ETV Bharat / city

ಮಸ್ಕಿ ವಿಧಾನಸಭಾ ಉಪ ಚುನಾವಣೆಗೆ ಬಿಜೆಪಿ ಸನ್ನದ್ಧ : ಸಚಿವ ಶ್ರೀರಾಮುಲು - ಕರ್ನಾಟಕ ಉಪಚುನಾವಣೆ 2020

ಬಸವನಗೌಡ ತುರವಿ ಹಾಳ ಹಾಗೂ ಪ್ರತಾಪಗೌಡ ಪಾಟೀಲರ ನಡುವೆ ಸಂಧಾನ‌ ಮಾಡಲಾಗಿದೆ. ಮಸ್ಕಿ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಬಿಜೆಪಿ ಸನ್ನದ್ಧವಾಗಿದೆ. ಬಿಜೆಪಿಯಿಂದ ಪ್ರತಾಪ ಗೌಡ ಪಾಟೀಲರೇ ಸ್ಪರ್ಧಿಸಲಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ಹೇಳಿದರು.

bjp-party-is-ready-to-face-maski-assembly-by-elections
ಸಚಿವ ಬಿ ಶ್ರೀರಾಮುಲು
author img

By

Published : Nov 2, 2020, 4:09 PM IST

ಬಳ್ಳಾರಿ: ಮಸ್ಕಿ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಬಿಜೆಪಿ ಸನ್ನದ್ಧವಾಗಿದೆ. ಯಾವುದೇ ಕ್ಷಣದಲ್ಲಾದ್ರೂ ಚುನಾವಣೆ ಎದುರಾದ್ರೆ ಸಮರ್ಥವಾಗಿ ಎದುರಿಸುತ್ತೇವೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ತಿಳಿಸಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಪ್ರತಾಪ ಗೌಡ ಪಾಟೀಲರೇ ಸ್ಪರ್ಧಿಸಲಿದ್ದಾರೆ. ಅವರ ಗೆಲುವಿಗೆ ನಾವೆಲ್ಲರೂ ಶ್ರಮಿಸಲಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಕುರಿತ ಸಚಿವ ಬಿ. ಶ್ರೀರಾಮುಲು ಹೇಳಿಕೆ

ಬಿಜೆಪಿಯ ಹಿರಿಯ ನಾಯಕರಾದ ಬಸವನಗೌಡ ತುರವಿ ಹಾಳ ಹಾಗೂ ಪ್ರತಾಪಗೌಡ ಪಾಟೀಲರ ನಡುವೆ ಸಂಧಾನ‌ ಮಾಡಲಾಗಿದೆ. ಬಸವನಗೌಡ ಅವರನ್ನು ಈಗಾಗಲೇ ಕಾಡಾ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಸಿಎಂ ಮತ್ತು ರಾಜೂಗೌಡ ಸೇರಿದಂತೆ ಇತರೆ ಮುಖಂಡರನ್ನೊಳಗೊಂಡ ಸಭೆಯನ್ನ‌ ನಡೆಸಿದ್ದು, ಬಸವನಗೌಡರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಿಕೊಡಲು ಮತ್ತಷ್ಟು ಪ್ರಯತ್ನಿಸುವುದಾಗಿ ತಿಳಿಸಿದರು.

ಬಿಜೆಪಿಯಲ್ಲಿ ಎಲ್ಲರೂ ಎತ್ತರಕ್ಕೆ ಬೆಳೆಯಲಿ: ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತರು ಕೂಡ ಎತ್ತರಕ್ಕೆ ಬೆಳೆಯಬೇಕು. ನಮ್ಮ ಶಾಂತಕ್ಕ ಆಗಲೀ ಅಥವಾ ಮತ್ತೊಬ್ಬರಾಗಲೀ ಶ್ರೀರಾಮುಲುಗಿಂತಲೂ ಎತ್ತರಕ್ಕೆ ಬೆಳೆಯಲಿ.‌ ನನಗೇನೂ ಅಭ್ಯಂತರ ಇಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.