದರು.

Intro:ಹೊಸಪೇಟೆಯಲ್ಲಿ ದೇವದಾಸಿ ತಾಯಂದಿರ ಮಕ್ಕಳ‌ ಸ್ವಾಭಿಮಾನ ಸಮಾವೇಶ
ಹೊಸಪೇಟೆ : ದೇವದಾಸಿ ಪದ್ಧತಿ ಮೂಢನಂಬಿಕೆ ಮತ್ತು ಮೌಢ್ಯತೆಯಿಂದ ದೇವದಾಸಿ ಪದ್ಧತಿಗೆ ಹುಟ್ಟಿದೆ. ರಾಜ್ಯದ ಹೆಸರಾಂತ ದೇವಸ್ಥಾನಗಳನ್ನು ದೇವದಾಸಿ ಮಹಿಳೆಯರು ಪೂಜೆಯನ್ನು ಮಾಡಬೇಕು. ಬಿಕ್ಷೆಯನ್ನು ಬೇಡುವುದನ್ನು ಸ್ವಾಭಿಮಾನದಿಂದ ಬದಕನ್ನು ಕಟ್ಟಿಕೊಳ್ಳಬೇಕು ಎಂದು ಬಳ್ಳಾರಿ ಜಿಲ್ಲೆಯ ಪೊಲೀಸ್ ಮಹಾ ನಿರ್ದೆಶಕ ಡಾ.ನಂಜುಂಡ ಸ್ವಾಮಿ ಮಾತನಾಡಿದರು.

Body:ನಗರದ ಬಲಿಜ ಭವನದಲ್ಲಿ ಇಂದು ದೇವದಾಸಿ ತಾಯಂದಿರ ಮತ್ತು ಮಕ್ಕಳ ಸ್ವಾಭಿಮಾನ ಸಮಾವೇಶವನ್ನು ಉದ್ದೇಶಿಸಿ ಕುರಿತು ಬಳ್ಳಾರಿ ಜಿಲ್ಲೆಯ ಪೊಲೀಸ್ ಮಹಾ ನಿರ್ದೇಶಕರು ಡಾ.ನಂಜುಂಡ ಸ್ವಾಮಿ ಅವರು ಮಾತನಾಡಿದರು. ದೇವದಾಸಿ ಅಂದರೆ ದೇವರಿಗೆ ದಾಸಿಯಾಗಿರುವವರು.ದೇವರ ಸೇವೆಯನ್ನು ಮಾಡುವುದಕ್ಕೆ ಉನ್ನತ ವರ್ಗದವರು ಬಿಡುತ್ತಿಲ್ಲ. ಸರಕಾರದಿಂದ ಮೂಲಭೂತ ಸೌಲಗಳನ್ನು ಅವರಿಗೆ ಸಂಭಂದಿಸಿ ಸೌಲಭ್ಯಗಳನ್ನು ಒದಗಿಸಿಕೊಡಬೇಕಿದೆ ಎಂದು ಮಾತನಾಡಿದರು.

ಭಾರತ ದೇಶದ ಮೂಲ ನಿವಾಸಿಗಳು ಇಂದು ದೇಶದ ಅಸ್ಪೃಶ್ಯತೆಗೆ ಒಳಾಗಾಗಿದ್ದಾರೆ‌. ದಲಿತರನ್ನು ಕಿಳಿರಿಮೆಯ ಭಾವನೆಯಿಂದ ಕಾಣುತ್ತಿದ್ದಾರೆ. ಬಾದಾಮಿ ಚಾಲುಕ್ಯರು,ಹೊಯ್ಸಳ ರಾಜರು ಮೂಲತ ದಲಿತ ಅರಸರಾಗಿದ್ದಾರೆ. ಮೈಸೂರಿನ ಚಾಮುಂಡಿಯ ದೇವಸ್ಥಾನದಲ್ಲಿ ಪೂಜೆಯನ್ನು ಮೊದಲು ದಲಿತ ಜನಾಂಗದವರು ಮಾಡುತ್ತಿದ್ದರು. ತದನಂತರದಲ್ಲಿ ಕಾಲ ಬದಲಾದಂತೆ ಬ್ರಹ್ಮಣರು ದೇವಸ್ಥಾನದ ಆಡಳಿತ ಚುಕ್ಕಾಣಿಯನ್ನು ಹಿಡಿದರು ಎಂದು ಇತಿಹಾಸದ ಬಗ್ಗೆ ತಿಳಿಸಿದರು.

ಈ ದೇಶದಲ್ಲಿ ಮಧ್ಯ ರಾತ್ರಿಯಲ್ಲಿ ಕಾನೂನನ್ನು ಮಾಡುತ್ತಾರೆ. ಕಾನೂನಿನಲ್ಲಿರುವ ತಿದ್ದು ಪಡೆಗಳು ಬದಲಾವಣೆಗಳನ್ನು ಮಾಡುತ್ತಾರೆ‌. ಆದರೆ ದಲಿತರಿಗೆ ಹಾಗೂ ದೇವದಾಸಿ ತಾಯಂದಿರಿಗೆ ಮತ್ತು ಮಕ್ಕಳಿಗೆ ಸಂಬಂಧಿಸಿದ ಕಾನೂನುಗಳನ್ನು ಯಾಕೆ ಜಾರಿ ಮಾಡುತ್ತಿಲ್ಲ. ಸರಕಾರಕ್ಕೆ ಏನಾದರೂ ರೋಗ ಬಂದಿದೇನಾ ಎಂದು‌ ಸರಕಾರದ ವಿರುದ್ಧ ಕಿಡಿಕಾರಿದರು.ಅವರಿಗೆ ಮೂಲಭೂತ ಸೌಲಭ್ಯಗಳನ್ನು ಯಾಕೆ ನೀಡುತ್ತಿಲ್ಲ ಎಂದು ಪ್ರಶ್ನೆಯನ್ನು ಮಾಡಿದರು. ದಲಿತ ಜನಾಂಗದಲ್ಲಿ ಹುಟ್ಟಿದ್ದೇವೆ ಎಂಬ ಕಿಳಿರಿಮೆಯ ಭಾವನೆಯನ್ನು ಯುವಕರ ಮೊದಲು ತೆಗೆದು ಹಾಕಬೇಕು ಎಂದು ಯುವಕರಿಗೆ ಧೈರ್ಯವನ್ನು ನೀಡಿದರು.

Conclusion:KN_HPT_1_DEVADASITAYANDIR_MAKKALA_FUNCTION_KA10028
ETV Bharat Logo

Copyright © 2024 Ushodaya Enterprises Pvt. Ltd., All Rights Reserved.